ಅರಣ್ಯ ರಕ್ಷಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Written by Ramlinganna

Updated on:

Forest guard job notification ನೀವು ಪಿಯುಸಿ ಪಾಸ್ ಆಗಿದ್ದೀರಾ? ಅರಣ್ಯ ಇಲಾಖೆಯಲ್ಲಿ ಜಾಬ್ ಮಾಡಲು ಆಸಕ್ತಿ ಹೊಂದಿದ್ದೀರಾ? 47 ಸಾವಿರ ರೂಪಾಯಿಯವರೆಗೆ ಸಂಬಳ ಬೇಕೆ? ಕೂಡಲೇ ಇಲ್ಲಿ ಅರ್ಜಿ ಸಲ್ಲಿಸಿ.

ಹೌದು, ಪಿಯುಸಿ ಹಾಗೂ ಪಿಯುಸಿ ಅಥವಾ ತತ್ಸಮಾನ, ಮೂರು ವರ್ಷದ ಡಿಪ್ಲೋಮಾ ಪಾಸಾದವರಿಗಾಗಿ ಇಲ್ಲಿದೆ ಸಂತಸದ ಸುದ್ದಿ. ಕರ್ನಾಟಕ ಅರಣ್ಯ ಇಲಾಖೆಯ ವಿವಿಧ ವೃತ್ತಗಳಲ್ಲಿ ಖಾಲಿಯಿರುವ 540 ಗಸ್ತು ಅರಣ್ಯ ಪಾಲಕ ಅಥವಾ ಅರಣ್ಯ ರಕ್ಷಕ (Forest Guard)  ಹುದ್ದೆಗಳಿಗೆ ಅರ್ಹ ಪುರುಷ, ಮಹಿಳಾ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಇದೇ ತಿಂಗಳು ಡಿಸೆಂಬರ್ 30 ಕೊನೆಯ ದಿನವಾಗಿದೆ.

Forest guard job notification ಅರಣ್ಯ ರಕ್ಷಕ ಹುದ್ದೆಗೆ ಬೇಕಾಗುವ ಅರ್ಹತೆ

ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ಪಿಯುಸಿ ಪಾಸಾಗಿರಬೇಕು.  ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷವಾಗಿರಬೇಕು. ಗರಿಷ್ಠ 27 ವರ್ಷವಾಗಿರಬೇಕು. ಪ್ರವರ್ಗ 2ಎ, 2ಬಿ, 3ಎ, 3ಬಿ ಗಳಿಗೆ ಗರಿಷ್ಠ 30 ವರ್ಷ ಆಗಿರಬೇಕು. ಎಸ್.ಸಿ, ಎಸ್.ಟಿ, ಪ್ರವರ್ಗ 1 ರ ಅಭ್ಯರ್ಥಿಗಳಿಗೆ ಗರಿಷ್ಠ 32 ವಯೋಮಿತಿಯಲ್ಲಿ ಸಡಿಲಿಕೆ ಇದೆ. ಮಾಜಿ ಸೈನಿಕರಿಗೆ ಹಾಗೂ ಅರಣ್ಯ ಇಲಾಖೆಯಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವ ಅರಣ್ಯ ಪ್ರೇಕ್ಷಕರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ

ಸಾಮಾನ್ಯ ಪ್ರವರ್ಗಗಳಾದ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 200 ರೂಪಾಯಿ, ಇದರಲ್ಲಿ ಮಹಿಳಾ ಅಭ್ಯರ್ಥಿಗಳಿಗೆ, ತೃತೀಯ ಲಿಂಗಿಗಳಿಗೆ 100 ರೂಪಾಯಿ, ಎಸ್.ಸಿ, ಎಸ್.ಟಿ ಪ್ರವರ್ಗ 1 ರ ಅಭ್ಯರ್ಥಿಗಳಿಗೆ 100 ರೂಪಾಯಿ ಆಗಿದೆ. ಇದರಲ್ಲಿನ ಮಹಿಳಾ ಅಭ್ಯರ್ಥಿಗಳಿಗೆ ತೃತೀಯ ಲಿಂಗಿಗಳಿಗೆ 50 ರೂಪಾಯಿ ಇದೆ.

ಪರೀಕ್ಷೆ ಹೇಗಿರಲಿದೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ದೈಹಿಕ ಸಾಮರ್ಥ್ಯ ಹಾಗೂ ದೈಹಿಕ ಸಹಿಷ್ಣುತೆ ಪರೀಕ್ಷೆ ನಡೆಯಲಿದೆ. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕ ಮಾನದಂಡಗಳಿವೆ.

