ಧಾರವಾಡ ಕೃಷಿಮೇಳ 2022: ಮೇಳದಲ್ಲಿ ಏನೇನು ಇರಲಿದೆ?

Written by Ramlinganna

Updated on:

Dharwad Krishi mela 2022 ರೈತರಿಗಿಲ್ಲಿದೆ ಸಂತಸದ ಸುದ್ದಿ. ಸೆಪ್ಟೆಂಬರ್ 17 ರಿಂದ 20 ರವರೆಗೆ ನಾಲ್ಕು ದಿನಗಳ ರೈತರಿಗೆ ಹಬ್ಬ. ಏಕೆಂದರೆ ಈ ನಾಲ್ಕು ದಿನಗಳ ಕಾಲ ಧಾರವಾಡದಲ್ಲಿ ಕೃಷಿಮೇಳ ನಡೆಯಲಿದೆ. ರೈತರ ಜಾತ್ರೆ ಎಂದೇ ಕರೆಯಲ್ಪಡುವ ಈ ಕೃಷಿ ಮೇಳವನ್ನು ರೈತರ ಆದಾಯ ದ್ವಿಗುಣಗೊಳಿಸುವುದಕ್ಕಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.

ಈ ಮೇಳದಲ್ಲಿ ರೈತರಿಗೆ ಉಪಯೋಗವಾಗುವ ಕೃಷಿ ಪರಿಕರಗಳು, ಮೌಲ್ಯವರ್ಧನೆ, ನೈಸರ್ಗಿಕ ಕೃಷಿ, ಸಾವಯವ ಕೃಷಿ, ಆದಾಯ ದ್ವಿಗುಣಗೊಳಿಸುವ ತಾಂತ್ರಿಕತೆಗಳಉ ಮತ್ತು ರೈತರ ತಾಂತ್ರಿಕತೆಗಳ, ಪಶುಆಹಾರ, ಜಾನುವಾರ ಪ್ರದರ್ಶನ, ಪುಷ್ಪ, ಹಣ್ಣು, ತರಕಾರಿ ಹಾಗೂ ಗಡ್ಡೆ ಗೆಣಸುಗಳ ಪ್ರದರ್ಶನ ಇರಲಿದೆ.

ಕೃಷಿಯಲ್ಲಿ ಯಶಸ್ವಿಯಾದ ರೈತರೊಂದಿಗೆ ಸಂವಾದ ನಡೆಯಲಿದೆ. ಕಡಿಮೆ ವೆಚ್ಚದ ಕೃಷಿ ತಾಂತ್ರಿಕತೆಗಳನ್ನು ರೈತರಿಗೆ ಪರಿಚಯಿಸುವ ಕಾರ್ಯಕ್ರಮವನ್ನು ಇರಲಿವೆ. ಜೊತೆಗೆ ಕೃಷಿ ಯಂತ್ತೋಪಕರಣಗಳ ಮಳಿಗೆ ಇರಲಿದೆ.

ಕೊರೋನಾದಿಂದಾಗಿ ಕಳೆದ 2 ವರ್ಷಗಳಿಂದ ಕೃಷಿ ಮೇಳ ನಡೆದಿರದಿಲ್ಲ. ಕೊರೋನಾ ಕರಾಳ ಛಾಯೆ ಈಗ ದೂರವಾಗಿದ್ದು, ಈ ಬಾರಿ ಕೃಷಿ ಮೇಳವು ಅದ್ದೂರಿಯಾಗಿ ನಡೆಯಲಿದೆ.  ಸುಮಾರು 6 ಲಕ್ಷಕ್ಕೂ ಹೆಚ್ಚು ರೈತರು ಈ ಕೃಷಿ ಮೇಳದಲ್ಲಿ ಸೇರುವ ಸಾಧ್ಯತೆಯಿದೆ.  ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು ಎಂಬ ಧ್ಯೇಯವಾಕ್ಯದೊಂದಿಗೆ  ಈ ಕೃಷಿ ಮೇಳ ಆಯೋಜಿಸಲಾಗುತ್ತಿದೆ.

Dharwad Krishi mela 2022 ಧಾರವಾಡ ಕೃಷಿ ಮೇಳದಲ್ಲಿರುವ ವಿಶೇಷತೆ

ಮೇಳದಲ್ಲಿ ಕೃಷಿ ಸಾಧಕರಿಗೆ ಮಳಿಗೆಗಳನ್ನು ನೀಡಲಾಗುತ್ತಿರುವುದು ವಿಶೇಷವಾಗಿದೆ. ಬಿತ್ತನೆ, ಕಟಾವು, ಒಕ್ಕಣೆ ಸೇರಿ ಕೂಲಿಯಾಳುಗಳ ಕೆಲಸಕ್ಕೆ ಪರ್ಯಾಯವಾಗಿ ಬಳಸಬಹುದಾದ ಯಂತ್ರೋಪಕರಣಗಳು ನೋಡಲು ಮತ್ತು ಖರೀದಿಸಲು ಮೇಳದಲ್ಲಿ ರೈತರಿಗೆ ಅವಕಾಶವಿದೆ.  ಸುಧಾರಿತ ಕೃಷಿ ಯಂತ್ರೋಪಕರಣಗಳ ಹಾಗೂ ಡ್ರೋನ್ ಬಳಕೆಯ ಪ್ರಾತ್ಯಕ್ಷಿಕೆ ಮಳಿಗೆಗಳನ್ನು ತೆರೆಯಲಾಗುವುದು.

