ಮೋಜಿನಿಯ ಸ್ಟೇಟಸ್ ಮೊಬೈಲ್ ನಲ್ಲೇ ಹೀಗೆ ಚೆಕ್ ಮಾಡಿ

Written by Ramlinganna

Updated on:

check mojini status in mobile ಮೋಜಿನಿಗೆ ಅರ್ಜಿ ಸಲ್ಲಿಸಿದ ರೈತರು ತಮ್ಮ ಅರ್ಜಿಯ ಸ್ಟೇಟಸನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಇದಕ್ಕಾಗಿ ರೈತರು ಕಚೇರಿಗಳಿಗೆ ಅಲೆಯಬೇಕಿಲ್ಲ. ಫೋನ್ ಮಾಡಿ ಕೇಳುವ ಅಗತ್ಯವೂ ಇಲ್ಲ. ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಮನೆಯಲ್ಲಿಯೇ ಕುಳಿತು ಮೋಜಿನಿ ಅರ್ಜಿಯ ಸ್ಟೇಟಸನ್ನು ಚೆಕ್ ಮಾಡಬಹುದು.

ಏನಿದು ಮೋಜಿನಿ?

ಭೂಮಿ ಅಳತೆ ಮಾಡುವ ಪ್ರಕ್ರಿಯೆಯನ್ನುಮೋಜನಿ ಎಂದು ಕರೆಯುವರು.

ಸಾಮಾನ್ಯವಾಗಿ ರೈತರು ತಮ್ಮ ಜಮೀನನ್ನು ಮೋಜಿಣಿಗೆ ಅರ್ಜಿ ಏಕೆ ಸಲ್ಲಿಸುತ್ತಾರೆಂದರೆ, ತಮ್ಮ ಜಮೀನು ಒತ್ತುವರಿಯಾಗಿದ್ದರೆ ಅಥವಾ ತಮ್ಮ ಜಮೀನಿಗೆ ಹೋಗಲು ರಸ್ತೆಯಿಲ್ಲದಿದ್ದರೆ ಮೋಜಿನಿಗೆ ಅರ್ಜಿ ಸಲ್ಲಿಸುತ್ತಾರೆ. ರಸ್ತೆಯೂ ಒತ್ತುವರಿಯಾಗಿದ್ದರೆ ಮೋಜಿನಿಗೆ ಅರ್ಜಿ ಸಲ್ಲಿಸಿದ ನಂತರ ಭೂ ಮಾಪಕ ಇಲಾಖೆಯವರು ಅರ್ಜಿ ಸಲ್ಲಿಸಿದ ರೈತರ ಜಮೀನಿಗೆ ಬಂದು ಭೂಮಿ ಅಳತೆ ಮಾಡುತ್ತಾರೆ.ಒಂದು ವೇಳೆ ಜಮೀನು ಒತ್ತುವರಿಯಾಗಿದ್ದರೆ ಆ ಸ್ಥಳವನ್ನು ಮಾರ್ಕ್ ಮಾಡಿ ಗಡಿಗಳನ್ನು ಗುರುತಿಸುತ್ತಾರೆ.

check mojini status in mobile ಮೋಜಿನಿ ಅರ್ಜಿಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಬಳಿಯಿರುವ ಸ್ಮಾರ್ಟ್ ಫೋನಿನಲ್ಲಿ ಮೋಜಿನಿಗೆ ಅರ್ಜಿ ಸಲ್ಲಿಸಿದವರು ಈ

https://bhoomojini.karnataka.gov.in/service19/report/Applicationdetails

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೋಜಿನಿಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಅಪ್ಲಿಕೇಶನ್ ನಂಬರ್, ಮೊಬೈಲ್ ನಂಬರ್ ಹಾಗೂ ಸರ್ವೆ ನಂಬರ್ ಹೀಗೆ ಮೂರು ಆಯ್ಕೆಗಳಿರುತ್ತವೆ.

ಅಲ್ಲಿ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.  ಇದಾದಮೇಲೆ ನಿಮ್ಮ ಜಿಲ್ಲೆ, ನಿಮ್ಮ ತಾಲೂಕು, ನಿಮ್ಮ ಹೋಬಳಿ ಹಾಗೂ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಯಾವ ಸರ್ವೆ ನಂಬರ್ ಮೋಜಿನಿಗೆ ಅರ್ಜಿ ಸಲ್ಲಿಸಿದ್ದೀರೋ ಆ ಸರ್ವೆ ನಂಬರ್ ನಮೂದಿಸಿ ಗೋ ಮೇಲೆ ಕ್ಲಿಕ್ ಮಾಡಬೇಕು.