ದೈಹಿಕ ಪರೀಕ್ಷೆಯಲ್ಲಿ ಪಾಸಾಗುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರುತ್ತದೆ. ಲಿಖಿತ ಪರೀಕ್ಷೆ ವಸ್ತುನಿಷ್ಟ  ಮಾದರಿಯಲ್ಲಿ ಇರುತ್ತದೆ. 2 ಗಂಟೆ ಅವಧಿಯ 100 ಅಂಕಗಳ ಒಂದೇ ಪತ್ರಿಕೆ ಇದಾಗಿರುತ್ತದೆ.ಇದರಲ್ಲಿ ಎರಡು ಭಾಗ ಇದ್ದು, 40 ಅಂಕಗಳಿಗೆ ಗಣಿತ ವಿಷಯ ಆಧರಿಸಿದ 40 ಆಪ್ಟಿಟ್ಯೂಡ್ ಪ್ರಶ್ನೆಗಳಿರುತ್ತವೆ. ಎರಡನೇ ಭಾಗದಲ್ಲಿ ಸಾಮಾನ್ಯ ಜ್ಞಾನ, ಪ್ರಚಲಿತ ವಿಷಯಕ್ಕೆ ಸಂಬಂಧಿಸಿದಂತ 60 ಅಂಕಗಳಿಗೆ 60 ಪ್ರಶ್ನೆಗಳಿರುತ್ತವೆ.

ಇದನ್ನೂ ಓದಿ ಅನ್ನಭಾಗ್ಯ ಹಣ ನಿಮಗೆ ಜಮೆಯಾಗಿಲ್ಲವೇ? ಸ್ಟೇಟಸ್ ಚೆಕ್ ಮಾಡಿ

ಪಿಯುಸಿವರೆಗಿನ ಪಠ್ಯಕ್ರಮವನ್ನು ಇದು ಹೊಂದಿದ್ದು, ತಲಾ 4 ತಪ್ಪು ಉತ್ತರಗಳಿಗೆ1 ಅಂಕ ಕಳೆಯಲಾಗುತ್ತದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸುವ ಅಂಕಗಳು ಹಾಗೂ ಪಿಯುಸಿ ತತ್ಸಮಾನದ ಮೆರಿಟ್ ಅನ್ನು ಪರಿಗಣಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಹುದ್ದೆಗಳ ವಿಭಾಗವಾರು ವರ್ಗೀಕರಣ ಮತ್ತು ಹೆಚ್ಚಿನ ಮಾಹಿತಿಗಾಗಿ ಅರಣ್ಯಇಲಾಖೆಯ ಈ

https://aranya.gov.in/aranyacms/(S(4d35wv4ot5ze52nm5g0jdcuv))/Kannada/HomeKannada.aspx

ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಅರಣ್ಯ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮೇಲ್ಗಡೆ

2023-24ನೇ ಸಾಲಿನಲ್ಲಿ ಗಸ್ತು ವನಪಾಲಕರ (ಅರಣ್ಯ ರಕ್ಷಕರ) ನೇಮಕಾತಿ ಅದಿಸೂಚನೆ  ಕುರಿತಂತೆ ಒಂದು ಲೈನ್ ಸ್ಕ್ರಾಲ್ ಆಗುತ್ತಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಅಧಿಸೂಚನೆ ಪೇಜ್ ಓಪನ್ ಆಗುತ್ತದೆ.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ

https://recruitapp.in/fguard2023/instruction

ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನ್ಯೂ ರೆಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಇಲಾಖಾ ಜಾಲತಾಣ ನಿಂದ ಮುದ್ರಿತ ಅರ್ಜಿ ಶುಲ್ಕದ ಚಲನ್ ಪ್ರತಿಯನ್ನು ತೆಗದುಕೊಂಡು ಇ ಪಾವತಿ ಸೌಲಭ್ಯವಿರುವ ಭಾರತೀಯ ಅಂಚೆ ಕಚೇರಿಯಲ್ಲಿ ಸದರಿ ಪ್ರತಿಯನ್ನು ಹಾಜರುಪಡಿಸಿ ಪ್ರವರ್ಗವಾರು ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಬೇಕು.

Leave a Comment