Raking star Yash ಬಗ್ಗೆ ನಿಮಗೆ ಗೊತ್ತೇ? ಇಲ್ಲಿದೆ ಮಾಹಿತಿ

Written by Ramlinganna

Updated on:

Raking star Yash ಎಂದೇ ಪ್ರಸಿದ್ಧಿ ಹೊಂದಿದ ಯಶ್ (ನವೀನ್ ಕುಮಾರ ಗೌಡ) ಇಂದು ವಿಶ್ವಮಟ್ಟಕ್ಕೆ ಹೆಸರು ಪಡೆದಿರುವುದು ತಮಗೆಲ್ಲಾ ಗೊತ್ತಿದ್ದ ಸಂಗತಿ. ಇಂದು ಜನವರಿ 8 ರಂದು ಅವರ ಹುಟ್ಟುಹಬ್ಬ. ಇಂದು ದೇಶಾದ್ಯಂತ ಅವರ ಅಭಿಮಾನಿಗಳು ಯಶ್ ರರ ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳುತ್ತಿದ್ದಾರೆ.  ಆದರೆ ಬಹಳಷ್ಟು ಜನರಿಗೆ ಯಶ್ ನಡೆದುಬಂದ ದಾರಿ ಬಗ್ಗೆ ಗೊತ್ತಿರುವುದಿಲ್ಲ. ಈಗಲೂ ಬಹಳಷ್ಟು ಜನರು ಅವರ ಬಗ್ಗೆ ತಿಳಿಯಲು ಉತ್ಸುಕ ಹೊಂದಿದ್ದಾರೆ.  ಸಿನಿಮಾ ಪ್ರಿಯರಿಗಾಗಿ ರಾಕಿಂಗ್ ಸ್ಟಾರ್ ಬಗ್ಗೆ ಇಲ್ಲಿ ಕೆಲವು ಮಾಹಿತಿಗಳನ್ನು ನೀಡಲಾಗಿದೆ.

ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡುತ್ತಾ ಈಗ ಭಾರತೀಯ ಚಲನಚಿತ್ರದ ನಟರಾಗಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೆ ಮೊದಲು ಅವರು ರಂಗಕಲೆ ನಾಟಕಗಳು ಹಾಗೂ ದೂರದರ್ಶನದಲ್ಲಿ ಕಾಣಿಸಿಕೊಂಡಿದ್ದರು. 2000ರ ದಶಕದಲ್ಲಿ ಹಲವಾರು ದೂರದರ್ಶನ ಸರಣಿಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ತಮ್ಮವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ.

Raking star Yash ರವರ ಬಾಲ್ಯಜೀವನ

ಹಾಸನ ಜಿಲ್ಲೆಯ  ಬೂವನಹಳ್ಳಿ ಗ್ರಾಮದ ಅರುಣಕುಮಾರ ಹಾಗೂ ಪುಷ್ಪಾ ದಂಪತಿಗಳಿಗೆ 1986 ಜನವರಿ 8 ರಂದು ಜನಿಸಿದ್ದಾರೆ. ಅವರಿಗೆ ನಂದಿನಿ ಎಂಬ ತಂಗಿಯೂ ಇದ್ದಾರೆ. ಯಶ್ ರವರ ತಂದೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ತಾಯಿ ಪುಷ್ಪ ಗೃಹಿಣಿಯಾಗಿದ್ದಾರೆ.

ಯಸ್ ಚಿಕ್ಕ ವಯಸ್ಸಿನಲ್ಲಿಯೇ ನಟರಾಗಬೇಕೆಂಬ ಹಂಬಲ ಹೊಂದಿದ್ದರು. ಮೈಸೂರಿನ ಶಾಲೆಯಲ್ಲಿ ರಂಗಭೂಮಿ ಮತ್ತು ನೃತ್ಯ ಸ್ಪರ್ಧೆಗಳಲ್ಲಿ ಸಕ್ರೀಯರಾಗಿ ಭಾಗವಹಿಸಿದ್ದರು. ಯಶ್ ರವರ ತಂದೆ ತನ್ನ ಮಗ ಸರ್ಕಾರಿ ಅಧಿಕಾರಿಯಾಗಬೇಕೆಂದು ಬಯಸಿದ್ದರು.

ಅವರು ಮಹಾರಾಜ ಹೈಸ್ಕೂಲ್ ಶಾಲಾ ಶಿಕ್ಷಣವನ್ನು ಪಡೆದು ಬಾಲ್ಯದ ದಿನಗಳನ್ನು ಮೈಸೂರಿನ ಪಡವಾರಹಳ್ಳಿಯಲ್ಲಿ ಕಳೆದರು. ತಮ್ಮ ಶಾಲಾ ಶಿಕ್ಷಣದ ನಂತರ ನಾಟಕಕಾರಬಿವಿ. ಕಾರಂತರಿಂದ ರೂಪುಗೊಂಡ ಬೆನಕ ನಾಟಕ ಶಾಲೆಯನ್ನು ಸೇರಿದರು.

