ಹಸಿರುಮನೆ ನಿರ್ಮಾಣಕ್ಕೆ 2.40 ಲಕ್ಷ ಸಬ್ಸಿಡಿ

Written by Ramlinganna

Updated on:

farmer will get 2.4 lakh subsidies ತೋಟಗಾರಿಕೆ ಇಲಾಖೆಯ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ (ಆರ್.ಕೆ.ವಿ.ವೈ) ಹಸಿರು ಮನೆ ನಿರ್ಮಾಣಕ್ಕೆ 2.40 ಲಕ್ಷ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು,2022-23ನೇ ಸಾಲಿಗೆ ತೋಟಗಾರಿಕೆ ಇಲಾಖೆಯಿಂದ ಹಸಿರುಮನೆ ನಿರ್ಮಾಣಕ್ಕೆ ಸಹಾಯಧನ ನೀಡಲು ಚಾಮರಾಜನಗರ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಸುರಂಗ ಮಾದರಿ ಹಸಿರುಮನೆ ನಿರ್ಮಿಸಲು ರೈತರಿಗೆ ಶೇ. 50 ರಂತೆ ಪ್ರತಿ ಚದರ ಮೀಟರ್ ಗೆ 300 ರೂಪಾಯಿ ಸಹಾಯಧನ ನೀಡಲು ಅವಕಾಶವಿದೆ. ಒಬ್ಬ ರೈತರಿಗೆ ಗರಿಷ್ಠ 800 ಚದರ ಮೀಟರ್ ವಿಸ್ತೀರ್ಣ ಘಟಕಕ್ಕೆ 2.40 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು. ಸದರಿ ಘಟಕವು ವಾತಾವರಣದಲ್ಲಿ ಆಗುವ ಬದಲಾವಣೆಯಿಂದ ಬೆಳಗಳಿಗೆ ಹಾನಿಯಾಗುವುದನ್ನು ತಪ್ಪಿಸಲು ಹಾಗೂ ವರ್ಷಪೂರ್ತಿ ಅಧಿಕ ಮೌಲ್ಯದ ತರಕಾರಿ, ಹೂವಿನ ಬೆಳೆಗಳನ್ನು ಬೆಳೆಯಲು ಮತ್ತು ಉತ್ತಮ ಗುಣಮಟ್ಟದ ಹೆಚ್ಚಿನ ಇಳುವರಿ ಪಡೆಯಲು ಸಹಕಾರಿಯಾಗಿದೆ. ಘಟಕವು 8 ಮೀಟರ್ ಆಗಲ, 20 ಮೀಟರ್ ಉದ್ದ (ಅನುಕೂಲಕ್ಕೆ ತಕ್ಕಂತೆ ಹೆಚ್ಚಿಸುವುದು) 3 ಮೀಟರ್ ಎತ್ತರ ಹೊಂದಿರಬೇಕು.

ತೋಟಗಾರಿಕೆ ಇಲಾಖೆಯಿಂದ ಅನುಮೋದನೆಯಾದ ಏಜೆನ್ಸಿ, ಸಂಸ್ಥೆಗಳಿಂದ ಸುರಂಗ ಮಾದರಿ ಹಸಿರುಮನೆ ನಿರ್ಮಿಸಿ ಶೇ. 50 ರ ಸಹಾಯಧನ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಚಾಮರಾಜನಗರ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಮಾರ್ಗಸೂಚಿ ಪಡೆದು ಸದರಿ ಯೋಜನೆಯ ಸದುಪಯೋಗ ಪಡೆದು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

farmer will get 2.4 lakh subsidies ಪಾಲಿಹೌಸ್ ನಲ್ಲಿ ಯಾವ ಯಾವ ಬೆಳೆ ಬೆಳೆಯಬಹುದು?

