ರೈತರಿಗೆ  ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳು ಸಬ್ಸಿಡಿಯಲ್ಲಿ  ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯಿಂದಷ್ಟೇ ಅಲ್ಲ, ರೈತ ಸಂಪರ್ಕ ಕೇಂದ್ರಗಳಿಂದಲೂ ಸಿಗುತ್ತವೆ. ಹೌದು, ಒಂದೇ ಸೂರಿನಡಿಯಲ್ಲಿ ರೈತರಿಗೆ ಹಲವು ಸೌಲಭ್ಯಗಳು ಸಿಗಲೆಂದು ಸರ್ಕಾರವು ಹೋಬಳಿಗೊಂದು ರೈತ ಸಂಪರ್ಕ ಕೇಂದ್ರಗಳನ್ನು ಆರಂಭಿಸಿದೆ. ಈ ಕೇಂದ್ರಗಳಿಗೆ ಆರ್.ಎಸ್.ಕೆ (RSK) ಎಂದು ಸಹ ಕರೆಯಲಾಗುವುದು.

ಸಬ್ಸಿಡಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಪಡೆಯಲು  ರೈತರು ಜಿಲ್ಲಾ ಅಥವಾ ತಾಲೂಕು ಕೇಂದ್ರಗಳಿಗೆ ಅಲೆಯುವ ಅಗತ್ಯವಿಲ್ಲ. ಹತ್ತಿರದ ಹೋಬಳಿ ಕೇಂದ್ರಗಳಲ್ಲಿಯೇ ತಮಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ಪಡೆಯಬಹುದು.

ಬಿತ್ತನೆಯಿಂದ ಹಿಡಿದು ಬೆಳ ಕಟಾವುವರೆಗೂ ಬೇಕಾಗುವ ಎಲ್ಲಾ ಕೃಷಿ ಯಂತ್ರೋಪಕರಣಗಳು ಇಲ್ಲಿಸಿಗುತ್ತವೆ. ಕೃಷಿ ವಿಶ್ವವಿದ್ಯಾಲಯಗಳಿಂದ ಅಭಿವೃದ್ಧಿಪಡಿಸಿದ ಬೀಜಗಳು,  ಸುಧಾರಿತ ತಳಿಗಳು,  ಲಘು ಪೋಷಕಾಂಶಗಳು, ಜೈವಿಕ ಗೊಬ್ಬರಗಳನ್ನು ಶೇ. 70 ರಷ್ಟು ಸಬ್ಸಿಡಿಯಲ್ಲಿ ಪಡೆಯಬಹುದು. ಆಯಾ ಪ್ರದೇಶಕ್ಕನುಗುಣವಾಗಿ ಬೇಕಾಗುವ ಬೀಜಗಳು ಹಾಗೂ ಆಧುನಿಕ ಕೃಷಿ ಯಂತ್ರೋಪಕರಣಗಳು ಸಿಗುತ್ತವೆ.

ಯಾವ ರೈತರಿಗೆ ಎಷ್ಟು ಸಬ್ಸಿಡಿ  ಸಿಗುತ್ತದೆ?

ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆಗೆ ಬೇಕಾಗುವ ಬೀಜಗಳು, ಕೃಷಿ ಯಂತ್ರೋಪಕರಣಗಳು ಸಬ್ಸಿಡಿಯಲ್ಲಿ ಸಿಗುತ್ತವೆ.  ರೈತರಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ. 50 ರಷ್ಟು, ಪರಿಶಿಷ್ಟ  ಜಾತಿ ಮತ್ತು ಪರಿಶಿಷ್ಟ ಪಂಗಡದವರೆಗೆ ಶೇ. 90 ರಷ್ಟು ಸಹಾಯಧನ ಸಿಗುತ್ತದೆ.

ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಸಿಗುವ ಯಂತ್ರೋಪಕರಣಗಳು 

ಈ ಯೋಜನೆಯಡಿಯಲ್ಲಿ ರೈತರಿಗೆ ಸಣ್ಣ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಭೂಮಿ ಸಿದ್ದತೆ ಉಪಕರಣಗಳು, ನಾಟಿ ಬಿತ್ತನೆ ಉಪಕರಣಗಳು, ಕುಯ್ಲು ಮತ್ತು ಒಕ್ಕಣೆ ಉಪಕರಣಗಳು, ಡೀಸೆಲ್ ಪಂಪ್ ಸೆಟ್, ಅಂತರ್ ಬೇಸಾಯ ಉಪಕರಣಗಳು ಸಿಗುತ್ತವೆ.  ಸಾಮಾನ್ಯ ವರ್ಗದವರೆಗೆ  ಗರಿಷ್ಟ ಒಂದು ಲಕ್ಷ ರೂಪಾಯಿಯವರೆಗೆ ಸಹಾಯಧನ ಸಿಗುತ್ತದೆ.ಅದೇ ರೀತಿ ಪರಿಶಿಷ್ಟ  ಜಾತಿ ಮತ್ತು ಪರಿಶಿಷ್ಟ ಪಂಗಡದವರೆಗೆ  ಗರಿಷ್ಟ 3 ಲಕ್ಷ ರೂಪಾಯಿಯವರೆ ಗೆಸಹಾಯಧನ ನೀಡಲಾಗುವುದು.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿಯೂ ಸಿಗಲಿದೆ ಸಬ್ಸಿಡಿ

