ಬೆಳೆವಿಮೆ ಪ್ರಿಮಿಯಂ ಕಟ್ಟಲು ಕಡೆಯ ದಿನಾಂಕವನ್ನು ನಿಗದಿಪಡಿಸಿರುವಂತೆಯೇ ಬೆಳೆ ವಿಮೆ ಪರಿಹಾರ ನೀಡಲು ಕಡೆಯ ದಿನಾಂಕ ನಿಗದಿಪಡಿಸಬೇಕೆಂಬುದು ಸೇರಿದಂತೆ ಇನ್ನಿತರ ಬೇಡಿಕೆಗೆ ರೈತರು ಒತ್ತಾಯಿಸಿದರು.

ಹೌದು, ಕಿಸಾನ್ ಭಾಗೀದಾರಿ ಪ್ರಾಥಮಿಕ ಅಭಿಯಾನದಡಿ ರೈತರಿಗೆ ಫಸಲ್ ಬಿಮಾ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ತಿಳಿಸಲು ಹಾಗೂ ರೈತರಿಗೆ ಈ ಯೋಜನೆಯ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಲು  ಫಸಲ್ ಬಿಮಾ ಪಾಠಶಾಲೆ ಕಾರ್ಯಕ್ರಮದ ಅಂಗವಾಗಿ ಹೊಸದುರ್ಗ ತಾಲೂಕಿನ ಹುಣವಿನಡು ಗ್ರಾಪಂನಲ್ಲಿ ಆಯೋಜಿಸಲಾಗಿದ್ದ ವೀಡಿಯೋ ಕಾನ್ಫರೆನ್ಸ್ ನಲ್ಲಿ ರೈತರು ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವ ನರೇಂದ್ರಸಿಂಗ್ ತೋಮರ್ ರವರಿಗೆ ಒತ್ತಾಯಿಸಿದರು.

ಬೆಳೆವಿಮೆ  ಪ್ರಿಮಿಯಂ ಕಟ್ಟಲು ಕಡೆಯ ದಿನಾಂಕ ನಿಗದಿಪಡಿಸುತ್ತಾರೆ. ಒಂದು ದಿನ ತಡವಾದರೆ ಬೆಳೆವಿಮೆ ಹಣ ಕಟ್ಟಿಸಿಕೊಳ್ಳುವುದಿಲ್ಲ. ಆದರೆ ಬೆಳೆವಿಮೆ ಪರಿಹಾರ ನೀಡಲು ಯಾವುದೇ ದಿನಾಂಕ ನಿಗದಿಯಿಲ್ಲ. ರೈತರ ಬೆಳೆ ಹಾಳಾದಾಗ ಬೆಳೆ ವಿಮಾ ಕಂಪನಿಯವರು ಜಮೀನಿಗೆ ಬಂದು ಪರಿಶೀಲನೆ ನಡೆಸುತ್ತಾರೆ. ಆದರೆ ಬೆಳೆ ವಿಮಾ ಹಣ ಪಾವತಿಸಲು ಸತಾಯಿಸುತ್ತಾರೆ.  ಕೆಲವು ಸಲ ಒಂದೆರಡು ವರ್ಷ ಕಾಲ ಬೇಕಾಗುತ್ತದೆ. ಹೀಗಾದರೆ ಬೆಳೆವಿಮೆ ಹಣ ಕಟ್ಟುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಬೆಳೆವಿಮೆ ನಷ್ಟ ಪರಿಹಾರವನ್ನು ಇತ್ಯರ್ಥ ಪಡಿಸುವಾಗಿ ಪ್ರಾರಂಭಿಕ ಇಳುವರಿ ಲೆಕ್ಕ ಹಾಕುವಾಗ ಹಿಂದಿನ 7 ವರ್ಷಗಳಲ್ಲಿ ಉತ್ತಮ 5 ವರ್ಷಗಳ ಸರಾಸರಿ ಇಳುವರಿಯನ್ನು ಪರಿಗಣಿಸುವ ಬದಲು ಸಂಭಾವ್ಯ ಬೆಳೆ ಇಳುವರಿಯನ್ನು ಪರಿಗಣಿಸಬೇಕು. ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು, ಮಳೆ, ಬೆಳೆ ಮುಳುಗಡೆ ಆದ ಸಂದರ್ಭದಲ್ಲಿ ಬೆಳೆ ವಿವರದ ಹಾನಿಯ ವ್ಯಾಪ್ತಿ ಹಾಗೂ ಕಾರಣಗಳನ್ನು 72 ಗಂಟೆಗಳೊಳಗೆ ತಿಳಿಸಬೇಕು ಎಂದು ಇರುತ್ತದೆ. ಆದರೆ ಈ ಸಮಯವನ್ನು 144 ಗಂಟೆಗಳಿಗೆ ವಿಸ್ತರಿಸಬೇಕು. ಜಿಲ್ಲಾಧಿಕಾರಿಗಳ ನೇತೃತ್ವದ ಮಧ್ಯಂತರ ಬೆಳೆ ವಿಮಾ ಪರಿಹಾರ ಘೋಷಣಾ ಸಮಿತಿ ಸಭೆಗೆ ಗ್ರಾಪಂ ಅಧ್ಯಕ್ಷರನ್ನು ಸೇರ್ಪಡೆ ಮಾಡವುದಲ್ಲದೆ ಬ್ಯಾಂಕುಗಳುವಿಮೆ ಕಂತು ಕಟ್ಟಿದ ರೈತರಿಗೆ ಆಹ್ವಾನಿಸಬೇಕು. ಬೆಳೆವಿಮೆ ತಿರಸ್ಕರಿಸಿದ ಕಾರಣ ಸರಿಪಡಿಸಿ ಮರು ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ: ಪಿಎಂ ಕಿಸಾನ್ ಗ್ರಾಮವಾರು ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಚೆಕ್ ಮಾಡಿ

