ಅರ್ಜಿ ಹಾಕಿದ ಎರಡೇ ದಿನದಲ್ಲಿ ರೈತರಿಗೆ ಸಾಲ

Written by By: janajagran

Updated on:

Farmer will get crop loan  ಸಾಲಕ್ಕಾಗಿ ಜಮೀನಿನ ಮಾರ್ಟ್ ಗೇಜ್ ಮಾಡಿಸಲು ನೋಂದಣಾಧಿಕಾರಿಗಳ ಕಚೇರಿಗೆ ರೈತರ ಅಲೆದಾಟ ತಪ್ಪಿಸಲು ಫ್ರೂಟ್ಸ್ ತಂತ್ರಾಂಶ ಬಳಿ ಅರ್ಜಿ ಹಾಕಿದ 48 ಗಂಟೆಗಳಲ್ಲಿ ರೈತರಿಗೆ ಸಾಲ ವಿತರಿಸಿದಾಗ ಮಾತ್ರ ಸಹಕಾರಿ ವ್ಯವಸ್ಥೆಗೆ ಗೌರವ ಬರುತ್ತದೆ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ಅವರು ಶನಿವಾರ ಡಿಸಿಸಿ ಬ್ಯಾಂಕ್ ವತಿಯಿಂದ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ಹಣಾಧಿಕಾರಿಗಳು, ಗಣಕಯಂತ್ರ ಸಹಾಯಕರು ಮತ್ತು ಬ್ಯಾಂಕ್ ಸಿಬ್ಬಂದಿಗೆ ಸಾಲ ವಿತರಣೆಗಾಗಿ ಫ್ರೂಟ್ಸ್ ಅಥವಾ ರೈತರ  ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆಯ ತಂತ್ರಾಂಶ ಬಳಕೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಾರ್ಟ್ ಗೇಜ್ ಗಾಗಿ ಇನ್ನೂ ಮುಂದೆ ಕಾಯಬೇಕಿಲ್ಲ. ಜಮೀನು ಅಡಮಾನಕ್ಕೆ ಫ್ರೂಟ್ಸ್ ತಂತ್ರಾಂಶ ಬಳಸಬೇಕು. ರೈತರು ಬೆಳೆಸಾಲ ಪಡೆಯಲು ತಮ್ಮ ಜಮೀನಿನ ಮಾರ್ಟ್ ಗೇಜ್ ಗಾಗಿ ಸಬ್ ರಿಜಿಸ್ಟರ್  ಕಚೇರಿಗೆ ಅಲೆಯುವುದನ್ನು ತಪ್ಪಿಸಿ ಬ್ಯಾಂಕಿನಿಂದಲೇ ಫ್ರೂಟ್ಸ್ ತಂತ್ರಾಂಶದಲ್ಲಿ 24 ಗಂಟೆಗಳಲ್ಲಿ ಮಾರ್ಟ್ ಗೇಜ್ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇದು ರೈತರ ಸ್ನೇಹಿಯಾಗಿದೆ. ರೈತರಿಗೆ ಅರ್ಜಿ ಹಾಕಿದ ತಕ್ಷಣ ಸಾಲ ಸಿಗುತ್ತದೆ ಎಂಬ ನಂಬಿಕೆ ಬರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಬ್ಯಾಂಕ್ ಹಾಗೂ ಸಿಬ್ಬಂದಿಗಳು ಜವಾಬ್ದಾರಿವಹಿಸಿ ಕೆಲಸ ಮಾಡಬೇಕಿದೆ.  ರೈತರಿಗಾಗಿ ಕೆಲಸ ಮಾಡುವ ಮನಸ್ಥಿತಿ ಬದಲಾಗಬೇಕಿದೆ ಎಂದರು.