ರೈತರ ಪಾಲಿಹೌಸ್ ನಿರ್ಮಾಣ ಮಾಡಿ ಅದರಲ್ಲಿ ತೋಟಗಾರಿಕೆ, ತರಕಾರಿ ಬೆಳೆಗಳನ್ನು ಬೆಳೆಯಬಹುದು. ಮಾವು, ಗೋಡಂಬಿ, ಸಪೋಟಾ, ನಿಂಬೆ, ಸೀತಾಫಲ, ನೆರಳೆಸೇರಿದಂತೆ ಇನ್ನತರ ತೋಟಗಾರಿಕೆ ಬೆಳೆಗಳ ನರ್ಸರಿ ಸಹ ಮಾಡಬಹುದು.

ಇದನ್ನೂ ಓದಿ : ಐದು ದಿನ ಮುಂಚೆ ಮಳೆ ಮಾಹಿತಿ ಬೇಕೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಪಾಲಿಪೌಸ್ ನಲ್ಲಿ ಬೆಳೆದ ಬೆಳೆಗಳು ಉತ್ತಮ ಗುಣಮಟ್ಟದ ಹಾಗೂ ಹೆಚ್ಚು ಇಳುವರಿ ನೀಡುತ್ತದೆ. ನೀರಿನ ಬಳಕೆ ಕಡಿಮೆಯಾಗುತ್ತದೆ. ಕಳೆಯ ಬಾಧೆ ಕಡಿಮೆಯಾಗುತ್ತದೆ. ರೋಗ ಮತ್ತು ಕೀಟಗಳ ಹತೋಟಿ ಮಾಡುವುದು ತುಂಬಾ ಸುಲಭವಾಗುತ್ತದೆ. ಎಲ್ಲಾ ಕಾಲಕ್ಕೂ ಉತ್ತಮ ಗುಣಮಟ್ಟದ ತರಕಾರಿ ಬೆಳೆಯಬಹುದು.

ಬೆಳೆಗಳಿಗೆ ರಕ್ಷಣೆ ಸಿಗಲಿದೆ

ಅಕಾಲಿಕ ಮಳೆ, ಬಿರುಗಾಳಿ ಸಹಿತಮಳೆ, ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ರಕ್ಷಣೆ ಸಿಗಲಿದೆ. ಶೇ. 30 ರಿಂದ 40 ರಷ್ಟು ನೀರು ಮತ್ತು ಗೊಬ್ಬರ ಉಳಿತಾಯ ಮಾಡಿ ಶೇ. 30 ರಷ್ಟು ಹೆಚ್ಚಿನ ಇಳುವರಿ ತೆಗೆಯಬಹುದು.

ಪಾಲಿಹೌಸ್ ನಿರ್ಮಾಣಕ್ಕೆ ಸಹಾಯಧನ ಪಡೆಯಲು ಯಾವ ಯಾವ ದಾಖಲೆ ಬೇಕು?

ಪಾಲಿಹೌಸ್ ನಿರ್ಮಾಣಕ್ಕೆ ಸಹಾಯಧನ ಪಡೆಯಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಇರಬೇಕು.  ಜಮೀನಿನ ಪಹಣಿ ಇರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು. ಪಾಸ್ ಪೋರ್ಟ್ ಸೈಜಿನ ಭಾವಚಿತ್ರ ಇರಬೇಕು. ಅರ್ಜಿಯೊಂದಿಗೆ ಅಗತ್ಯ ಇನ್ನಿತರ ದಾಖಲೆಗಳನ್ನು ರೈತರು ತೋಟಗಾರಿಕೆ ಇಲಾಖೆಯ ಸಂಬಂಧಿಸಿದ ಅಧಿಕಾರಿಗೊಳೊಂದಿಗೆ ಚರ್ಚಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು.

ಅನುದಾನದ ಲಭ್ಯತೆಯ ಮೇರೆಗೆ ಅರ್ಹ ರೈತರಿಗೆ ಸಹಾಯಧನವನ್ನು ಇಲಾಖೆ ಮಾರ್ಗಸೂಚಿಯನ್ವಯ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ತೋಟಗಾರಿಕೆ ಅಧಿಕಾರಿಗಳಿಗೆ ಸಂಪರ್ಕಿಸಬಹುದು.

Leave a Comment