ವಿವಿಧ ಹುದ್ದೆಗಳಿಗೆ ಡಿಸೆಂಬರ್ 19 ರಂದು ನೇರ ಸಂದರ್ಶನ

Written by Ramlinganna

Updated on:

Direction interview for posts : ಕಲಬುರಗಿ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಗೆ ಹುದ್ದೆ ನೀಡಲು ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಹೌದು, ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಡಿಸೆಂಬರ್ 19 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜಿನ ಹಿಂದುಗಡೆಯಿರುವ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಸಹಾಯಕ ನಿರ್ದೇಶಕ ತಿಳಿಸಿದ್ದಾರೆ.

Direction interview for posts ನೇರ ಸಂದರ್ಶನಕ್ಕೆ ಬೇಕಾಗಿರುವ ಅರ್ಹತೆಗಳು

ಸೇಲ್ಸ್ ಎಕ್ಸಿಕ್ಯೂಟಿವ್, ಸರ್ವಿಸ್ ಆಡ್ವೈಜರ್ ಆ್ಯಂಡ್ ಸರ್ವಿಸ್ ಟೆಕ್ನಿಶಿಯನ್ ಹುದ್ದೆಗೆ ಪಿಯುಸಿ, ಡಿಪ್ಲೋಮಾ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 28 ವಯೋಮಾನದೊಳಗಿರಬೇಕು. ಕಲಬುರಗಿ, ಯಾದಗಿರಿ, ಬೀದರ್ ನಿವಾಸಿಯಾಗಿರಬೇಕು. ಒಂದು ವರ್ಷ ಅನುಭವ ಹೊಂದಿರಬೇಕು.

ಮಲ್ಚಿಪಲ್ ಒಪನಿಂಗ್ ಹುದ್ದೆಗೆ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 28 ವಯೋಮಾನದೊಳಗಿರಬೇಕು, ಬೆಂಗಳೂರು ನಿವಾಸಿಯಾಗಿರಬೇಕು.

ಇದನ್ನೂ ಓದಿ ಬೆಳೆಹಾನಿ ಪರಿಹಾರ ಯಾವ ರೈತರಿಗೆ ಜಮೆಯಾಗಲಿದೆ? ಇಲ್ಲಿದೆ ಮಾಹಿತಿ

ಬಿವರೆಜ್ ಇನ್ಸುರೆನ್ಸ್ ಅಪ್ರೆಂಟಿಶಿಫ್ ಹುದ್ದೆಗೆ ಐಟಿಐ, ಎಲೆಕ್ಟ್ರಿಶಿಯನ್ ಫಿಟ್ಟರ್ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 24 ವಯೋಮಾನದೊಳಗಿರಬೇಕು. ಕಲಬುರಗಿ ನಿವಾಸಿಯಾಗಿರಬೇಕು.

ಸೆಲ್ಸ್ ಎಕ್ಸಿಕ್ಯೂಟಿವ್ ಮತ್ತು ಟೆಲಿಕಾಲರ್ ಹುದ್ದೆಗೆ ಬಿಬಿಎ, ಬಿಕಾಂ, ಬಿಬಿಎಂ, ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು.

ಫೀಲ್ಡ್ ಆಫಿಸರ್, ಸಿನಿಯರ್ ಫೀಲ್ಡ್ ಆಫೀಸರ್ ಹುದ್ದೆಗೆ ಎಸ್ಎಸ್.ಎಲ್.ಸಿ ಪಾಸಾಗಿರಬೇಕು. ವಯೋಮಿತಿ 18 ರಿಂದ 28 ವಯೋಮಾನದೊಳಗಿರಬೇಕು. ಸೇಡಂ, ಯಾದಗಿರಿ, ಆಳಂದ, ಶಹಾಪೂರ ನಿವಾಸಿಯಾಗಿರಬೇಕು.

ಎಸೋರ್ಸ್ ಪರಸನ್ ಹುದ್ದೆಗೆ ಬಿಎ, ಬಿಇಡಿ, ಬಿಎಸ್.ಸಿ ಬಿಇಡಿ ಪಾಸಾಗಿರಬೇಕು. ವಯೋಮಿತಿ 18 ರಿಂದ 40 ವರ್ಷದೊಳಗಿರಬೇಕು. ಕಲಬುರಗಿ ಮತ್ತು ತಾಲೂಕು ನಿವಾಸಿಯಾಗಿರಬೇಕು. ಒಂದು ವರ್ಷ ಸೇಲ್ಸ್ ಅನುಭವಇರಬೇಕು.

ಇದನ್ನೂ ಓದಿ ಗೃಹಲಕ್ಷ್ಮೀ ಯೋಜನೆಯ 4ನೇ ಕಂತಿನ ಹಣ ಜಮೆ: ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ

ಸೆಲ್ಸ್ ಮ್ಯಾನೇಜರ್ ಹುದ್ದೆಗೆ ಯಾವುದೇ ಪದವಿ ಹೊಂದಿರಬೇಕು. ವಯೋಮಿತಿ 20 ರಿಂದ 38 ವಯೋಮಾನದೊಳಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝರಾಕ್ಸ್ ಪ್ರತಿ, ರೆಸ್ಯೂಮ್ (ಬಯೋಡಾಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ  ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ  08372 274846 ಗೆ ಮೊಬೈಲ್ ಸಂಖ್ಯೆ 80033 43944  ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

Leave a Comment