ರೈತರಲ್ಲಿ ಅರ್ಜಿ ಹಾಕಿದ ತಕ್ಷಣ ಸಾಲ ಸಿಗುತ್ತದೆ ಎಂಬ ನಂಬಿಕೆಬಲಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ಹಾಗೂ ಪ್ಯಾಕ್ಸ್ಗಳ ಸಿಬ್ಬಂದಿ ಜವಾಬ್ದಾರಿ ವಹಿಸಿ ಕೆಲಸ ಮಾಡಬೇಕಿದೆ. ರೈತರಿಗಾಗಿ ಕೆಲಸ ಮಾಡುವ ಜವಾಬ್ದಾರಿ ಬರದಿದ್ದರೆ ಮುಂದೆ ಸಹಕಾರಿ ರಂಗ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ರೈತರು, ಗ್ರಾಹಕರಿಗೆ ಇನ್ನೂ ಹತ್ತಿರವಾಗಲು ಹೊಸ ಹೊಸ ಯೋಜನೆ, ತಂತ್ರಾಂಶಬಂದಾಗತರಬೇತಿ ಪಡೆದು ಅದನ್ನು ಅನುಷ್ಠಾನಗೊಳಿಸಿ ಬ್ಯಾಂಕಿನ ಗೌರವ ಹೆಚ್ಚಿಸಬೇಕು. ಫ್ರೂಟ್ಸ್ ತಂತ್ರಾಂಶ ರೈತರಿಗೆ ಸಬ್ ರೆಜಿಸ್ಟರ್ ಕಚೇರಿಗೆ ಅಲೆಯುವುದನ್ನು ತಪ್ಪಿಸುತ್ತದೆ. ಪ್ರತಿಯೊಬ್ಬ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಇದನ್ನೂ ಓದಿ : ಈ ದಿನಾಂಕಕ್ಕೆ ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ಲಿಸ್ಟ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಬ್ಯಾಂಕಿನ ಹಿರಿಯ ನಿರ್ದೇಶಕ ಹನುಮಂತರೆಡ್ಡಿ ಮಾತನಾಡಿ, ಸಾಲಕ್ಕಾಗಿ ರೈತರು ತಮ್ಮ ಆಸ್ತಿಯನ್ನು ಮಾರ್ಟ್ ಗೇಜ್ ಮಾಡುವುದು ತುಂಬಾ ಸಮಸ್ಯೆಯಾಗಿತ್ತು.ಅಲ್ಲಿ ದಲ್ಲಾಳಿಗಳ ಹಾವಳಿಯೂ ಇತ್ತು. ಈಗ ಫ್ರೂಟ್ಸ್ ತಂತ್ರಾಂಶ ಬಂದನಂತರ ಈ ಸಮಸ್ಯೆ ದೂರವಾಗಿದೆ. ಇದನ್ನು ಕಾರ್ಯದರ್ಶಿಗಳು ಬದ್ದತೆಯಿಂದ ಜಾರಿಗೆ ತರಬೇಕೆಂದು ತಾಕೀತು ಮಾಡಿದರು.

Farmer will get crop loan  ಏನಿದು ಫ್ರೂಟ್ಸ್ ತಂತ್ರಾಂಶ?

ಫಾರ್ಮರ್ ರಿಜಿಸ್ಟ್ರೇಷನ್ ಆ್ಯಂಡ್ ಯೂನಿಫೈಡ್ ಬೆನಿಫಿಶಿಯರಿ ಇನ್ಫಾರ್ಮೇಷನ್ ಸಿಸ್ಟಂ (FRUITS) ತಂತ್ರಾಂಶವನ್ನು ರೈತರಿಗಾಗಿ ಅಭಿವೃದ್ಧಿಪಡಿಸಲಾಗಿದೆ. ರೈತರು ಸರ್ಕಾರದ ಸೌಲಭ್ಯ ಪಡೆಯಬೇಕಾದರೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಇಲ್ಲಿ ರೈತರು ಜಮೀನಿನ ಸರ್ವೆ ನಂಬರ್ ಸೇರಿದಂತೆ ಎಲ್ಲಾ ಮಾಹಿತಿಗಳು ಸಿಗುತ್ತವೆ.  ಪಿಎಂ ಕಿಸಾನ್ ಯೋಜಯ ಲಾಭ ಸೇರಿದಂತೆ ಸರ್ಕಾರದ ಇತರ ಯೋಜನೆಯ ಲಾಭ ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ನೋಂದಣಿ ಅಗತ್ಯವಾಗಿದೆ.

ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ನೋಂದಣಿಯಾದರೆ ಸರ್ಕಾರಿ ಸೌಲಭ್ಯ ಪಡೆಯಲು ಪ್ರತಿಬಾರಿ ರೈತರು ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ವಿವರ ಒದಗಿಸುವು ಅಗತ್ಯವಿಲ್ಲ. ಕೃಷಿ ಇಲಾಖೆಯೇ ಈಗ ರೈತರ ವಿವರಗಳನ್ನು ಸಂಗ್ರಹಿಸಿ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲೀಕರಣ ಮಾಡಿಕೊಳ್ಳುತ್ತಿದೆ. ಆದರೆ ಇನ್ನೂ ಕೆಲವು ರೈತರು ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿಲ್ಲ. ಅಂತಹ ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಳ್ಳಬಹುದು.

ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಂಡರೆ ರೈತರಿಗೆ ಬಿತ್ತನೆ ಬೀಜ, ಕೀಟನಾಶಕ, ಸಾವಯವ ಗೊಬ್ಬರ, ಕೃಷಿ ಯಂತ್ರೋಪಕರಣಗಳು ಸಹಾಯಧನದಲ್ಲಿ ಸಿಗುತ್ತವೆ.

Leave a Comment