ಮಾತಾಡಿದಂತೆ ಮೊಬೈಲ್ ನಲ್ಲಿ ಟೈಪ್ ಆಗುವ ಆ್ಯಪ್

Written by By: janajagran

Updated on:

kannada voice notes app ಮೊಬೈಲ್ ನಲ್ಲಿ ಕನ್ನಡ ಟೈಪ್ ಮಾಡಲು ಸಮಸ್ಯೆ ಎದುರಿಸುತ್ತಿದ್ದೀರಾ…. ಹಾಗಾದರೆ ಚಿಂತೆ ಮಾಡುವುದನ್ನು ಬಿಟ್ಟುಬಿಡಿ, ನೀವು ಮಾತನಾಡುತ್ತಾ ಹೋದರೆ ಸಾಕು, ಅದು ಅಕ್ಷರ ರೂಪಕ್ಕೆ ಇಳಿಸುವಂತಹ ಆ್ಯಪ್ ಬಂದಿದೆ. ಇದಕ್ಕಾಗಿ ನೀವು ಕಷ್ಟ ಪಡಬೇಕಿಲ್ಲ. ನೀವು ಮಾತಾಡಿದರೆ ಸಾಕು, ನೀವು ಹೇಳಿದ ಹಾಗೆ ಅಕ್ಷರ ರೂಪದಲ್ಲಿಟೈಪ್ ಆಗುತ್ತದೆ.

ಹೌದು, ಕನ್ನಡದ ಧ್ವನಿಯನ್ನು ಬರೆದು ಕೊಡುವ ಹೊಸ ಆ್ಯಪ್ ಇದಾಗಿದೆ.  ಮೊಬೈಲ್ ನಲ್ಲಿ ಟೈಪ್ ಮಾಡಬೇಕಿಲ್ಲ, ಮಾತಾಡುತ್ತಾ ಹೋದರೆ ಸಾಕು, ಮಾತಾಡಿದ್ದನ್ನೇಲ್ಲಾ ಅಕ್ಷರ ರೂಪದಲ್ಲಿ ಇಳಿಸುತ್ತದೆ ಈ ಆ್ಯಪ್.  ಇದನ್ನು ನೀವು ನಿಮ್ಮ ಗೆಳೆಯರಿಗೆ, ಕುಟುಂಬಸ್ಥರಿಗೆ, ಕಚೇರಿಗಳಿಗೆ ಸಂದೇಶ ಕಳುಹಿಸಬಹುದು.

ಮಾತಾಡಿದಂತೆ ಟೈಪ್ ಮಾಡುವ ಆ್ಯಪ್ ಯಾವುದು, ಅದನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು. ಅದು ಹೇಗೆ ಕೆಲಸ ಮಾಡುತ್ತದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

kannada voice notes app ಕನ್ನಡ ವೈಸ್ ಆ್ಯಪ್ ಹೇಗೆ ಕೆಲಸ ಮಾಡುತ್ತದೆ?

ನಾವು ಮಾತಾಡಿದಂತೆ ಅಕ್ಷರ ರೂಪಕ್ಕೆ ಇಳಿಸುವ ಆ್ಯಪ್ ಹೆಸರು ಕನ್ನಡ ವಾಯ್ಸ್ ನೋಟ್ಸ್.ಈ ಆ್ಯಪ್ ನಾವಾಡುವ ನುಡಿಯನ್ನು ಅಕ್ಷರ ರೂಪಕ್ಕೆ ಇಳಿಸುತ್ತದೆ. ಇದನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಗೂಗಲ್ ಪ್ಲೇ ಸ್ಟೋರ್ ನಲ್ಲಿ kannada voice notes ಎಂದು ಟೈಪ್ ಮಾಡಿ ಆ್ಯಪ್ Install ಮಾಡಿಕೊಳ್ಳಬಹುದು. ಅಥವಾ ಈ

https://play.google.com/store/apps/details?id=com.voicenotes.kannada&hl=en&gl=US

ಲಿಂಕ್ ಮೇಲೆ ಕ್ಲಿಕ್ ಮಾಡಿ Install ಮೇಲೆ ಕ್ಲಿಕ್ ಮಾಡಬೇಕು. ಆಗ ಧ್ವನಿ ಕನ್ನಡ ವೈಸ್ ನೋಟ್ಸ್ ಎಂಬ ಸಂದೇಶ ಬರುತ್ತದೆ. ಅಲ್ಲಿ

