Bara parihara ಹಣ ಜಮೆ ಆಗಿಲ್ಲವೇ? ಈ ನಂಬರಿಗೆ ಕರೆ ಮಾಡಿ

Written by Ramlinganna

Updated on:

Bara parihara 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಾದ ರೈತರಿಗೆ ಬರ ಪರಿಹಾರದ ಹಣ 28.67 ಕೋಟಿ ರೂಪಾಯಿ ಇನ್ಪುಟ್ ಸಬ್ಸಿಡಿ ನೀಡಲು ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 2023-24ನೇ ಸಾಲಿಗೆ ಮುಂಗಾರು ಹಂಗಾಮಿನಲ್ಲಿ 11 ತಾಲೂಕುಗಳು ಬರ ಪೀಡಿತ ತಾಲೂಕುಗಳೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳೆ ನಷ್ಟದ ಬಗ್ಗೆ ಭೂಮಿ ಪರಿಹಾರ ತಂತ್ರಾಂಶವು ಅನುಮೋದನೆ ನೀಡಿದ ಎರಡು ಹಂತದಲ್ಲಿನ 1,44,496 ರೈತ ಫಲಾನುಭವಿಗಳಿಗೆ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ 28.67 ಕೋಟಿ ರೂಪಾಯಿ ಇನ್ಪುಟ್ ಸಬ್ಸಿಡಿ ನೀಡಲು ಜಿಲ್ಲಾಧಿಕಾರಿ  ಬಿ. ಫೌಜಿಯಾ ತರನ್ನುಮ್ ಅವರು ಬುಧವಾರ ಮಂಜೂರಾ ತಿನೀಡಿದ್ದಾರೆ.

ಇದನ್ನೂ ಓದಿ ಆಧಾರ್ ಕಾರ್ಡ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇನ್ಪುಟ್ ಸಬ್ಸಿಡಿ ಹಣ ಆಯಾ ರೈತರ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಎರಡು ದಿನದಲ್ಲಿ ನೇರವಾಗಿ ಜಮೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಇನ್ಪುಟ್ ಸಬ್ಸಿಡಿ ಕುರಿತಂತೆ ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಹಾಯವಾಣಿ ಸಂಖ್ಯೆ 1077, ತಾಲೂಕು ಮಟ್ಟದ ಸಹಾಯವಾಣಿಗಳಾದ ಅಫಜಲ್ಪುರ ತಾಲೂಕಿನ ರೈತರು 7760208044, ಆಳಂದ ತಾಲೂಕಿನ ರೈತರು 08477 202428, ಚಿತ್ತಾಪುರ ತಾಲೂಕಿನ ರೈತರು 08474 236250, ಚಿಂಚೋಳಿ ತಾಲೂಕಿನ ರೈತರು 9902977599,  ಜೇವರ್ಗಿ ತಾಲೂಕಿನ ರೈತರು 7411843393, ಕಮಲಾಪುರ ತಾಲೂಕಿನ ರೈತರು 08478 200144, ಕಲಬುರಗಿ ತಾಲೂಕಿನ ರೈತರು 08472 278636, ಶಹಾಬಾದ್ 08474 295910, ಸೇಡಂ ತಾಲೂಕಿನ ರೈತರು 9535448788, ಹಾಗೂ ಯಡ್ರಾಮಿ ತಾಲೂಕಿನ ರೈತರು 9743682346 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Bara parihara ಲಿಸ್ಟ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ?

ಬರ ಪರಿಹಾರ ಲಿಸ್ಟ್ ನಲ್ಲಿ ತಮ್ಮ ಹೆಸರು ಇರುವುದನ್ನು ಚೆಕ್ ಮಾಡಲು ಈ

https://parihara.karnataka.gov.in/service87/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಪರಿಹಾರ ಬೆನಿಫಿಶಿಯರಿ ಪೇಮೆಂಟ್ ರಿಪೋರ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮಊರು ಆಯ್ಕೆ ಮಾಡಿಕೊಳ್ಳಬೇಕು.

