ಕಂದಾಯ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಹಯೋಗದಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ 2021-22ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಆರಂಭವಾಗಿದ್ದು, ರೈತರು ಬೆಳೆ ಸಮೀಕ್ಷೆ ಕಾರ್ಯಕೈಗೊಳ್ಳಲು ಬೆಳೆ ಸಮೀಕ್ಷೆ ಆ್ಯಪ್ Crop survey app)ನ್ನು ಬಿಡುಗಡೆ ಮಾಡಲಾಗಿದೆ.
ಪೂರ್ವ ಮುಂಗಾರು ಹಂಗಾಮು ಬೆಳೆದಿರುವ ರೈತರು ತಮ್ಮಲ್ಲಿರುವ ಫೋನ್ನಲ್ಲಿ ರೈತರೇ ಸ್ವತ) ಆ್ಯಪ್ ಡೌನ್ಲೋಡ್ ಮಾಡಿಕೊಂಡು ಬೆಳೆ ಸಮೀಕ್ಷೆ ಮಾಡಬಹುದು. ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಹೆಸರು, ತೊಗರಿ, ಅಲಸಂಧೆ, ಶೇಂಗಾ, ಎಳ್ಳು, ರಾಗಿ, ಉದ್ದು, ನವಣಿ, ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ, ಭತ್ತ ಸೇರಿದಂತೆ ಇನ್ನಿತರ ಬೆಳೆಗಳ ಮಾಹಿತಿಯನ್ನು ಅಪ್ಲೋಡ್ ಮಾಡಬಹುದು. ಬೆಳೆ ಸಮೀಕ್ಷೆ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ವಿವಿಧ ಸವಲತ್ತು ಒದಗಿಸಲು ಮತ್ತು ಮತ್ತು ಆರ್.ಟಿ.ಸಿ ಯಲ್ಲಿ ಅಳವಡಿಸಲು ಬಳಸಲಾಗುತ್ತದೆ.
ರೈತರು ಪೂರ್ವ ಮುಂಗಾರು ಬೆಳೆ ಸಮೀಕ್ಷೆ 2021-22 ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್ ನಲ್ಲಿ Early Kharif farmer crop survey 2021-22 ಎಂದು ಟೈಪ್ ಮಾಡಬೇಕು. ಅಥವಾ https://play.Google.com/store/apps/details?fild=com.csk.khariffarmer2021.cropsurvey ಲಿಂಕ್ ಅನ್ನು ಬಳಸಬಹುದು. ಆ್ಯಪ್ ಡೌನ್ಲೋಡ್ ಮಾಡಿಕೊಂಡ ನಂತರ ಆ್ಯಪ್ ನಲ್ಲಿ ರೈತರು ಹೆಸರು, ಮೊಬೈಲ್ ಸಂಖ್ಯೆ ಹಾಗೂ ಓಟಿಪಿ ಸಂಖ್ಯೆ ನಮೂದಿಸಿ ರೈತರು ತಮ್ಮ ವಿವರಗಳನ್ನು ನಮೂದಿಸಬೇಕು. ಬಳಿಕ ಜಮೀನಿನ ಸರ್ವೆ ನಂಬರ್ ಸಂಖ್ಯೆ ಸೇರಿಸಬೇಕು. ನಂತರ ಜಮೀನಿನವಲ್ಲಿ ಈ ಬಾರಿ ಬೆಳೆದಿರುವ ಬೆಳೆ ಮಾಹಿತಿ ದಾಖಲಿಸಿ ಬೆಲೆಯ ಛಾಯಾಚಿತ್ರವನ್ನು ಅಪ್ಲೋಡ್ ಮಾಡಬೇಕು. ರೈತರು ಬೆಳೆ ಸಮೀಕ್ಷೆ ಮಾಡುವುದರಿಂದ ನಿಖರವಾಗಿ ತಮ್ಮ ಜಮೀನು ಹಾಗೂ ಬೆಳೆಯನ್ನು ದಾಖಲಿಸಲು ಸಾಧ್ಯವಾಗುತ್ತದೆ.
ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ಅಪ್ಲೋಡ್ ಮಾಡದೆ ಇದ್ದರೆ ಸರ್ಕಾರದ ವಿವಿಧ ಯೋಜನೆಗಳಿಂದ ದೊರೆಯುವ ಸೌಲಭ್ಯ ಪಡೆಯಲು ವಂಚಿತರಾಗುವ ಸಂಭವವಿರುತ್ತದೆ.
ಈ ಸಮೀಕ್ಷೆಯಿಂದ ಪ್ರಕೃತಿ ವಿಕೋಪದ ವೇಲೆ ಬೆಳೆ ಹಾನಿ ಕುರಿತು ಫಲಾನುಭವಿಗಳ ಪಟ್ಟಿ ತಯಾರಿಸುವಲ್ಲಿ ಹಾಗೂ ಬೆಳೆ ವಿಮೆ ಯೋಜನೆ ಸರ್ವೆ ನಂಬರ್, ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲು ಸಹಾಯವಾಗುತ್ತದೆ.
.ರೈತರ ಪರವಾಗಿ ಅವರ ಕುಟುಂಬ ಸದಸ್ಯರು, ಸಂಬಂಧಿಕರ ಸಹಾಯ ಪಡೆಯಬಹುದು. ಮೊಬೈಲ್ ಮಾಹಿತಿ ಹೊಂದಿರುವ ಕಂದಾಯ, ಕೃಷಿ ಇಲಾಖೆ ವತಿಯಿಂದ ನಿಯೋಜನೆಗೊಂಡಿರುವ ಗ್ರಾಮದ ಯುವಕರ (ಖಾಸಗಿ ಪಿ.ಆರ್) ಸಹಯೋಗದೊಂದಿಗೆ ರೈತರು ತಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆಯುವ ಮೂಲಕ ತಮ್ಮ ಜಮೀನುಗಳಲ್ಲಿ (ಹಿಸ್ಸಾವಾರು) ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ದಾಖಲಿಸಬಹುದು.
ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಾಕೃತಿಕ ವಿಕೋಪ ಹಾಗೂ ಇನ್ನಿತರೆ ಸಮಯದಲ್ಲಿ ಬೆಳೆ ಹಾನಿಗೆ ಒಳಗಾಗುವ ರೈತರಿಗೆ, ಕನಿಷ್ಟ ಸಮಯದಲ್ಲಿ ಗರಿಷ್ಠ ನೆರವು ನೀಡುವ ಉದ್ದೇಶದಿಂದ ಬೆಳೆ ಸಮೀಕ್ಷೆಯ ಮೂಲಕ ನೋಂದಣಿಗೆ ರಾಜ್ಯ ಸರ್ಕಾರ ಮುಂದಾಗಿದೆ. ರೈತರೇ ನೇರವಾಗಿ ಈ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ದಾಖಲಿಸಿ ಸೌಲಭ್ಯ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಸಂಪರ್ಕಿಸಬಹುದು. ಅಥವಾ ಆಯಾ ಗ್ರಾಮಗಳಿಗೆ ನಿಯೋಜಿಸಲಾಗಿರುವ ಖಾಸಗಿ ನಿವಾಸಿಗಳನ್ನು ಅಅಥವಾ ಬೆಳೆ ಸಮೀಕ್ಷೆ ಸಹಾಯವಾಣಿ 8448447715 ಗೆ ಸಂಪರ್ಕಿಸಬಹುದು