ದೇಶದಲ್ಲಿ ಈಗಲೂ ಸಹ ಎಷ್ಟೋ ರೈತರು ಭತ್ತ ಕೊಯ್ಲು ಮಾಡಿದ ನಂತರ ಹೊಲಗಳಿಗೆ ಬೆಂಕಿ ಹಚ್ಚುತ್ತಾರೆ. ಆದರೆ ಬೆಂಕಿ ಹಚ್ಚುವುದರಿಂದ ರೈತರಿಗೆ ಉಪಯೋಗಕ್ಕಿಂತ ರೈತರ ಹೊಲಗಳಿಗೆ (earn don’t burn paddy grass) ಹಾನಿಯೇ ಹೆಚ್ಚಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಕೆಲವು ರೈತರು ಭತ್ತವನ್ನು ಕೊಯ್ಲು ಮಾಡಿದ ನಂತರ ಭೂಮಿಯಲ್ಲಿಯೇ ಒಣಗಿರುವ ಕವಲಿಗೆ ಬೆಂಕಿ ಹಚ್ಚುವುದನ್ನು ಎಷ್ಟೋ ಕಡೆ ನೋಡಿದ್ದೇವೆ. ಆದರೆ ಬೆಂಕಿ ಹಚ್ಚುವುದರಿಂದ ಏನೇನು ಹಾನಿಯಾಗುತ್ತದೆ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಹೊಲಕ್ಕೆ ಬೆಂಕಿ ಹಚ್ಚುವುದರಿಂದ ಭೂಮಿಯಲ್ಲಿರುವ ಪರಿಸರ ಸ್ನೇಹಿ ಸೂಕ್ಷ್ಮಾಣು ಜೀವಿಗಳು ನಾಶವಾಗಿ ಭೂಮಿಯ ಫಲವತ್ತತೆಗೆ ಧಕ್ಕೆಯಾಗುತ್ತದೆ.ಹೊಗೆಯು ಗಾಳಿಯಲ್ಲಿ ಮಿಶ್ರಣವಾಗಿ ವಾತಾವರಣ ಹಾಳಾಗುತ್ತದೆ. ಮಣ್ಣಿನಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ. ಮಣ್ಣಿನ ಫಲವತ್ತತೆಯೂ ಕಡಿಮೆಯಾಗುತ್ತದೆ.
ಹುಲ್ಲಿಗೆ ಬೆಂಕಿ ಹಚ್ಚುವುದರ ಬದಲಾಗಿ ರೈತರೇನು ಮಾಡಬೇಕು.
ಜಾನುವಾರುಗಳಿಗೆ ಮೇವಿಗೆ ಹುಲ್ಲು ಸಂಗ್ರಹಿಸಿಟ್ಟುಕೊಳ್ಳಬೇಕು. ಕೊಯ್ಲು ಮಾಡಿದ ನಂತರ ಹಾಗೆಯೇ ಉಳಿದ ದಂಟನ್ನು ಬಿಡಬೇಕು. ನಂತರ ಗದ್ದೆಗೆ ನೀರು ಹರಿಸಬೇಕು. ಹೊಲದ ಮಡಿಗಳಲ್ಲಿ ನೀರು ತುಂಬಿದ ಬಳಿಕ ಪಡ್ಲರ್ ಹೊಡೆದರೆ ಭತ್ತದ ದಂಟು ಭೂಮಿಯೊಳಗೆ ಹೋಗಿ, ಕೊಳೆತು ಗೊಬ್ಬರವಾಗುತ್ತದೆ. ಇದರಿಂದ ಬೆಳೆಗಳಿಗೂ ಅನುಕೂಲವಾಗುವುದಲ್ಲದೆ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಭತ್ತದ ಹುಲ್ಲನ್ನು ಮಾರಾಟ ಮಾಡಬಹುದು. ಇದರಿಂದ ಲಾಭವೂ ಆಗುತ್ತದೆ. ಗೋಶಾಲೆಗಳಿಗೆ ದಾನ ನೀಡಬಹುದು.
ಭತ್ತದ ಹುಲ್ಲಿಗೆ ಬೆಂಕಿ ಹಚ್ಚಿದರೆ ದಂಡ
ಭತ್ತದ ಗದ್ದೆಯಲ್ಲಿ ಬೆಂಕಿ ಹಚ್ಚಿದರೆ ವಾತಾವರಣ ಹಾಳಾಗುತ್ತದೆ. ಅಸ್ತಮಾ ಹಾಗೂ ಉಸಿರಾಟದ ತೊಂದರೆಯಾಗುತ್ತದೆ. ವಾತಾವರಣಕ್ಕೆಹಾನಿಯಾಗುವುದರಿಂದ ದೆಹಲಿ, ಪಂಜಾಬ ಹಾಗೂ ಹರಿಯಾಣ ರಾಜ್ಯಗಳಲ್ಲಿ ಹುಲ್ಲು ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ ಬೆಂಕಿ ಹಚ್ಚಿದರೆ ರೈತರಿಗೆ ದಂಡ ವಿಧಿಸುವ ಸುತ್ತೊಲೆಯನ್ನು ಹೊರಡಿಸಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಇದೇ ಪರಿಸ್ಥಿತಿ ಬರಬಹುದು.