ರೈತರ ಬಳಿ ಈ ಗುರುತಿನ ಚೀಟಿ ಇದ್ದರೆ ಮಾತ್ರ ಬರಗಾಲ ಪರಿಹಾರ ಜಮೆ

Written by Ramlinganna

Updated on:

Farmer identity card : ರೈತರ ಬಳಿ ಎಫ್ಐಡಿ ಕಾರ್ಡ್ ಅಂದರೆ ರೈತರು ಗುರುತಿನ ಚೀಟಿ ಇದ್ದರೆ ಮಾತ್ರ ಬೆಳೆ ಹಾನಿ ಪರಿಹಾರ ಹಣ ಜಮೆಯಾಗುವುದು.

ಹೌದು,  ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ರೈತನ ಗುರುತಿನ ಚೀಟಿ (ಎಫ್ಐಡಿ) ಮಾಡಿಸಿಕೊಳ್ಳಬೇಕು. ಎಫ್ಐಡಿ ಈಗಾಗಲೇ ಇದ್ದಲ್ಲಿ ಎಫ್ಐಡಿಯಲ್ಲಿ ನಿಮಗೆ ಸಂಬಂಧಿಸಿದ ಎಲ್ಲಾ ಜಮೀನುಗಳ ಸರ್ವೆ ನಂಬರ್ ಗಳು ಜೋಡಣೆಯಾಗಿದೆಯೋ ಇಲ್ಲವೋ ಎಂದು  ಪರಿಶೀಲಿಸಿಕೊಳ್ಳಬಹುದು. ಜಂಟಿ ಖಾತೆದಾರರು ಇದ್ದಲ್ಲಿ ಪ್ರತಿ ಒಬ್ಬ ಜಂಟಿ ಖಾತೆದಾರರು ಪ್ರತ್ಯೇಕವಾಗಿ ಎಫ್ಐಡಿ ಮಾಡಿಕೊಳ್ಳಬೇಕು. ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಬುಕ್, ದೂರವಾಣಿ ಸಂಖ್ಯೆ, ಎಸ್.ಸಿ, ಎಸ್.ಟಿ ಗೆ ಸೇರಿದ ರೈತರು ಜಾತಿ ಪ್ರಮಾಣ ಪತ್ರ ಒದಗಿಸುವುದು. ಎಫ್ಐಡಿ ಮಾಡಿಸದೆ ಇದ್ದಲ್ಲಿ ರೈತರಿಗೆ ಬರುವ ಬೆಳೆವಿಮೆ, ಬೆಳೆ ನಷ್ಟ  ಪರಿಹಾರದ ಹಣ ರೈತರ ಖಾತೆಗೆ ಜಮೆ ಆಗುವುದಿಲ್ಲ. ಹಾಗಾಗಿ ರೈತರ ಬಳಿ ಗುರುತಿನ ಚೀಟಿ ಇರುವುದು ಕಡ್ಡಾಯವಾಗಿದೆ.

ಸರ್ಕಾರವು ರೈತರ ಅನುಕೂಲಕ್ಕಾಗಿ ಕೃಷಿ ಮತ್ತು ಕೃಷಿ ಸಂಬಂಧಿಸಿದಮೂಲಕ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ರೈತರು ಈ ಯೋಜನೆಯ ಸವಲತ್ತು ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ಆಧಾರ್ ಕಾರ್ಡ್, ಬ್ಯಾಂಕ್ ಪುಸ್ತಕ ಜಾತಿ ದೃಢೀಕರಣ ಪತ್ರ, ರೇಶನ್ ಕಾರ್ಡ್, ಫೋಟ ಹಾಗೂ ಜಮೀನಿನ ಪಹಣಿ ಇತ್ಯಾದಿ ದಾಖಲಾತಿಗಳೊಂದಿಗೆ ನೋಂದಾಯಿಸಿಕೊಂಡು ಫ್ರೂಟ್ಸ್ ಐಡಿ ಪಡೆದುಕೊಳ್ಳಬೇಕು.