ರೈತರು ಆವಿಷ್ಕರಿಸಿದ ಕೃಷಿ ಯಂತ್ರೋಪಕರಣಗಳು, ಒಕ್ಕಣೆಗಳು ಹಾಗೂ ಸಂಸ್ಕರಣೆಯ ಮಾರ್ಗೋಪಾಯಗಳನ್ನು ರೈತರಿಂದ ರೈತರಿಗೆ ಮಾಹಿತಿ ವಿನಿಮಯ ಮಾಡಲಾಗುವುದು. ಮಹಿಳೆಯರನ್ನು ಕೃಷಿಯತ್ತ ಪ್ರೇರೇಪಿಸಲು ವಿಶೇಷಿ ಸಾಧನೆಗೈದ ರೈತ ಮಹಿಳೆಯರೊಂದಿಗೆ ಸಂವಾದ,  ಕೃಷಿ ತಜ್ಞರೊಂದಿಗೆ ಸಮಾಲಾಚೋನೆ, ಪಶುಸಂಗೋಪನೆಯ ಲಾಭಗಳ ಕುರಿತು ಈ ಮೇಳದಲ್ಲಿ ಮಾಹಿತಿ ಸಿಗಲಿದೆ.

ಇದನ್ನೂ ಓದಿ :  ರೈತರ ಖಾತೆಗೆ ಬೆಳೆಹಾನಿ ಪರಿಹಾರ ಮೊದಲ ಕಂತಿನ ಹಣ ಜಮೆ- ಲಿಸ್ಟ್ ನಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಈ ಬಾರಿ ಒಟ್ಟು 574 ಮಳಿಗೆಗಳನ್ನು ಹಾಕಲಾಗಿದ್ದು, ಅವುಗಳಲ್ಲಿ 174 ಫ್ಯಾಬ್ರಿಕೆಟೆಡ್ ಮಳಿಗೆಗಳಿವೆ. ಅಲ್ಲದೆ ಟ್ರ್ಯಾಕ್ಟರ್ ಕಂಪನಿಗಳಿಗಾಗಿ 17 ಮುಕ್ತ ಮಳಿಗೆಗಳು ಇರಲಿವೆ. ಡ್ರೋನ್ ತಂತ್ರಜ್ಞಾನದ ಕುರಿತು ರೈತರಲ್ಲಿ ಅರಿವು ಮೂಡಿಸಲಾಗುವುದು. ಕೃಷಿ ವಿವಿ ವಿದ್ಯಾರ್ಥಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ.

ಮೊದಲ ದಿನ ಬೀಜ ಮೇಳ

ಕೃಷಿ ಮೇಳದ ಮೊದಲ ದಿನವೇ ಬೀಜ ಮೇಳ ಆಯೋಜಿಸಲಾಗಿದ್ದು, ಕೆಒಎಫ್ ಹಾಗೂ ಬೀಜ ನಿಗಮದ ವತಿಯಿಂದ ಬೀಜನೀಡಲಾಗುವುದು. ಆಸಕ್ತ ರೈತರು ಮೊದಲ ದಿನವೇ ಬೀಜ ಖರೀದಿ ಮಾಡಬಹುದು.

ಕೀಟೋದ್ಯಮ ಪರಿಚಯ

ಕೀಟಗಳ ನಿರ್ವಹಣೆ ಪ್ರತಿಯೊಬ್ಬ ರೈತರಿಗೆ ಸವಾಲಾಗಿದೆ. ಯಾವ ಬೆಳೆ ಯಾವ ಕೀಟಗಳು ಕಾಡುತ್ತವೆ ಹಾಗೂ ಅವುಗಳ ನಿಯಂತ್ರಣ ಮಾಡುವ ದಿಸೆಯಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ.ತ್ಯಾಜ್ಯ ನಿರ್ವಹಣೆಗೆ ಕೀಟಗಳ ಬಳಕೆ ಕುರಿತು ಮಾಹಿತಿ ನೀಡಲಾಗುವುದು.

ದನಗಳ ಪ್ರದರ್ಶನ ಇರುವುದಿಲ್ಲ

ಆಕಳು, ಎತ್ತುಗಳು ಹಾಗೂ ಎಮ್ಮೆಗಳಲ್ಲಿ ಚರ್ಮ, ಗಂಟುರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಬಾರಿ ಕೃಷಿ ಮೇಳದಲ್ಲಿ  ದನಗಳ ಪ್ರದರ್ಶನ ಇರುವುದಿಲ್ಲ. ರೋಗ, ಸಾಂಕ್ರಾಮಿಕವಾಗಿ ಹರಡುವ ಕಾರಣದಿಂದ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ. ಉಳಿದಂತೆ ಶ್ವಾನ ಪ್ರದರ್ಶನ, ಕುಕ್ಕುಟ, ಆಡು, ಕುರಿಗಳ ಪ್ರದರ್ಶ ಇರಲಿವೆ.

ರೈತರು ಈ ಕೃಷಿ ಮೇಳದಲ್ಲಿ ಪಾಲ್ಗೊಂಡ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.  ಈ ಕೃಷಿ ಮೇಳವನ್ನು ರೈತರಿಗಾಗಿಯೇ ಆಯೋಜಿಸುತ್ತಿರುವುದರಿಂದ ರೈತರಿಗೆ ತುಂಬಾ ಉಪಯೋಗಕಾರಿಯಾಗಲಿದೆ.

Leave a Comment