ರೈತರಲ್ಲಿ ನೀರಿನ ಮಿತ ಬಳಕೆ ಮಾಡುವಂತೆ ಪ್ರೋತ್ಸಾಹಿಸುವುದಕ್ಕಾಗಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಯನ್ನು ಆರಂಭಿಸಲಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ಲಭ್ಯವಿರುವ ನೀರನ್ನು ಸಮರ್ಥಬಳಕೆ ಮಾಡುವಲ್ಲಿ ಅನುವಾಗುವಂತೆ ಸೂಕ್ಷ್ಮ ನೀರಾವರಿ ಘಟಕಗಳಾದ ತುಂತುರು ನೀರಾವರಿ ಘಟಕ ಮತ್ತು ಹನಿ ನೀರಾವರಿ ಘಟಕಗಳನ್ನು ಸಬ್ಸಿಡಿಯಲ್ಲಿ ನೀಡಲಾಗುವುದು. ರೈತರಿಗೆ 2 ಹೆಕ್ಟೇರ್  ಪ್ರದೇಶದವರಿಗೆ ಶೇ. 90 ರಷ್ಟು ಸಹಾಯಧನ  ನೀಡಲಾಗುವುದು.

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯಡಿ ಬೇರೆ ರಾಜ್ಯದ ರೈತರಿಗೆ 6 ಸಾವಿರ ಜಮೆಯಾದರೆ ಕರ್ನಾಟಕದ ರೈತರಿಗೆ 10 ಸಾವಿರ ಜಮೆ- ಇಲ್ಲಿದೆ ಮಾಹಿತಿ

ನೀರು ದೊರೆಯುವ ಸ್ಥಳದಿಂದ ನೀರು ಹರಿಸುವ ಪೈಪುಗಳನ್ನು ನೀಡಲಾಗುವುದು. ಶೇ. 50 ರಿಂದ 75ರವರೆಗೆ ಪಿವಿಸಿ ಪೈಪ್ ಗಳಿಗೆ ಸಬ್ಸಿಡಿ ನೀಡಲಾಗುವುದು. ತುಂತುರು, ಹನಿ ನೀರಾವರಿ ಘಟಕಕ್ಕಾಗಿ ರೈತರಿಗೆ ಸಹಾಯಧನ ನೀಡಲಾಗುವುದು.

ಸಹಾಯಧನ ಪಡೆಯಲು ಬೇಕಾಗುವ  ದಾಖಲೆಗಳು

ರೈತ ಸಂಪರ್ಕ ಕೇಂದ್ರಗಳಿಂದ ರೈತರು ಸಬ್ಸಿಡಿಯಲ್ಲಿ ಬೀಜಗಳು, ಕೃಷಿ ಯಂತ್ರೋಪಕರಣಗಳನ್ನು  ಪಡೆಯಯಲು ಆಧಾರ್ ಕಾರ್ಡ್ ಹೊಂದಿರಬೇಕು. ಬ್ಯಾಂಕ್ ಪಾಸ್ ಬುಕ್ ಇರಬೇಕು. ಪರಿಶಿಷ್ಟ  ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಇತ್ತೀಚಿನ ಫೋಟೋ ಹಾಗೂ  ಜಮೀನಿನ ಪಹಣಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಹೊಂದಿರಬೇಕು.

ಎಲ್ಲಿ ಸಂಪರ್ಕಿಸಬೇಕು?

ರೈತರು ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ಪಡೆಯಲು ತಮ್ಮ ವ್ಯಾಪ್ತಿಯಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು. ಅಲ್ಲಿ ಲಭ್ಯತೆಯ ಆಧಾರದ ಮೇಲೆ ರೈತರಿಗೆ ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ನೀಡಲಾಗುವುದು.

ಇದನ್ನೂ ಓದಿ:  ಜಮೀನುಗಳ ಸರ್ವೆ ನಂಬರ್ ಸಹಿತ ಬಂಡಿದಾರಿ, ಹಳ್ಳಕೊಳ್ಳಗಳ ಮ್ಯಾಪ್ ಬೇಕೆ? ಇಲ್ಲಿದೆ ಮಾಹಿತಿ

Leave a Reply

Your email address will not be published. Required fields are marked *