ಇದನ್ನೂ ಓದಿ : ನಿಮ್ಮ ಜಮೀನಿನ ಮೇಲೆ ಸಾಲವೆಷ್ಟಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಫ್ರೂಟ್ಸ್ ಐಡಿಯೊಂದಿಗೆ ಸೇರ್ಪಡೆಯಾಗದೆ ಇರುವ ಸರ್ವೆ ನಂಬರ್ ಗಳ ಸಾಗುವಳಿ ವಿಸ್ತೀರ್ಣವನ್ನು ಸೇರ್ಪಡೆಗೆ ಆಧಾರ್, ಬ್ಯಾಂಕ್ ಪಾಸ್ ಬುಕ್, ಪಹಣಿ ಪ್ರತಿಯೊಂದಿಗೆ ತಮ್ಮ ವ್ಯಾಪ್ತಿಯ ಕೃಷಿ, ಕಂದಾಯ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆ, ಸಹಕಾರ ಇಲಾಖೆಯ ಕಚೇರಿಗಳನ್ನುಸಂಪರ್ಕಿಸುವಂತೆ ಕೋರಲಾಗಿದೆ.

Farmer identity card ನಿಮ್ಮ ಹೆಸರಿಗೆ ಎಫ್ಐಡಿ ಆಗಿದೆಯೋ ಇಲ್ಲವೋ ಹೀಗೆ ಚೆಕ್ ಮಾಡಿ

ರೈತರು ತಮ್ಮ ಎಫ್ಐಡಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://fruitspmk.karnataka.gov.in/MISReport/GetDetailsByAadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಆಗಿದ್ದರೆ ಅಲ್ಲಿ ನಿಮ್ಮ ಹೆಸರು ಹಾಗೂ ಫ್ರೂಟ್ಸ್ ಐಡ ಕಾಣಿಸುತ್ತದೆ.

ಸಬ್ಸಿಡಿಯಲ್ಲಿ ಈ ಯಂತ್ರಗಳನ್ನು ಖರೀದಿಸಲು ಅರ್ಜಿ ಆಹ್ವಾನ

ಕೃಷಿ ಇಲಾಖೆಯಲ್ಲಿ ಕೃಷಿ ಸಂಸ್ಕರಣೆ ಯೋಜನೆಯಡಿ ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿ ಸಂಸ್ಕರಣ ಘಟಕಗಳಾದ ರಾಗಿ ಕ್ಲೀನಿಂಗ್ ಯಂತ್ರ, ಹಿಟ್ಟಿನ ಗಿರಣಿ, ಮೆಣಸಿನ ಕಾಯಿ ಪುಡಿ ಮಾಡುವ ಯಂತ್ರ, ಕಬ್ಬಿನ ಜ್ಯೂಸ್ ತಯಾರಿಕೆ ಯಂತ್ರ, ಎಣ್ಣೆ ಗಾಣ, ಪಲ್ವರೈಸರ್ ಗಳನ್ನು ಸಾಮಾನ್ಯ ರೈತರಿಗೆ ಶೇ. 50 ರಷ್ಟು ಹಾಗೂ ಎಸ್.ಸಿ.ಎಸ್.ಟಿ ರೈತರಿಗೆ ಶೇ. 90 ರಿಯಾಯಿತಿ ದರದಲ್ಲಿ ದೊರೆಯುತ್ತದೆ ಎಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸಹಕಾರ ಕೃಷಿ ನಿರ್ದೇಶಕ ಎಶ್. ಶಶೀಧರ್ ತಿಳಿಸಿದ್ದಾರೆ. ಆಸಕ್ತ ರೈತರು ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು.

ಈ ಮೇಲಿನ ಎಲ್ಲಾ ಸೌಲಭ್ಯ ಪಡೆಯಲು ರೈತರು ಎಫ್ಐಡಿ, ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಕರೆಂಟ್ ಬಿಲ್ ಪ್ರತಿ, ವ್ಯಾಪಾರಕ್ಕಾಗಿ ಮಿಲ್ ಇರುವ ರೈತರು ಗ್ರಾಮ ಪಂಚಾಯತ್ ದಿಂದ ಸಾಮಾನ್ಯ ಲೈಸನ್ಸ್, 20 ಛಾಪಾ ಕಾಗದಹಾಗೂ 3 ಪಾಸ್ಪೋರ್ಟ್ ಸೈಜ್ ಫೋಟೋದೊಂದಿಗೆ ಅರ್ಜಿಯನ್ನು ಪ್ರಕಟಣೆಯಲ್ಲಿ ಕೋರಿದ್ದಾರೆ

Leave a Comment