ರೈತರ ಜಮೀನು ನೆರೆಹೊರೆಯವರಿಂದ ಅಥವಾ ಇನ್ನಿತರರಿಂದ ಒತ್ತುವರಿಯಾಗಿದ್ದರೆ ಅಥವಾ ಗಡಿಭಾಗಗಳನ್ನು ನಾಶ ಮಾಡಿದ್ದರೆ ಹದ್ದುಬಸ್ತಿಗೆ ಅರ್ಜಿ ಸಲ್ಲಿಸಿ ಸಮಸ್ಯೆ ಬಗೆಹರಿಸಬಹುದು. ಆದರೆ ಒತ್ತುವರಿಯಾಗಿರುವ ಜಮೀನಿಗೆ ಅರ್ಜಿ ಹೇಗೆ ಅ ಸಲ್ಲಿಸಬೇಕು ಹಾಗೂ ಯಾವಾಗ ಅರ್ಜಿ ಸಲ್ಲಿಸಬೇಕೆಂಬುದರ ಬಗ್ಗೆ ಮಾಹಿತಿಯ ಕೊರತೆಯಿರುತ್ತದೆ. ಹದ್ದುಬಸ್ತು ಎಂದರೇನು, ಅರ್ಜಿ ಎಲ್ಲಿ ಹೇಗೆ ಸಲ್ಲಿಸಬೇಕು ಹಾಗೂ ಅರ್ಜಿ ಶುಲ್ಕ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.
ಪೋಡಿಯಾದ ಜಮೀನು ಅಥವಾ ಜಾಗ ಬೇರೆಯವರಿಂದ ಒತ್ತುವರಿಯಾಗಿದ್ದರೆ ಅಳತೆ ಮಾಡಿ ನಿಖರ ಗಡಿ ಗುರುತಿಸಿ ಬಂದೋಬಸ್ತ್ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಹದ್ದುಬಸ್ತು ಎನ್ನುವರು.
ಹದ್ದುಬಸ್ತಿಗೆ ಅರ್ಜಿ ಸಲ್ಲಿಸಿದರೆ ಭೂ ಮಾಪಕರು ರೈತರ ಜಮೀನಿಗೆ ಬರುತ್ತಾರೆ. ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನಿನ ಅಳತೆ ಕಾರ್ಯ ಮಾಡಿ ಅಳಿಸಿ ಹೋಗಿರುವ ಗಡಿಭಾಗವನ್ನು ಪತ್ತೆ ಹಚ್ಚಿ ಜಮೀನಿಗೆ ಗಡಿ ಭಾಗಗಳನ್ನು ಗುರುತು ಮಾಡುತ್ತಾರೆ.
ಮಾಲಿಕರಿಗೆ ತಮ್ಮ ಜಮೀನು ಮತ್ತು ಜಾಗದ ವಿಸ್ತೀರ್ಣ ಬಗ್ಗೆ ಸರಿಯಾಗಿ ಗೊತ್ತಿರುವುದಿಲ್ಲ. ಹಾಗಾಗಿ ಹದ್ದುಬಸ್ತು ಮಾಡಿಕೊಂಡರೆ ಜಮೀನಿನ ಯಾವ ಭಾಗ ಒತ್ತುವರಿಯಾಗಿದೆ, ಎಷ್ಟು ಪ್ರದೇಶ ಒತ್ತುವರಿಯಾಗಿದೆ, ಯಾರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದನ್ನು ಗುರುತು ಮಾಡಿ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಿ ನಿಖರವಾದ ಗಡಿ ಗುರುತಿಸುತ್ತಾರೆ.
