ಅತೀವೃಷ್ಟಿ ಹಾಗೂ ಪ್ರವಾಹದಿಂದ ರಾಜ್ಯದಲ್ಲಿ ಲಕ್ಷಾಂತರ ಎಕರೆ ಬೆಳೆ ಹಾನಿಯಾಗಿತ್ತು. ಇದರಿಂದಾಗಿ ನೋಂದ ರೈತರಿಗೆ ನೆರವು ನೀಡಲು ರಾಜ್ಯ ಸರ್ಕಾರವು ಪರಿಹಾರ ಹಣ ಘೋಷಣೆ ಮಾಡಿತ್ತು. ಬೆಳೆಹಾನಿಯಾದ ರೈತರು ಪರಿಹಾರ ಪಡೆಯಲು ಅರ್ಜಿ ಸಹ ಸಲ್ಲಿಸಿದ್ದರು. ಕೆಲವು ರೈತರಿಗೆ ಪರಿಹಾರದ ಹಣ ಜಮೆಯಾಗಿದ್ದರೆ ಇನ್ನೂ ಕೆಲವು ರೈತರ ಅರ್ಜಿಗಳು ತಿರಸ್ಕೃತವಾಗಿವೆ. ಆದರೆ ಯಾವ ಕಾರಣಕ್ಕಾಗಿ ಅರ್ಜಿಗಳು ತಿರಸ್ಕೃತವಾಗಿವೆ, ಪರಿಹಾರ ಹಣ ಜಮೆಯಾಗಲು ವಿಳಂಬವೇಕೆ ಎಂಬ ಕಾರಣ ಗೊತ್ತಿಲ್ಲದೆ ಎಷ್ಟೋ ರೈತರು ಸಂಕಷ್ಟದಲ್ಲಿದ್ದಾರೆ.

ಅರ್ಜಿಗಳು ತಿರಸ್ಕೃತವಾಗಿದ್ದೇಕೆ?

ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಆಗದೆ ಇರುವುದು, ಜಮೀನಿನ ಹಳೆಯ ಪಹಣಿ ನೀಡಿರುವುದು, ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸದೆ ಇರುವುದು ಸೇರಿದಂತೆ ಇನ್ನೂ ಕೆಲವು ಕಾರಣಗಳಿಂದ ರೈತರ ಅರ್ಜಿಗಳು ತಿರಸ್ಕೃತವಾಗಿವೆ ಎನ್ನಲಾಗುತ್ತಿದೆ. ಪರಿಹಾರದ ಅರ್ಜಿ ತಿರಸ್ಕೃತವಾಗಿದೆಯೋ ಅಥವಾ ಮುಂದೆ ಪರಿಹಾರ ಹಣ ಬರಬಹುದೋ ಎಂಬ ಅನುಮಾನ ಸಹ ಕಾಡುತ್ತಿದೆ.

ಕೆಲವು ರೈತರಿಗೆ ಕಡಿಮೆ ಪರಿಹಾರ ಹಣ ಜಮೆ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೆಲವು ರೈತರಿಗೆ ಪರಿಹಾರ ಹಣ ಕಡಿಮೆ ಜಮೆಯಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಸಹ  ರೈತರು ಪಹಣಿ, ಆಧಾರ್ ನೀಡಿದ್ದರೂ ಸಹ ಕೆಲವು ರೈತರಿಗೆ ಕಡಿಮೆ ಪರಿಹಾರದ ಹಣ ಜಮೆಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಗ್ರಾಮ ಪಂಚಾಯತಿ ಲೆಕ್ಕಿಗರಿಗೆ ರೈತರು ಅರ್ಜಿಯ ಕುರಿತು ವಿಚಾರಿಸಲು ಹೋದಾಗ ಸಮರ್ಪಕ ಉತ್ತರ ದೊರೆಯದೆ ಇರುವುದರಿಂದ ರೈತರು ನಿರಾಶೆಯಲ್ಲಿದ್ದಾರೆ. ಒಂದು ವೇಳೆ ಅರ್ಜಿ ತಿರಸ್ಕ್ರೃತವಾಗಿದ್ದರೆ ಯಾವ ಕಾರಣಕ್ಕಾಗಿ ಅರ್ಜಿ ತಿರಸ್ಕೃತವಾಗಿದೆ ಎಂಬ ಮಾಹಿತಿಯೂ ಇಲ್ಲದಂತಾಗಿದೆ. ಒಂದು ವೇಳೆ ಅರ್ಜಿ ತಿರಸ್ಕೃತವಾಗಿದ್ದ ಕಾರಣ ಗೊತ್ತಾದರೆ ಅದಕ್ಕೆ ಬೇಕಾಗುವ ದಾಖಲೆಗಳನ್ನು ನೀಡಲು ಅನುಕೂಲವಾಗುತ್ತದೆ.  ಆಧಾರ್ ಕಾರ್ಡ್ ಗೆ ಬ್ಯಾಂಕ್ ಖಾತೆ ಲಿಂಕ್ ಆಗದಿರುವುದರಿಂದಲೂ ಕೆಲವು ಅರ್ಜಿಗಳು ತಿರಸ್ಕೃತವಾಗಿವೆ ಎನ್ನಲಾಗುತ್ತಿದೆ. ರೈತರ ಎರಡ್ಮೂರು ಬ್ಯಾಂಕ್ ಖಾತೆಗಳಿದ್ದಾಗ ಯಾವ ಬ್ಯಾಂಕಿಗೆ ಹಣ ಜಮೆಯಾಗಿದೆ ಎಂಬುದು ಸಹ ಗೊತ್ತಾಗುತ್ತಿಲ್ಲ.

