ಬೆಳೆಹಾನಿ ಪರಿಹಾರ ಯಾವ ರೈತರಿಗೆ ಜಮೆಯಾಗಲಿದೆ?

Written by Ramlinganna

Updated on:

Crop loss compensation fund ಬೆಳೆ ಹಾನಿಯಾದ ರೈತರ ಖಾತೆಗೆ ಈ ವಾರ ತಾತ್ಕಾಲಿಕವಾಗಿ 2 ಸಾವಿರ ರೂಪಾಯಿ ಯಾವ ಯಾವ ರೈತರ ಖಾತೆಗೆ ಜಮೆಯಾಗಲಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಬೆಳೆ ಹಾನಿ ಸಂಬಂಧ ತಾತ್ಕಾಲಿಕ ಪರಿಹಾರ ಮೊತ್ತ 2 ಸಾವಿರ ರೂಪಾಯಿಗಳನ್ನು ಈ ವಾರದಲ್ಲಿ ಪ್ರಾಯೋಗಿಕವಾಗಿ ಒಂದು ತಾಲೂಕಿನ ರೈತರಿಗೆ ಪಾವತಿಸಲಾಗುವುದು. ಚಳ್ಳಕೆರೆ ತಾಲೂಕಿನಲ್ಲಿ ಇದರ ಪ್ರಯೋಗ ಆರಂಭವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಅವರು ಬುಧವಾರ ಕಾಂಗ್ರೆಸ್ ನ ರಾಜೇಂದ್ರ ರಾಜಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬರ ಪರಿಹಾರ ನೀಡುವಂತೆ ಈಗಾಗಲೇ ಮನವಿ ಮಾಡಲಾಗಿದೆ. ಕೇಂದ್ರ ಗೃಹ ಹಾಗೂ ಕೃಷಿ ಸಚಿವರ ಭೇಟಿಗೆ ಅವಕಾಶ ಕೋರಿದರೂ ಕಾಲವಕಾಶ ಸಿಕ್ಕಿಲ್ಲ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿ ಬೇಗ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದೇವೆ. ಆದರೂ ಈವರೆಗೆ ಪರಿಹಾರ ಬಿಡುಗಡೆಯಾಗಿಲ್ಲ. ಹೀಗಾಗಿ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಎರಡು ಸಾವಿರ ರೂಪಾಯಿಗಳನ್ನು ಈ ವಾರದೊಳಗೆ ನೀಡಲು ನಿರ್ಧರಿಸಿದ್ದೇವೆ. ಒಂದು ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು ಎಂದರು.

Crop loss compensation fund ಬೆಳೆ ಹಾನಿ ಪರಿಹಾರ ಯಾವ ಬೆಳೆಗೆ ಎಷ್ಟು ಸಿಗಲಿದೆ?

ಬೆಳೆ ಹಾನಿ ಪರಿಹಾರದ ಹಣವನ್ನು ತಾತ್ಕಾಲಿಕವಾಗಿ 2 ಸಾವಿರ ರೂಪಾಯಿ ನೀಡಲಾಗುತ್ತಿದೆ. ಹೌದು. ಒಂದು ವಾರದೊಳಗೆ ತಾತ್ಕಾಲಿಕ ಬೆಳೆ ಹಾನಿ ಪರಿಹಾರ ಜಮೆಯಾಗಲಿದೆ. ಆದರೆ ಕೇಂದ್ರ ಸರ್ಕಾರವು ಈ ವರ್ಷ ಬೆಳೆ ಹಾನಿ ಪರಿಹಾರ ಹೆಚ್ಚಿಸಿದೆ.