ಹದ್ದುಬಸ್ತಿಗೆ ಬೇಕಾಗುವ ದಾಖಲೆಗಳು
ಹದ್ದುಬಸ್ತಿಗೆ ಅರ್ಜಿ ಸಲ್ಲಿಸುವ ರೈತರಿಗೆ ಆಧಾರ್ ಕಾರ್ಡ್ ಹೊಂದಿರಬೇಕು. ಇತ್ತೀಚಿನ ಪಹಣಿ ಇರಬೇಕು. ಹದ್ದುಬಸ್ತಿಗೆ ಬೇಕಾಗುವ ಅರ್ಜಿಯಲ್ಲಿ ಎಲ್ಲಾ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು. ರೈತರು ಹದ್ದುಬಸ್ತಿಗೆ ಹತ್ತಿರದ ನಾಡಕಚೇರಿ ಅಥವಾ ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ : ರೈತರ ಖಾತೆಗೆ ಜಮೆಯಾಯಿತು ಪರಿಹಾರದ ಹೆಚ್ಚುವರಿ ಹಣಃ ಸ್ಟೇಟಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಹದ್ದುಬಸ್ತಿಗೆ ಅರ್ಜಿಸಲ್ಲಿಸಿದ ನಂತರ ಭೂ ಮಾಪಕರು ರೈತರ ಜಮೀನಿನ ಅಳತೆ ಮಾಡಲು ಬರುತ್ತಾರೆ. ಎಸ್ಟು ಪ್ರದೇಶ ಒತ್ತುವರಿಯಾಗಿದೆ ಎಂಬುದರ ಕುರಿತು ಭೂಮಾಪಕರು ಮೇಲಧಿಕಾರಿಗಳಿಗೆ ಸೂಚಿಸುತ್ತಾರೆ.ಜಮೀನಿನ ಅಳತೆ ಮಾಡಿದ ನಂತರ ಭೂ ಮಾಪಕರು ಸೂಚಿಸಿದ ಸ್ಥಳಗಳಲ್ಲಿ ಅರ್ಜಿದಾರ ಕಲ್ಲುಗಳನ್ನು ಹಾಕಿಕೊಳ್ಳಬೇಕಾಗುತ್ತದೆ.
ವಿರೋಧದ ಬಳಿಕ ಶುಲ್ಕ ಇಳಿಸಿದ ಸರ್ಕಾರ
ಈ ಹಿಂದೆ ಆಡಳಿತಾತ್ಮಕ ವೆಚ್ಚ, ನಿರ್ವಹಣಾ ವೆಚ್ಚ ಮತ್ತು ಖಾಸಗಿ ಭೂಮಾಪಕರ ಸೇವಾ ಶುಲ್ಕದ ಹೆಚ್ಚಳದ ಹೊರೆಯನ್ನು ಜಮೀನುಗಳ ಮಾಲೀಕರಿಗೆ ವರ್ಗಾಯಿಸಿರುವ ಕಂದಾಯ ಇಲಾಖೆ ಭೂಮಾಪನ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿತ್ತು. ಆದರೆ ಭಾರಿ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ ಶುಲ್ಕ ಏರಿಕೆಯಲ್ಲಿ ಕೊಂಚ ಇಳಿಕೆ ಮಾಡಿದೆ.
ಎರಡು ಎಕರೆಗೆ 1500 ಹಾಗೂ ಪ್ರತಿ ಎಕರೆಗೆ 400 ರೂಪಾಯಿಯಂತೆ ನಿಗದಿ ಮಾಡಿದೆ. ನಗರ ಪ್ರದೇಶದಲ್ಲಿ ಎರಡು ಎಕರೆವರೆಗೂ 2500 ರೂಪಾಯಿ ಮತ್ತು ನಂತರ ಪ್ರತಿ ಎಕರೆಗೆ 1000 ರೂಪಾಯಿಯಂತೆ ಗರಿಶ್ಟ 5000 ರೂಪಾಯಿಯವರೆಗೆ ಶುಲ್ಕ ವಿಧಿಸಲು ಅನಮುತಿ ನೀಡಲಾಗಿತ್ತು. ಪರಿಷ್ಕರಣೆ ಆದೇಶದಲ್ಲಿ ನಗರ ಪ್ರದೇಶದ ಶುಲ್ಕದಲ್ಲಿ ಬದಲಾವಣೆ ಮಾಡಿಲ್ಲ.