ಅಲೋ ಧ್ವನಿ ಕನ್ನಡ ವೈಸ್ ನೋಟ್ಸ್  ಮೇಲೆ ಕ್ಲಿಕ್ ಮಾಡಬೇಕು. ನಂತರ ವೈಲ್ ಯೂಸಿಂಗ್ ದಿಸ್ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಮೇಲೆ ಕ್ಲಿಕ್ ಮಾಡಬೇಕು. ನಂತರ ಲಾಗನ್ ಸೈನ್ ಇನ್ ಮೇಲೆ ಕ್ಲಿಕ್ ಮಾಡಬೇಕು. ಮೈಕ್ರೋಫೋನ್ ಸಂಕೇತವನ್ನು ಒತ್ತಬೇಕು.  ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ  ಇದು ನಿಮ್ಮ ವೈಯ್ಸ್ ಅನ್ನು ಟೆಕ್ಟ್ಸ್ ರೂಪದಲ್ಲಿ ಪರಿವರ್ತಿಸುತ್ತದೆ ಎಂಬ ಸಂದೇಶ ಕಾಣುತ್ತದೆ.

ಆಗ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಬೇಕು. ಕೆಳಕಂಡ ಶೇರ್ ಬಟನ್ ಮೇಲೆ ಒತ್ತಿ ನೀವು ಪರಿವರ್ತಿಸಿದ ಟೆಕ್ಸ್ಟ್ ಅನ್ನು ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಬಹಬುದು. ಎಂಬ ಸಂದೇಶ ಕಾಣುತ್ತದೆ. ಆಗ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಬೇಕು.  ನಂತರ  ನಿಮ್ಮ ಎಲ್ಲಾ ವೈಸ್ ನೋಟ್ಸ್ ಇಲ್ಲಿ ಸೇವ್ ಆಗಿರುತ್ತದೆ ಎಂಬ ಸಂದೇಶ ಕಂಡಾಗ ಆಗ ಗಾಟ್ ಇಟಿ ಮೇಲೆ ಕ್ಲಿಕ್ ಮಾಡಬೇಕು.ಹೀಗೆ ನೀವು ಆ್ಯಪ್ ಇನ್ಸ್ ಸ್ಟಾಲ್ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಇದನ್ನೂ ಓದಿ :  ಪಿಎಂ ಕಿಸಾನ್ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ 11ನೇ ಕಂತು ಬರುತ್ತೋ ಇಲ್ಲವೋ ಚೆಕ್ ಮಾಡುವುದು ಹೇಗೆ?

ನೀವು ಕನ್ನಡದಲ್ಲಿ ಸಂದೇಶ ಮಾತಾಡಿದಂತೆ ಅಕ್ಷರ ರೂಪದಲ್ಲಿ ಇಳಿಸಲು ಆ್ಯಪ್ ಓಪನ್ ಮಾಡಿದಾಗ ವೈಸ್ ರಿಕಾರ್ಡ್ ಒತ್ತಿದ ನಂತರ ನೀವು ಮಾತಾಡುತ್ತಾ ಹೋದರೆ ಸಾಕು, ನೀವು ಹೇಳಿದಂತೆ ಎಲ್ಲಾ ಅಕ್ಷರಗಳು ಟೈಪ್ ಆಗುತ್ತದೆ. ನೀವು ಹೇಳಿದೆಲ್ಲಾ ಅಕ್ಷರ ರೂಪಕ್ಕೆ ಪರಿವರ್ತನೆಯಾದ ಸಂದೇಶವನ್ನು ವ್ಯಾಟ್ಸಪ್ ಮೂಲಕ ವಿವಿಧ ಮಾದ್ಯಮಗಳ ಮೂಲಕ ಇನ್ನೊಬ್ಬರಿಗೆ ರವಾನಿಸಲು ಶೇರ್ ಬಟನ್ ಮೇಲೆ ಕ್ಲಿಕ್ ಮಾಡಿ ಕಾಪಿ ಮಾಡಿ ಪೇಸ್ಟ್ ಮಾಡಿ ಕಳಿಸಬಹುದು.

