ಕಿಸಾನ್ ಡ್ರೋನ್ ಖರೀದಿಗೂ ರೈತರಿಗೆ ಸಿಗಲಿದೆ ಸಬ್ಸಿಡಿ

Written by By: janajagran

Updated on:

subsidy for purchase kisan Drone ಅದ್ದೂರಿಯಾಗಿ ನಡೆಯುವ ರಾಜಕೀಯ ಕಾರ್ಯಕ್ರಮಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಡ್ರೋನ್ ಗಳನ್ನೂ ಬಳಸುವದನ್ನು ನೋಡಿದ್ದೇವೆ. ಈಗ ರೈತರ ನೆರವಿಗೂ ಕಿಸಾನ್ ಡ್ರೋನ್ ಬರಲಿದೆ. ಹೌದು, ಬೆಳೆ ಆರೋಗ್ಯ ತಪಾಸಣೆ, ಔಷಧ, ಪೋಷಕಾಂಶಗಳ ಸಿಂಪರಣೆ, ಭೂ ದಾಖಲೆ ಡಿಜಿಟಲೀಕರಣಕ್ಕೂ ಕಿಸಾನ್ ಡ್ರೋನ್ ಬಳಕೆಯಾಗಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೃಷಿಗೆ ನೆರವಾಗಲು 100 ಸ್ವದೇಶಿ ಕಿಸಾನ್ ಡ್ರೋನ್ಗಳನ್ನು ಲೋಕಾರ್ಪಣೆ ಮಾಡಿದ್ದಾರೆ.  ಮುಂದಿನ ಎರಡು ವರ್ಷ  ಗಳಲ್ಲಿ 1 ಲಕ್ಷ ಡ್ರೋನ್ ಉತ್ಪಾದನೆ ಗುರಿ ಹೊಂದಲಾಗಿದೆ. ದೇಶದ ಅಲ್ಲಲ್ಲಿ  ಕಿಸಾನ್ ಡ್ರೋನ್ ಗಳು ಕೃಷಿಯಲ್ಲಿ  ಬಳಕೆಯಾಗುತ್ತಿವೆ. ಆದರೆ ಇದನ್ನೂ ದೇಶವ್ಯಾಪಿ ವಿಸ್ತರಿಸಲು ಕೇಂದ್ರ ಸರ್ಕಾರವು ಕಿಸಾನ್ ಡ್ರೋನ್ ಯೋಜನೆಯನ್ನು ಆರಂಭಿಸಿದೆ.

subsidy for purchase kisan Drone ಕಿಸಾನ್ ಡ್ರೋನ್ ಬೆಲೆ ಎಷ್ಟು?

ದೇಶದಲ್ಲಿ ಸದ್ಯ ಕಿಸಾನ್ ಡ್ರೋನ್ 1ಕ್ಕೆ 5 ರಿಂದ 10 ಲಕ್ಷ ರೂಪಾಯಿ ಬೆಲೆ ಇದೆ. ಈ ಕಿಸಾನ್ ಡ್ರೋನ್ ಖರೀದಿಸಲು ಇಚ್ಚಿಸುವ ರೈತ ಉತ್ಪಾದಕ ಸಂಸ್ಥೆಗಳಿಗೆ ಸರ್ಕಾರದಿಂದ ಶೇ. 75 ರಷ್ಟು ಸಬ್ಸಿಡಿ ಸಿಗುತ್ತದೆ.  ಈ ಡ್ರೋನ್ ಗಳನ್ನು ಪ್ರತಿ ಹೆಕ್ಟೇರಿಗೆ 6 ಸಾವಿರ ರೂಪಾಯಿಯಂತೆ ಪಾವತಿಸಿ ಪಡೆಯಬಹುದು.

ಕರ್ನಾಟಕದ ಯಾವ ಯಾವ ಜಿಲ್ಲೆಗಳಲ್ಲಿ ಕಿಸಾನ್ ಡ್ರೋನ್ ಯೋಜನೆಗೆ ಚಾಲನೆ ನೀಡಲಾಗಿದೆ?

ದೇಶದ 100 ಸ್ಥಳಗಳಲ್ಲಿ ಸದ್ಯ ಕಿಸಾನ್ ಡ್ರೋನ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಸದ್ಯ ಈ ಯೋಜನೆಯಡಿ ಯಾದಗಿರಿ, ತುಮಕೂರು, ಹಾಸದ ಗದಗ ಜಿಲ್ಲೆ ಸೇರಿವೆ

ಏನಿದು ಯೋಜನೆ?