ಆಗ ಸರ್ನೋಕ್ ಮತ್ತು ಹಿಸ್ಸಾ ನಂಬರ್ ಆ್ಯಕ್ಟಿವ್ ಆಗುತ್ತದೆ. ಸೆಲೆಕ್ಟ್ ಸರ್ನೋಕ್ ನಲ್ಲಿ * ಹಿಸ್ಸಾ ನಂಬರ್ ಗೊತ್ತಿದ್ದರೆ ಹಿಸ್ಸಾ ನಂಬರ್ ಹಾಕಬೇಕು. ಇಲ್ಲದಿದ್ದರೆ * ನಮೂದಿಸಬೇಕು. ಇದಾದ ಮೇಲೆ ಗೆಟ್ ಸ್ಟೇಟಸ್ ಮೇಲೆ ಚೆಕ್ ಮಾಡಬೇಕು.

ಆಗ ಕೆಳಗಡೆ ಅಪ್ಲಿಕೇಶನ್ ನಂಬರ್, ಟ್ರ್ಯಾಕ್ ಸ್ಟೇಟಸ್, ತಾಲೂಕು, ಗ್ರಾಮ, ಅರ್ಜಿಯ ವಿಧ, ಸರ್ವೆ ನಂಬರ್, ಅರ್ಜಿ ಕೊಟ್ಟ ದಿನ, ಅರ್ಜಿ ಸಲ್ಲಿಸಿದವರ ಹೆಸರು, ನಿಮ್ಮ ಮೊಬೈಲ್ ನಂಬರಿನ ಕೊನೆಯ ನಾಲ್ಕು ಅಂಕೆಗಳು ಕಾಣುತ್ತವೆ. ಟ್ರಾಕ್ ಸ್ಟೇಟಸ್ ಕೆಳಗಡೆ ಕಾಣುವ ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್  ತೆರೆದುಕೊಳ್ಳುತ್ತದೆ.

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣ ಈ ಸಲ ಯಾರಿಗೆ ಜಮೆಯಾಗುತ್ತದೆ  ಇಲ್ಲಿದೆ ಮಾಹಿತಿ

ಅಲ್ಲಿ ಅರ್ಜಿ ಸ್ವೀಕರಿಸಿದ ದಿನ, ಸರ್ವೆಯರ್ ಅರ್ಜಿ ನೋಡಿದ ದಿನ, ಸೂಪರ್ ವೈಸರ್ ಅರ್ಜಿ ಸ್ವೀಕರಿಸಿದ ದಿನ,  ಒಂದು ವೇಳೆ ಅರ್ಜಿ ತಿರಸ್ಕೃತಗೊಂಡಿದ್ದರೆ ಆ ದಿನಾಂಕ ಹಾಗೂ ಅರ್ಜಿಯನ್ನು ತಹಶೀಲ್ದಾರರು ನೋಡಿದ್ದಾರೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.  ಮೋಜಿನಿಗೆ ಸಲ್ಲಿಸಿದ ಅರ್ಜಿಯ ಪ್ರಕಾರ ಯಾವ ದಿನಾಂಕದಂದು ಮೋಜಿನಿ ಮಾಡಲು ಬರುತ್ತಾರೆ? ಯಾರು ಬರುತ್ತಾರೆ ಎಂಬಿತ್ಯಾದಿ ಮಾಹಿತಿ ಕಾಣುತ್ತದೆ.

ಪಹಣಿಯಲ್ಲಿರುವ ಬಹುಮಾಲಿಕರಿಂದ ಏಕಮಾಲಿಕರಾಗಿ ಮಾಡುವಾಗ ಮೋಜಿನಿಯ ಅವಶ್ಯಕತೆ

ಜಮೀನಿನ ಪಹಣಿಯಲ್ಲಿ ಒಂದು ವೇಳೆ ಒಬ್ಬರಿಗಿಂತ ಹೆಚ್ಚು ಜನರು ಮಾಲಿಕರಿದ್ದರೆ ಆಗ ಮೋಜಿನಿಗೆ ಅರ್ಜಿ ಸಲ್ಲಸಬೇಕಾಗುತ್ತದೆ. ಮೋಜನಿಗೆ ಅರ್ಜಿಸಲ್ಲಿಸಿದ ನಂತರ ಭೂ ಮಾಪಕರು ಸ್ಥಳಕ್ಕೆ ಬಂದು ಜಮೀನು ಅಳತೆ ಮಾಡುತ್ತಾರೆ. ನಂತರ ಪ್ರತ್ಯೇಕವಾಗಿ ಏಕಮಾಲಿಕತ್ವ ಮಾಡಲಾಗುವುದು. ಇದರಿಂದಾಗಿ ರೈತರಿಗೆ ಬೆಳೆ ಸಾಲ, ಸರ್ಕಾರದ ಯೋಜನೆಗಳು ಪಡೆಯಲು ಅನುಕೂಲವಾಗುತ್ತದೆ.

Leave a Comment