ಈ ಹಿಂದೆ ಪ್ರತಿ ಸರ್ವೆ ನಂಬರಿಗೆ 35 ರೂಪಾಯಿ ಇತ್ತು. ಅಲ್ಲದೆ ಗ್ರಾಮದ 4 ಸರ್ವೆ ಅಥವಾ ಹಿಸ್ಸಾ ನಂಬರಿಗೆ 35 ರೂಪಾಯಿ ಇತ್ತು. ಹೆಚ್ಚುವರಿ ಸರ್ವೆ ಅಥವಾ ಹಿಸ್ಸಾ ನಂಬರುಗಳಿಗೆ 10 ರೂಪಾಯಿ ಇತ್ತು. ಹಲವಾರು ವರ್ಷಗಳ ನಂತರ ಈಗ ಶುಲ್ಕ ಏರಿಕೆಯಾಗಿದೆ. ಆದರೆ ಈಗಾಗಲೇ ಅಳತೆಗಾಗಿ ಸ್ವೀಕೃತವಾಗಿ ಬಾಕಿಯಿರುವ ಪ್ರಕರಣಗಳಿಗೆ ಈ ದರ ಅನ್ವಯಿಸುವುದಿಲ್ಲ ಎಂದು ಕಂದಾಯ ಇಲಾಖೆಯ ಭೂಮಾಪನ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಜಿ ಎಲ್ಲಿ ಯಾವಾಗ ಸಲ್ಲಿಸಬೇಕು ?
ರೈತರ ಜಮೀನಿನ ಸುತ್ತಮುತ್ತಲಿರುವ ಬಾಂದಾರು ಅಥವಾ ಕಲ್ಲುಗಳು ನಾಶವಾದರೆ ಅಥವಾ ಜಮೀನು ಒತ್ತುವರಿಯಾಗಿದೆ ಎಂದು ರೈತರಿಗೆ ಅನಿಸಿದರೆ ಒತ್ತುವರಿಗೆ ಅರ್ಜಿ ಸಲ್ಲಿಸಬಹುದು. ಆಗ ಭೂ ಮಾಪಕರು ಅರ್ಜಿ ಸಲ್ಲಿಸಿದ ರೈತರ ಜಮೀನಿಗೆ ಬಂದು ಅಳತೆ ಕಾರ್ಯ ನಡೆಸಲಾಗುವುದು.
ರೈತರು ತಮ್ಮ ಜಮೀನಿನ ಹದ್ದುಬಸ್ತಿಗೆ ಹತ್ತಿರದ ನಾಡಕಚೇರಿ ಅಥವಾ ತಹಶೀಲ್ದಾರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವುದಕ್ಕಿಂತ ಮುಂಚಿತವಾಗಿ ತಹಶೀಲ್ದಾರ ಕಚೇರಿಯ ಹತ್ತಿರದ ಝರಾಕ್ಸ್ ಅಂಗಡಿಯಲ್ಲಿ ಹದ್ದುಬಸ್ತಿಗೆ ಅರ್ಜಿ ಪಡೆದು ಅಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.
ಇದನ್ನೂ ಓದಿ: ಮೊಬೈಲ್ ನಲ್ಲೇ ಖಾತಾ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ
ಭೂ ಸರ್ವೆ ಅರ್ಜಿ ಶುಲ್ಕ ಏಕಾಏಕಿ 35 ರೂಪಾಯಿಯಿಂದ 4000 ರೂಪಾಯಿಗಳಿಗೆ ಏರಿಸಿದ್ದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ಈ ಮೊದಲು ಗ್ರಾಮೀಣ ಮತ್ತು ನಗರ ಪ್ರದೇಶದ ಪ್ರತಿ ಸರ್ವೆ ಅಥವಾ ಹಿಸ್ಸಾ ಸರ್ವೆ ನಂಬರಿಗೆ ರೈತರು ಅರ್ಜಿ ಶುಲ್ಕ 35 ರೂಪಾಯಿ ಮಾತ್ರ ಪಾವತಿಸಲಾಗುತ್ತಿತ್ತು. ನೂತನ ಆದೇಶದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳೆಂದು ಪ್ರತ್ಯೇಕಿಸಿ 4000 ರೂಪಾಯಿಯವರೆಗೆ ಶುಲ್ಕ ಹೆಚ್ಚಿಸಲಾಗಿದೆ. ಗ್ರಾಮೀಣ ವ್ಯಾಪ್ತಿಯಲ್ಲಿ 2 ಎಕರೆಯವರೆಗೆ 15 ರೂಪಾಯಿ 2 ಎಕರೆಗಿಂತ ಹೆಚ್ಚು ಪ್ರತಿ ಎಕರೆಗೆ ಹೆಚ್ಚುವರಿ 300 ರೂಪಾಯಿ ಶುಲ್ಕ ವಿಧಿಸಲಾಗಿದೆ.