ಯಾವ ವರ್ಷದ ಬೆಳೆ ಹಾನಿ ಪರಿಹಾರ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ವರ್ಷವನ್ನು select Year ನಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ನಂತರ select Season ನಲ್ಲಿ ಖಾರೀಪ್ ಆಯ್ಕೆ ಮಾಡಿಕೊಳ್ಳಬೇಕು.  Select Calamity  ನಲ್ಲಿ Flood ಆಯ್ಕೆ ಮಾಡಿಕೊಳ್ಳಬೇಕು. ನಂತರ Get Report ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಆಯ್ಕೆ ಮಾಡಿಕೊಂಡ ಊರಲ್ಲಿ ಯಾರು ಯಾರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಹಾಗೂ ಅವರಿಗೆ ಎಷ್ಟು ಹಣ ಜಮೆಯಾಗಿದೆ ಎಂಬ ಪಟ್ಟಿ ಕಾಣಿಸುತ್ತದೆ. ಅದರ ಮುಂದುಗಡೆ ಇರುವ View Status ಮೇಲೆ ಕ್ಲಿಕ್ ಮಾಡಿದರೆ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಜಿಲ್ಲೆ, ಬ್ಯಾಂಕ್ಹೆಸರು ಹಾಗೂ ನಿಮಗೆ ಎಷ್ಟು ಹಣ ಜಮೆಯಾಗಿದೆ? ನಿಮ್ಮ ಹೆಸರು ಹಾಗೂ ಪೇಮೆಂಟ್ ಸ್ಟೇಟಸ್ ಕಾಣಿಸುತ್ತದೆ. ಅದರ ಕೆಳಗಡೆ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಬೆಳೆ, ಹಾಗೂ ಎಷ್ಟು ಎಕರೆಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

ಕೊಪ್ಪಳ ಜಿಲ್ಲೆಯ ಸಹಾಯವಾಣಿ ನಂಬರ್ ಗಳು

ಜಿಲ್ಲಾಧಿಕಾರಿಗಳ ಕಚೇರಿ ಕೊಪ್ಪಳ7676732001, ತಾಲೂಕು ಕಚೇರಿ ಕೊಪ್ಪಳ 9380252356, ತಾಲೂಕು ಕಚೇರಿ ಯಲಬುರ್ಗಾ  9448833207, ತಾಲೂಕು ಕಚೇರಿ ಕುಷ್ಟಗಿ 08536 267031, ತಾಲೂಕು ಕಚೇರಿ ಕನಕಗಿರಿ 080 23900982, 7019926721, 7251961075, ತಾಲೂಕು ಕಚೇರಿ ಕುಕನೂರು 8050303495, ತಾಲೂಕು ಕಚೇರಿ ಗಂಗಾವತಿ 9740793877, ತಾಲೂಕು ಕಚೇರಿ ಕಾರಟಗಿ 8277932133, 8277929650, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕೊಪ್ಪಳ 7760956433, ಸಹಾಯಕ ಕಚೇರಿ ಯಲಬುರ್ಗಾ 8277932125, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕುಷ್ಟಗಿ 8277932126 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಯ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಬಳ್ಳಾರಿ ಜಿಲ್ಲಾ ತಾಲೂಕುವಾರು ಸಹಾಯವಾಣಿ ನಂಬರ್ ಗಳು

ಜಿಲ್ಲಾದಿಕಾರಿಗಳ ಕಾರ್ಯಾಲಯದ ದೂರವಾಣಿ ಸಂಖ್ಯೆ 1077 ಅಥವಾ 08392277100, ಬಳ್ಳಾರಿ ತಾಲೂಕು ತಹಶೀಲ್ದಾರ ಕಚೇರಿಯ ದೂರವಾಣಿ ಸಂಖ್ಯೆ 083292 297472, ಸಂಡೂರ ತಹಶೀಲ್ದಾರರ ಕಚೇರಿಯ ದೂರವಾಣಿ ಸಂಖ್ಯೆ -08395260241, ಸಿರಗುಪ್ಪ ತಹಶೀಲ್ದಾರ ಕಚೇರಿಯ ದೂರವಾಣಿ ಸಂಖ್ಯೆ 08396 220238, ಕುರುಗೋಡು ತಹಶೀಲ್ದಾರ ಕಚೇರಿಯ ದೂರವಾಣಿ 08393 200014, ಕಂಪ್ಲಿ ಕುರುಗೋಡು ತಹಶೀಲ್ದಾರರ ಕಚೇರಿಯ ದೂರವಾಣಿ ಸಂಖ್ಯೆ 08394 295554 ಗೆ ಸಂಪರ್ಕಿಸಬಹುದು.

Leave a Comment