FID check with mobile : ರೈತ ಮಿತ್ರರೇ ಬೆಳೆ ಹಾನಿ ಪರಿಹಾರ ಬೆಳೆ ವಿಮೆ, ಪಿಎಂ ಕಿಸಾನ್ ಹಣ ಜಮೆಯಾಗಲು ರೈತರ ಬಳಿ ಎಪ್ಐಡಿ ಇರುವುದು ಕಡ್ಡಾಯವಾಗಿದೆ. ಇದರೊಂದಿಗೆ ಇಕೆವೈಸಿ ಮಾಡಿಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ.
ನಿಮ್ಮ ಹೆಸರಿಗೆ ಎಫ್ಐಡಿ ಇರುವುದು ಇಲ್ಲೇ ಚೆಕ್ ಮಾಡಬಹುದು. ತಮಗೆಲ್ಲಾ ಗೊತ್ತಿದ್ದ ಹಾಗೆ ಅಕ್ಟೋಬರ್ ತಿಂಗಳಲ್ಲಿ ಪಿಎಂ ಕಿಸಾನ್ ಹಣ, ಬೆಳೆ ಹಾನಿ ಪರಿಹಾರ ಹಣ ಜಮೆಯಾಗುವ ಸಾಧ್ಯತೆಯಿದೆ. ಆದರೆ ಪಿಎಂ ಕಿಸಾನ್ ಹಣವಾಗಲಿ, ಬೆಳೆ ಹಾನಿ ಪರಿಹಾರವಾಗಲಿ ಅಥವಾ ಬೆಳೆ ವಿಮೆ ಹಣ ಜಮೆಯಾಗಲು ಪ್ರತಿಯೊಬ್ಬ ರೈತರು ಕೂಡಲೇ ಇಕೆವೈಸಿ ಮಾಡಿಕೊಳ್ಳಬೇಕು. ಹೌದು, ರೈತ ಮಿತ್ರರೇ ಇಕೆವೈಸಿ ಮಾಡಿಸಿಕೊಳ್ಳುವುದರೊಂದಿಗೆ ರೈತರು ಎಫ್ಐಡಿ ಕಾರ್ಡ್ ಪಡೆಯಲೇಬೇಕು. ಎಫ್ಐಡಿ ಕಾರ್ಡ್ ಏಕೆ ಬೇಕು ಎಫ್ಐಡಿ ಕಾರ್ಡ್ ಪಡೆಯಲು ರೈತರೇನು ಮಾಡಬೇಕು ಎಂಬುದು ಸೇರಿದಂತೆ ಇನ್ನಿತರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಎಫ್ಐಡಿ ಎನ್ನುವುದು ರೈತರಿಗೆ ನೀಡಲಾಗುವ ಒಂದು ವಿಶಿಷ್ಠ ಡಿಜಿಟಲ್ ಗುರುತಿನ ಸಂಖ್ಯೆಯಾಗಿದ್ದು, ರೈತರ ಆಧಾರ್ ಕಾರ್ಡ್, ಭೂ ದಾಖಲೆ, ಬ್ಯಾಂಕ್ ಖಾತೆ ಇತರ ಸಾಮಾಜಿಕ ದಾಖಲಾತಿಗಳನ್ನು ಒಂದೇ ಡಿಜಿಟಲ್ ವ್ಯವಸ್ಥೆಗೆ ಜೋಡಿಸಲಾಗುತ್ತಿದೆ. ಇದು ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಪಡೆಯಲು ಅತ್ಯಂತ ಮುಖ್ಯವಾಗಿದೆ.
ಪಿಎಂ ಕಿಸಾನ್ ಯೋಜನೆ ಸೇರಿದಂತೆ ಇತರ ಆರ್ಥಿಕ ನೆರವುಗಳನ್ನು ನೇರವಾಗಿ ರೈತರ ಬ್ಯಾಂಕುಗಳಿಗೆ ವರ್ಗಾವಣೆ ಮಾಡಲು ಎಪ್ಐಡಿ ಕಡ್ಡಾಯವಾಗಿದೆ. ಕೃಷಿ ಸಾಲ ಸೌಲಭ್ಯ ಪಡೆಯಲು ಮತ್ತು ಬೆಳೆ ವಿಮೆ ಮಾಡಿಸುವಾಗ ರೈತರ ಅರ್ಹತೆಯನ್ನು ಸುಲಭವಾಗಿ ಪರಿಶೀಲಿಸಲು ಎಫ್ಐಡಿ ಅವಶ್ಯವಾಗಿದೆ.