ಕೃಷಿ ಕೆಲಸಗಳಇಗೆ ಇಂರ್ಟನೆಟ್ ಆಧಾರಿತ ಸ್ಮಾರ್ಟ್ ತಂತ್ರಜ್ಞಾನ ಹೊಂದಿದ ಡ್ರೋನ್ ಬಳಸುವ ಕಾರ್ಯಕ್ರಮ, ಇದರಿಂದ ರೈತರಿಗೆ ಸಮಯ ಉಳಿಯಲಿದೆ. ನಿಖರವಾಗಿ ಕೆಲಸ ನಡೆಯಲಿದೆ. ಕಾರ್ಮಿಕರ ಸಮಸ್ಯೆ ಇರುವ ಕೃಷಿ ಕ್ಷೇತ್ರಕ್ಕೆ ಉತ್ಪನ್ನ ಸಾಗಣೆಗೆ ಅನುಕೂಲವಾಗಲಿದೆ. ಬೆಳೆಗಳಿಗೆ ಕೀಟನಾಶಕ, ಪೋಷಕಾಂಶ ಸಿಂಪಡಣೆಯಿಂದ ಬೆಳೆಗಳ ಆರೋಗ್ಯದ  ಮೇಲೆ ನಿಗಾ ಇಡುವ ಕಾರ್ಯ ಮಾಡಲಿದೆ.

ಕಿಸಾನ್ ಡ್ರೋನ್ ಗಳ ಸಹಾಯದಿಂದ ಕೃಷಿಯಲ್ಲಿ ಹೊಸ ಕ್ರಾಂತಿ ಆರಂಭವಾಗಲಿದೆ. ಹಣ್ಣು, ತರಕಾರಿ, ಹೂವುಗಳು, ಮೀನುಗಳಂತಹ ಉತ್ಪನ್ನಗಳನ್ನು ಕಡಿಮೆ ಸಮಯದಲ್ಲಿ ಸಾಗಾಟ ಮಾಡಲು ಅನುಕೂಲವಾಗಲಿದೆ.

ಇದನ್ನೂ ಓದಿ :  ಬೆಳೆ ಸಾಲಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕಿಸಾನ್ ಡ್ರೋನ್ ಗಳು ಕೃಷಿ ಭೂಮಿಗಳಿಗೆ ಕೀಟನಾಶಕ ಸಿಂಪಡಿಸುವ ಡ್ರೋನ್ ಗಳಾಗಿವೆ. ಕಿಸಾನ್ ಡ್ರೋನ್ ಬಳಕೆಯಿಂದ ರೈತರಿಗೆ ತುಂಬಾ ಅನುಕೂಲವಾಗಲಿದೆ. ಆಧುನಿಕ ಕೃಷಿ  ಪದ್ಧತಿಯ ನಿರ್ಮಾಣದಲ್ಲಿ ಹೊಸ ಅಧ್ಯಾಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಆಶಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ದೇಶದ ವಿವಿಧ ನಗರಗಳು, ಪಟ್ಟಣಗಳಲ್ಲಿ ಏಕಕಾಲಕ್ಕೆ 100 ಡ್ರೋನ್ ಗಳಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಮಾತನಾಡಿದರು. ಈ ಮೊದಲು ಡ್ರೋನ್ ಗಳು ವೈರಿಗಳನ್ನು ಸದೆಬಡಿಯಲು ಯುದ್ದಗಳಲ್ಲಿ ಬಳಸಲಾಗುತ್ತಿತ್ತು ಆದರೆ ಈಗ ಆಧುನಿಕ ಕೃಷಿಯಲ್ಲಿಯೂ ಬಳಕೆಯಾಗುತ್ತಿದೆ. ಇದೊಂದು ಹೊಸ ಅಧ್ಯಾಯವೆಂದೇ ಅಭಿಪ್ರಾಯ ವ್ಯಕ್ತಪಡಿಸಿದರು.

ಡ್ರೋನ್ ಗಳು ವೈವಿದ್ಯಮಯ ಬಳಕೆಗಳನ್ನು ಹೊಂದಿವೆ. ಹಳ್ಳಿಗಳಲ್ಲಿ ಭೂ ಮಾಲಿಕತ್ವದ ದಾಖಲೆಗಳನ್ನು ರಚಿಸುವ ಮತ್ತು ಔಷಧಿಗಳು, ಲಸಿಕೆಗಳನ್ನು ಸಾಗಿಸುವ ಗುರಿಯನ್ನು ಹೊಂದಿದೆ.  ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ಸಮಯದಲ್ಲಿ ಮಾರುಕಟ್ಟೆಗೆ ಸಾಗಿಸುವ ಮೂಲಕ ಅವರ ಆದಾಯ ಹೆಚ್ಚಿಸಲಿದೆ. ಈ ಡ್ರೋನ್ ಗಳು ಕೃಷಿಯಲ್ಲಿ ಹೊಸ ಕ್ರಾಂತಿಗೆ ನಾಂದಿಯಾಗಿದೆ ಎಂದರು.

Leave a Comment