ಮೊಬೈಲ್ ನಲ್ಲೇ ಪರಿಹಾರ ಸ್ಟೇಟಸ್ ನೋಡಿ

ನಿಮ್ಮ ಯಾವ ಖಾತೆಗೆ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ನೋಡಲು ಈ ಕೆಳಗಿನ ಲಿಂಕ್ ಮಾಡಿದರೆ ಸಾಕು, ಯಾವ ಬ್ಯಾಂಕಿಗೆ ಎಷ್ಟು ಜಮೆಯಾಗಿದೆ ಎಂಬುದನ್ನು ನೋಡಬಹುದು.

ಪರಿಹಾರ ಸ್ಟೇಟಸ್ ನೋಡಲು ಈ  https://landrecords.karnataka.gov.in/PariharaPayment/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ಕಾರದ ಪರಿಹಾರ ವೆಬ್ ಪೇಜ್ ಓಪನ್ ಆಗುತ್ತದೆ ಅಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ನಂತರ Select calamity type ನಲ್ಲಿ Flood ಆಯ್ಕೆ ಮಾಡಿಕೊಳ್ಳಬೇಕು. ಈ ವರ್ಷದ ಸ್ಟೇಟಸ್ ನೋಡಲು 2021-22 ಆಯ್ಕೆ ಮಾಡಿಕೊಳ್ಳಬೇಕು. ಕೆಳಗಡೆ ಆಧಾರ್ ಸಂಖ್ಯೆ ನಮೂದಿಸಿ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು ನಂತರ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿದರೆ ಸಾಕು ಪರಿಹಾರ ಸ್ಟೇಟಸ್ ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು. ಈ ವರ್ಷದಲ್ಲಿ ಎಷ್ಟು ಎಕರೆಗೆ ಬೆಳೆ ಪರಿಹಾರ ನೀಡಲಾಗಿದೆ. ಯಾವ ಬ್ಯಾಂಕಿನಲ್ಲಿ ಹಣ ಜಮೆಯಾಗಿದೆ. ಯಾವ ಬೆಳೆಗೆ ಪರಿಹಾರ ನೀಡಲಾಗಿದೆ ಎಂಬ ಮಾಹಿತಿ ಕಾಣುತ್ತದೆ. ಅದೇ ರೀತಿ 2020-21 ನೇ ಸಾಲಿನ ಹಾಗೂ 2010-20ನೇ ಸಾಲಿನ ಸ್ಟೇಟಸ್ ಸಹ ವರ್ಷ ಆಯ್ಕೆ ಮಾಡಿಕೊಂಡು ನೋಡಿಕೊಳ್ಳಬಹುದು.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರೈತರಿಗೆ ಪರಿಹಾರದ ಹಣ ಜಮೆಯಾಗಿದ್ದರೆ ಇನ್ನೂ ಕೆಲವು ರೈತರ ಖಾತೆಗೆ ಜಮೆಯಾಗಿಲ್ಲ. ಇದರಿಂದಾಗಿ ರೈತರಲ್ಲಿ ಆತಂಕ ಎದುರಾಗಿದೆ.. ಪರಿಹಾರ ತಂತ್ರಾಂಶದಲ್ಲಿ ಅರ್ಜಿ ಅಪ್ಲೋಡ್ ಆದ 48 ಗಂಟೆಯೊಳಗೆ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದರೂ ಆದರೆ ಕೆಲವು ರೈತರಿಗೆ ಅರ್ಜಿ ಸಲ್ಲಿಸಿ ತಿಂಗಳಾದರೂ ಇನ್ನೂ ಜಮೆಯಾಗಿಲ್ಲ ಎಂದ ಆರೋಪವಿದೆ.

Leave a Reply

Your email address will not be published. Required fields are marked *