ರೈತರು ಏಕ ರೂಪದ ಬೆಳೆ ಬೆಳೆಯದೆ ಬೆಳೆ ವೈವಿದ್ಯತೆ ಮಾಡಿಕೊಂಡಲ್ಲಿ ಮಾರುಕಟ್ಟೆಯಲ್ಲಾಗುವ ಬೆಲೆ ಏರಿಳಿತನದ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವ ನರೇಂದ್ರಸಿಂಗ್ ತೋಮರ್ ಹೇಳಿದರು.ಅವರು ಫಸಲ್ ಬಿಮಾ ಪಾಠಶಾಲೆ ಕಾರ್ಯಕ್ರಮದ ವೀಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಒಟ್ಟು 14 ಕೋಟಿ ರೈತರಿದ್ದು, ಫಸಲ್ ಬಿಮಾ ಯೋಜನೆಯಡಿ 21 ಸಾವಿರ ಕೋಟಿ ರೈತರ ವಂತಿಕೆ ಸಂಗ್ರವಾಗಿದೆ. ಇದರಲ್ಲಿ ರೈತರ ಬೆಳೆ ನಷ್ಟವಾಗಿರುವುದಕ್ಕೆ ಬೆಳೆ ವಿಮೆ ಪರಿಹಾರವಾಗಿ 1,15,000 ಕೋಟಿ ರೂಪಾಯಿ ಹಣವನ್ನು ರೈತರಿಗೆ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕೃಷಿ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಪ್ರಧಾನಮಂತಾ್ರಿ ಫಸಲ್ ಬಿಮಾ ಯೋಜನೆಯನ್ನು 2016-17ನೇ ಸಾಲಿನಿಂದ ಪ್ರಧಾನಿ ನರೇಂದ್ರಮೋದಿಯವರು ಅನುಷ್ಟಾನಗೊಳಿಸಿದ್ದಾರೆ. ಇದುವರೆಗೂ ಈ ಯೋಜನೆ ಯಶಸ್ವಿಯಾಗಿದೆ. ಈವರೆಗೆ ಸಂವಾದ ಕಾರ್ಯಕ್ರಮದಲ್ಲಿ ರೈತರು ಇಟ್ಟಿರುವ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಈಡೇರಿಸುವ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *