ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 50 ಸಾವಿರ ಸಬ್ಸಿಡಿ

Written by Ramlinganna

Updated on:

50 thousand subsidy  ರೈತರಿಗೆ ಸಸಿಗಳನ್ನು ಪೋಷಿಸಿ  ಬೆಳೆಸುವುದಕ್ಕೂ ಸರ್ಕಾರದ ವತಿಯಿಂದ ಪ್ರೋತ್ಸಾಹಧನ ನೀಡಲಾಗುತ್ತದೆ. ಹೌದು,  ರೈತರು  ಕೇವಲ 1 ರೂಪಾಯಿಗೆ ಸಸಿಗಳನ್ನು ಪಡೆದು ಮೂರು ವರ್ಷಗಳವರೆಗೆ ಸಸಿಗಳನ್ನು ಪೋಷಿಸಿ ಬೆಳೆಸಿದರೆ ಪ್ರತಿ ಸಸಿಗೆ 125 ರೂಪಾಯಿ ಸಹಾಯಧನ ನೀಡಲಾಗುವುದು. ಒಂದು ಹೆಕ್ಟೇರಿಗೆ 400 ಸಸಿಗಳನ್ನು ಪಡೆದು 50 ಸಾವಿರ ರೂಪಾಯಿಯವರೆಗೆ ಸಹಾಯಧನ ಪಡೆಯಬಹುದು.

ಹೌದು, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ರೈತರಿಗೆ ಈ ಸೌಲಭ್ಯ ಸಿಗಲಿದೆ.  ರೈತರು ತಮ್ಮ ಹೆಸರನ್ನು ಅರಣ್ಯ ಇಲಾಖೆಯಲ್ಲಿ ನೋಂದಾಯಿಸಿ ಇಲಾಖೆಯಿಂದ ಸಸಿಗಳನ್ನು ಪಡೆದನಂತರ ಬದುಕುಳಿದ ಪ್ರತಿ ಸಸಿಗೆ ಮೊದಲ ವರ್ಷದ ಅಂತ್ಯದಲ್ಲಿ  35 ರೂಪಾಯಿ ಎರಡನೇ ವರ್ಷದ ಅಂತ್ಯದಲ್ಲಿ ಪ್ರತಿ ಸಸಿಗೆ 40 ರೂಪಾಯಿ ಅದೇ ರೀತಿ ಮೂರನೇ ವರ್ಷದ ಅಂತ್ಯದಲ್ಲಿ ಪ್ರತಿ ಸಸಿಗ 125 ರೂಪಾಯಿ ಸಹಾಯಧನ ನೀಡಲಾಗುವುದು.  ಈ ಯೋಜನೆಯಡಿಯಲ್ಲಿ ಪ್ರತಿ ವರ್ಷ ಹಲವಾರು ರೈತರು ಸೌಲಭ್ಯ ಪಡೆಯುತ್ತಿದ್ದಾರೆ. ರೈತರು ಗಿಡಗಳನ್ನು ನೆಟ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೂರು ವರ್ಷಗಳವರೆಗೆ 125 ರೂಪಾಯಿ ಸಹಾಯಧನ ನೀಡಲಾಗುವುದು.

ಯಾವ ಯಾವ ಸಸಿಗಳಿಗೆ ಸಿಗಲಿದೆ ಸಹಾಯಧನ?

ರೈತರು ಹತ್ತಿರದ ಸಸ್ಯ ಕ್ಷೇತ್ರಗಳಿಂದ (ನರ್ಸರಿ) ರಿಯಾಯಿತಿ ದರದಲ್ಲಿ ಸಸಿಗಳನ್ನು ಪಡೆದು ತಮ್ಮ ಜಮೀನಿನಲ್ಲಿ ನೆಟ್ಟು ಬೆಳೆಸಿದರೆ ರೈತರು ಸಸಿಗಳನ್ನು ನೆಟ್ಟು ಪೋಶಿಸಲು ಸಹಾಯಧನ ನೀಡುತ್ತದೆ.  ಈ ಯೋಜನೆಯಡಿಯಲ್ಲಿ ರೈತರು ಶ್ರೀಗಂಧ, ತೇಗು, ಹೆಬ್ಬೇವು, ಮಹಾಗನಿ ಸೇರಿದಂತೆ ಇನ್ನಿತರ ಗಿಡಗಳನ್ನು ಪಡೆದು ಬೆಳೆಸಬಹುದು. ರೈತರು ಒಂದು ಹೆಕ್ಟೇರ್ ವರಿಗೆ ಸುಮಾರು 400 ಸಸಿಗಳಿಗೆ ಪ್ರೋತ್ಸಾಹಧನ ಪಡೆಯಬಹುದು.

50 thousand subsidy  ರೈತರಿಗೆ ಪ್ರೋತ್ಸಾಹ ಧನ ಹೇಗೆ ನೀಡಲಾಗುವುದು?

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ಪಡೆದ ಸಸಿಗಳನ್ನುಬೆಳೆಸಿದ  ರೈತರ ಜಮೀನಿಗೆ ಬಂದು ಅರಣ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ತಪಾಸಣೆ ಮಾಡುತ್ತಾರೆ.  ನೆಟ್ಟ ಸಸಿಗಳಲ್ಲಿ ಎಷ್ಟು ಸಸಿಗಳು ಬದುಕುಳಿದಿವೆ ಎಂಬುದನ್ನು ಪರಿಶೀಲಿಸುತ್ತಾರೆ. ಇದನ್ನೂ ಮೂರು ವರ್ಶದವರಿಗೆ ರೈತರ ಜಮೀನಿಗೆ ಬಂದು ಪರಿಶೀಲನೆ ಮಾಡುತ್ತಾರೆ.  ಬದುಕುಳಿದ ಸಸಿಗಳ ವಿವರಗಳನ್ನು ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ.  ನಂತರ ರೈತರ ಖಾತೆಗೆ ಪ್ರೋತ್ಸಾಹಧನವನ್ನು ಜಮೆ ಮಾಡಲಾಗುತ್ತದೆ.

ಸಸಿಗಳನ್ನು ಪಡೆಯಲು ಬೇಕಾಗವುದ ದಾಖಲೆಗಳು

ರೈತರು ಆಧಾರ್ ಕಾರ್ಡ್ ಹೊಂದಿರಬೇಕು. ಜಮೀನಿನ ಪಹಣಿ ಹೊಂದಿರಬೇಕು. ಬ್ಯಾಂಕ್ ಪಾಸ್ ಬುಕ್ ಇರಬೇಕು. ಇತ್ತೀಚಿನ ಮೂರು ಫೋಟೋಗಳಿರಬೇಕು.

ಸಸಿಗಳನ್ನು ಹೇಗೆ ಎಲ್ಲಿ ಪಡೆಯಬೇಕು?

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ರೈತರು ಸಸಿಗಳನವ್ನು ತಮ್ಮ ಹತ್ತಿರದ ಅರಣ್ಯ ಇಲಾಖೆಯ ಕಚೇರಿಯಲ್ಲಿ ಪಡೆಯಬಹುದು.  ಅರಣ್ಯ ಇಲಾಖೆಯಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ನೋಂದಣಿ ಮಾಡಿಸಿಕೊಳ್ಳಬೇಕು.

ಇದನ್ನೂ ಓದಿ : ರೈತರೇಕೆ ಬೆಳೆವಿಮೆ ಮಾಡಿಸಬೇಕು? ವಿಮೆ ಮಾಡಿಸುವುದರಿಂದಾಗುವ ಉಪಯೋಗ? ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು? ಇಲ್ಲಿದೆ ಮಾಹಿತಿ

ಅರ್ಜಿಯಲ್ಲಿ ತಮ್ಮ ಹೆಸರು, ವಿಳಾಸದೊಂದಿಗೆ ಯಾವ ಸಸಿಗಳು ಬೇಕು, ಎಸ್ಟು ಸಸಿಗಳು ಬೇಕು ಎಂಬುದನ್ನು ನಮೂದಿಸಬೇಕು. ಅರ್ಜಿಯ ಜೊತೆಗೆ ಕೇವಲ 10 ರೂಪಾಯಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು.

ಸಸಿ ವಿತರಣಾ ಕೇಂದ್ರಗಳು

ನಿಮ್ಮ ಜಿಲ್ಲೆಯಲ್ಲಿರುವ ಸಸಿಗಳ ವಿತರಣಾ ಕೇಂದ್ರದಲ್ಲಿ ಎಷ್ಟು ಸಸಿಗಳು ಲಭ್ಯವಿದೆ ಎಂಬುದನ್ನು ಚೆಕ್ ಮಾಡಬಹುದು. ರೈತರು ಈ

https://aranya.gov.in/Enursery/Home/Dashboardlocation.aspx

ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಅರಣ್ಯ ಇಲಾಖೆಯ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಜಿಲ್ಲೆ, ತಾಲೂಕು ಆಯ್ಕೆ ಮಾಡಿಕೊಂಡು ಹುಡುಕು ಮೇಲೆ ಕ್ಲಿಕ್ ಮಾಡಬೇಕು. ಆಗ ಕರ್ನಾಟಕದ ನಕ್ಷೆ ಕಾಣುತ್ತದೆ. ಅಲ್ಲಿನಿಮ್ಮ ಜಿಲ್ಲೆಯ ಹತ್ತಿರ ಸಸಿಗಳ ಸಂಕೇತ ಕಾಣುತ್ತದೆ. ಅಲ್ಲಿ  ಸಸ್ಯಕ್ಷೇತ್ರದ ಸ್ಥಳ  ಮತ್ತು ಎಷ್ಟು ಸಸಿಗಳು ಲಭ್ಯವಿದೆ ಎಂಬ ಮಾಹಿತಿ ಕಾಣುತ್ತದೆ.

ಯಾವ ಸಸಿಗಳು ಎಷ್ಟು ರೂಪಾಯಿಯಲ್ಲಿ ಸಿಗುತ್ತದೆ?

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ರೈತರಿಗೆ  5 x 8 ಅಳತೆಯ ಸಸಿಗಳಿಗೆ ಒಂದು ರೂಪಾಯಿ,8 x 12 ಅಳತೆಯ ಪಾಲಿ ಬ್ಯಾಗ್ ಗಳಿರುವ ಪ್ರತಿ ಸಸಿಗೆ 3 ರೂಪಾಯಿ ಅದೇ ರೀತಿ 10 x 16 ಅಳತೆಯ ಪ್ರತಿ ಸಸಿಗೆ 5 ರೂಪಾಯಿ ನೀಡಿ ಸಸಿಗಳನ್ನು ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ 1926 ಸಹಾಯವಾಣಿಗೆ ಕರೆ ಮಾಡಬಹುದು.

Leave a Comment