ಇದನ್ನೂ ಓದಿ ಗೃಹಲಕ್ಷ್ಮೀ ಯೋಜನೆಯ 4ನೇ ಕಂತಿನ ಹಣ ಜಮೆ: ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ

ಹೌದು, ಪ್ರತಿ ಹೆಕ್ಟೇರ್ ಮಳೆ ಆಶ್ರಿತ ಬೆಳೆಗಳಿಗೆ 8500 ರೂಪಾಯಿ ನೀಡಲಾಗುವುದು. ಅದೇ ರೀತಿ ನೀರಾವರಿ ಬೆಳೆಗಳಿಗೆ 17 ಸಾವಿರ ರೂಪಾಯಿ ನೀಡಲಾಗುವುದು. ಬಹುವಾರ್ಷಿಕ ಬೆಳೆಗಳಿಗೆ 22500 ರೂಪಾಯಿ ಪರಿಹಾರ ನಿಗದಿ ಮಾಡಿದೆ. ಸರ್ಕಾರ ಮಾರ್ಗ ಸೂಚಿಯನ್ವಯ ರೈತರಿಗೆ 2 ಹೆಕ್ಟೇರ್ ವರೆಗೆ ಮಾತ್ರ ಬೆಳೆ ಹಾನಿ ಪರಿಹಾರ ವಿತರಿಸಲಾಗುವುದು.

ಬರ ಪರಿಹಾರ ಹಣ ಜಮೆಯಾಗಬೇಕೇದರೆ ಎಲ್ಲಿ ರೈತರ ಹೆಸರು ಇರಬೇಕು?

ಬರಗಾಲ ಪರಿಹಾರ ಹಣ ಜಮೆಯಾಗಲು ಫ್ರೂಟ್ಸ್ ಐಡಿ ಹೊಂದಿರುವುದು ಕಡ್ಡಾಯವಾಗಿದೆ. ಇನ್ನೂ ರೈತರಿಗೆ ಫ್ರೂಟ್ಸ್ ಐಡಿ ಮಾಡಿಕೊಳ್ಳಲು ಅವಕಾಶವಿದೆ. ಬರಗಾಲ ಪರಿಹಾರ ಹಣ ಬಿಡುಗಡೆಯಾಗುವ ಮೊದಲೇ ಫ್ರೂಟ್ಸ್ ಐಡಿ ಮಾಡಿಕೊಳ್ಳಬೇಕು. ನಿಮ್ಮ ಹೆಸರಿಗೆ ಪ್ರೂಟ್ಸ್ ಐಡಿ ಇದೆಯೋ ಇಲ್ಲವೋ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಫ್ರೂಟ್ಸ್ ಐಡಿ ಇದೆಯೋ ಇಲ್ಲವೋ ಇಲ್ಲೇ ಚೆಕ್ ಮಾಡಿ

ರೈತರು ತಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://fruitspmk.karnataka.gov.in/MISReport/GetDetailsByAadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಪೇಜ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಹೆಸರಿಗೆ ಪ್ರೂಟ್ಸ್ ಐಡಿ ಆಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ. ಇಲ್ಲಿ ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಆಗಿದ್ದರೆ ಮಾತ್ರ ಬರ ಪರಿಹಾರ ಹಣ ಜಮೆಯಾಗುವ ಸಾಧ್ಯತೆಯಿದೆ.

ಫ್ರೂಟ್ಸ್ ಐಡಿ ಮಾಡಿಸಲು ಯಾವ ಯಾವ ದಾಖಲೆ ಬೇಕು?

ಫ್ರೂಟ್ಸ್ ಐಡಿ ಆನ್ಲೈನ್ ನಲ್ಲಿ ಮಾಡಿಸಬೇಕಾದರೆ ಆಧಾರ್ ಕಾರ್ಡ್, ಜಮೀನಿಗೆ ಸಂಬಂಧಿಸಿದ ದಾಖಲೆಗಳು (ಪಹಣಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಪ್ರಮಾಮ ಪತ್ರ ಇರಬೇಕು.ಬ್ಯಾಂಕ್ ಪಾಸ್ ಬುಕ್ ಪ್ರತಿ ಇರಬೇಕು. ಇದರೊಂದಿಗೆ ನಿಮ್ಮ ಫೋಟೋ ಇರಬೇಕು.ಈ ದಾಖಲೆಗಳೊಂದಿಗೆ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಫ್ರೂಟ್ಸ್ ಐಡಿಗೆ  ಅರ್ಜಿ ಸಲ್ಲಿಸಬಹುದು.

Leave a Comment