ಇದನ್ನೂ ಓದಿ ಪಿಯುಸಿ ಪಾಸಾದವರಿಂದ ಅರಣ್ಯ ರಕ್ಷಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಯಶ್ ತಮ್ಮ ಬಹುಕಾಲದ ಪ್ರೇಯಸಿ ರಾಧಿಕಾ ಪಂಡಿತ್ ರವರನ್ನು 2016ರಲ್ಲಿ ಮದುವೆಯಾದರು. ಈ ದಂಪತಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿದೆ.

ಧಾರವಾಹಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಅವರು ಮಳೆಬಿಲ್ಲು ಹಾಗೂ ಪ್ರೀತಿಇಲ್ಲದ ಮೇಲೆ ಸೇರಿದಂತೆ ಇತರ ಧಾರವಾಹಿಗಳಲ್ಲಿ ನಟಿಸಿದ್ದಾರೆ.

ಅವರು 2007 ರಲ್ಲಿ ಜಂಬದ ಹುಡುಗಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಮೊಗ್ಗಿನ ಮನಸ್ಸು, ರಾಕಿ, ಕಳ್ಳರ ಸಂತೆ, ಗೋಕುಲ, ತಮಸ್ಸು, ಮೊದಲ ಸಲ, ರಾಜಧಾನಿ, ಕಿರಾತಕ, ಲಕ್ಕಿ, ಜಾನು, ಡ್ರಾಮ, ಚಂದ್ರ, ಗೂಗ್ಲಿ, ರಾಜಾಹುಲಿ, ಗಜಕೇಸರಿ, ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ, ಮಾಸ್ಟರ್ ಪೀಸ್, ಸಂತು ಸೈಟ್ ಫಾರ್ವರ್ಡ್, ಕೆಜಿಎಫ್ ಭಾಗ 1, ಕೆಜಿಎಫ್ ಭಾಗ 2 ಚಿತ್ರಗಳಲ್ಲಿ ನಟಿಸಿದ್ದಾರೆ.

ಕೆಜಿಎಫ್ ಚಲನಚಿತ್ರ ರಾಜ್ಯವಷ್ಟೇ  ಅಲ್ಲ, ದೇಶ ಮತ್ತು ವಿಶ್ವದಾದ್ಯಂತ ಅವರಿಗೆ ಹೆಸರು ತಂದಿತು. ಈ ಚಲನಚಿತ್ರ ರಾಕಿಂಗ್ ಸ್ಟಾರ್ ರವರಿಗೆ ಹೊಸ ಲುಕ್ ದೊಂದಿಗೆ ಪರಿಚಯಿಸಿತು. ಈ ಚಿತ್ರ ರಾಷ್ಟ್ರಮಟ್ಟದಲ್ಲಿ ಹೆಸರು ಪಡೆಯಿತು.

ಇದನ್ನೂ ಓದಿ Voter listನಲ್ಲಿ ನಿಮ್ಮ ಹೆಸರು ಇದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

2018 ರಲ್ಲಿ ಯಸ್ ಎರಡು  ಭಾಗಗಳ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸರಣಿಯ ಮೊದಲ ಕಂತಿನಲ್ಲಿ ನಟಿಸಿದರು. ಕೆಜಿಎಫ್ ಅಧ್ಯಾಯ1 ಇದು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಡಬ್ಬಿಂಗ್ ಆವೃತ್ತಿಗಳೊಂದಿಗೆ ಕನ್ನಡದಲ್ಲಿ ಬಿಡುಗಡೆಯಾಯಿತು. ಈ ಚಿತ್ರಕ್ಕಾಗಿ ಅವರು ಗಡ್ಡವನ್ನು ಬೆಳೆಸಿದರು. ಈ ಚಿತ್ರ ರಾಷ್ಟ್ರವ್ಯಾಪಿ ಹೆಸರು ಪಡೆಯಿತು. ರಾಕಿ ಪಾತ್ರದಲ್ಲಿ ಯಶ್ ್ವರ ಅಭಿನಯವು ಪ್ರಶಂಸೆಗೆ ಪಾತ್ರವಾಯಿತು. ಕನ್ನಡದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಇವರು ಒಬ್ಬರಾಗಿದ್ದಾರೆ.

Leave a Comment