ಯೂರಿಯಾ ಪಡೆಯಲು, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ಇತರೆ ಯೋಜನೆಗಳ ಸೌಲಭ್ಯ ಪಡೆಯಲು ಎಫ್ಐಡಿ ಅವಶ್ಯ. ಇದರೊಂದಿಗೆ ಬೆಳೆ ಹಾನಿ ಪರಿಹಾರ ಪಡೆಯಲು ಎಫ್ಐಡಿ ಕಡ್ಡಾಯವಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಪ್ರಯೋಜನ ಪಡೆಯಲು ಎಫ್ಐಡಿ ಅವಶ್ಯವಿದೆ.
FID check with mobile ಎಫ್ಐಡಿ ಚೆಕ್ ಮಾಡುವುದು ಹೇಗೆ ?
ರೈತರು ತಮ್ಮ ಎಪ್ಐಡಿ ಚೆಕ್ ಮಾಡಲು ಈ
https://fruits.karnataka.gov.in/OnlineUserLogin.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಫ್ರೂಟ್ಸ್ ಐಡಿ ಚೆಕ್ ಮಾಡುವ ಹಾಗೂ ಎಫ್ಐಡಿ ನೋಂದಣಿ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ಇದಾದ ನಂತರ ನೀವು ಪಾಸ್ವರ್ಡ್ ನಮೂದಿಸಬೇಕು ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ನಿಮಗೆ ಫ್ರೂಟ್ಸ್ ಐಡಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಎಫ್ಐಡಿ ಸೇರಿದಂತೆ ಜಮೀನಿನ ಎಲ್ಲಾ ಮಾಹಿತಿಯನ್ನು ಪಡೆಯಬಹುದು.
ಒಂದು ವೇಳೆ ನಿಮಗೆ ಪಾಸ್ವರ್ಡ್ ನೆನಪಿಲ್ಲದಿದ್ದರೆ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ Reset Password ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರಿಗೆ ಪಾಸ್ವರ್ಡ್ ಕಳಿಸಲಾಗುವುದು. ಆ ಪಾಸ್ವರ್ಡ್ ನಮೂದಿಸಿ ಲಾಗಿನ್ ಮಾಡಿಕೊಳ್ಳಬೇಕು. ನಂತರ ನೀವು ಪಾಸ್ವರ್ಡ್ ನಿಮಗೆ ಬೇಕಾದಂತೆ ಬದಲಾಯಿಸಿಕೊಳ್ಳಬೇಕು. ಮೊದಲು ಹಳೆಯ ಪಾಸ್ವರ್ಡ್ ಅಂದರೆ ನಿಮ್ಮ ಮೊಬೈಲಿಗೆ ಬಂದ ಪಾಸ್ವರ್ಡ್ ಹಾಕಬೇಕು. ಇದಾದ ನಂತರ ನೀವು ಹೊಸದಾಗಿ ಕ್ರಿಯೇಟ್ ಮಾಡಿದ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಬೇಕು. ಆಗ ನಿಮ್ಮ ಮೊಬೈಲಿಗೆ ಮತ್ತೇ ಓಟಿಪಿ ಬರುತ್ತದೆ. ಅದನ್ನು ನಮೂದಿಸಿ ಲಾಗಿನ್ ಆಗಬೇಕು. ನಂತರ ನೀವು ಫ್ರೂಟ್ಸ್ ಐಡಿಯಲ್ಲಿ ಯಾವ ಯಾವ ಮಾಹಿತಿಗಳನ್ನು ಚೆಕ್ ಮಾಡಬಹುದು ಎಂಬ ಪೇಜ್ ತೆರೆದುಕೊಳ್ಳುತ್ತದೆ.
ಇದನ್ನೂ ಓದಿ ಪಿಎಂ ಕಿಸಾನ್ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿ
ಸರ್ಚ್ ಮೇಲೆ ಕ್ಲಿಕ್ ಮಾಡಿ ರೆಜಿಸ್ಟ್ರೇಷನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದರೆ ಸಾಕು ಫ್ರೂಟ್ಸ್ ಐಡಿ ನಿಮ್ಮ ಹೆಸರು ಅಪ್ಲಿಕೇಶನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಪೇಮೆಂಟ್ ಡಿಟೇಲ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ನಿಮಗೆ ಹಣ ಜಮೆಯಾಗಿರುವ ಸ್ಟೇಟಸ್ ಕಾಣಿಸುತ್ತದೆ.
ಒಂದು ವೇಳೆ ನೀವು ಪಾಸ್ವರ್ಡ್ ಮರೆತುಹೋಗಿದ್ದರೆ ರಿಸೆಟ್ ಪಾಸ್ವರ್ಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಹೊಸ ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಳ್ಳಬಹುದು.