ಕನ್ನಡದಲ್ಲಿ ಒಂದೊಂದು ಅಕ್ಷರಗಳನ್ನು ಟೈಪ್ ಮಾಡಿ ಸಮಸ್ಯೆ ಎದುರಿಸಬೇಕಿಲ್ಲ. ಅತೀ ಸುಲಭವಾಗಿ ಅಕ್ಷರ ರೂಪಕ್ಕೆ ಇಳಿಸುವ ಈ ಸೌಲಭ್ಯವನ್ನುಪ್ರತಿಯೊಬ್ಬರೂ ಪಡೆದುಕೊಳ್ಳಬಹುದು. ನೀವು ಮಾತಾಡುವಾಗಿ ಸ್ಪಷ್ಟವಾಗಿ, ನಿಧಾನವಾಗಿ ಉಚ್ಚಾರಬದ್ದವಾಗಿ ಮಾತಾಡಿದರೆ ಸಾಕು, ಮಾತಾಡಿದೆಲ್ಲಾ ಅಕ್ಷರ ರೂಪದಲ್ಲಿ ಇಳಿಯುತ್ತದೆ. ವಿಶೇಷವಾಗಿ ಮೊಬೈಲ್ನಲ್ಲಿ ಬರೆಯಲು ಸಮಸ್ಯೆಯಿದ್ದವರಿಗಿದು ತುಂಬಾ ಅನುಕೂಲವಾಗಲಿದೆ. ಲೇಖನಗಳನ್ನುಬರೆಯಲು, ಕವನಗಳನ್ನು ಬರೆಯಲು, ಗೆಳೆಯರಿಗೆ ಕನ್ನಡದಲ್ಲಿ ಸಂದೇಶ ಕಳುಹಿಸಲು, ಸುದ್ದಿಬ್ಲಾಗ್ ಬರೆಯವವರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಈ ಆ್ಯಪ್ ಕನ್ನಡ, ತೆಲುಗು, ಮರಾಠಿ, ತಮಿಳು, ಗುಜರಾತಿ ಭಾಷೆಯಲ್ಲಿಯೂ ಲಭ್ಯವಿದೆ. ಯಾವ ಭಾಷೆಯಲ್ಲಿ ನೀವು ಟೈಪ್ ಮಾಡಿಬೇಕೆಂದುಕೊಂಡಿದ್ದೀರೋ ಆ ಭಾಷೆಯ ವೈಸ್ ನೋಟ್ ಆ್ಯಪ್ ಇನ್ಸಟಾಲ್ ಮಾಡಿಕೊಂಡು ಯಾವುದೇ ತೊಂದರೆಯಿಲ್ಲದೆ ಮಾತಾಡಿದಂತೆ ಆಕ್ಷರ ರೂಪಯಕ್ಕೆ ಇಳಿಸುತ್ತದೆ ಈ ವಿನೂತನ ಆ್ಯಪ್.

ಒಮ್ಮೆ ನೀವೂ ಈ ಆ್ಯಪ್ ಬಳಸಿ ಮಾತಾಡಿದಂತೆ ಕನ್ನಡದಲ್ಲಿ ಅಕ್ಷರ ರೂಪದಲ್ಲಿ ಇಳಿಸಿ ನಿಮ್ಮ ಸ್ನೇಹಿತರಿಗೆ, ಗೆಳತಿಯರಿಗೆ, ಕುಟುಂಬಸ್ಥರಿಗೆ ಕನ್ನಡದಲ್ಲಿ ಸಂದೇಶ ಕಳಿಸಬಹುದು.

Leave a Comment