ಈ ರೈತರ ಖಾತೆಗೆ ಬೆಳೆಹಾನಿ ಪರಿಹಾರ ಜಮೆ

Written by Ramlinganna

Updated on:

Crop damage compensation fund ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ರೈತರಿಗೆ ಕೊನೆಗೂ ಬೆಳೆ ಹಾನಿ ಪರಿಹಾರ ಹಣ ಜಮೆಯಾಯಿತು. ಹೌದು, ಕಲಬುರಗಿ ಜಿಲ್ಲೆಯ 33487 ರೈತರ ಖಾತೆಗೆ 30.79 ಕೋಟಿ ರೂಪಾಯಿ ಮೊದಲ ಕಂತಿನ ಹಣ ಜಮೆಯಾಗಿದೆ.

ಜುಲೈ ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಾದ್ಯಂತ  ಆಗಿರುವ ಬೆಳೆ ಹಾನಿಯ ಪ್ರಾಥಮಿಕ ವರದಿ ಆಧಾರದ ಮೇಲೆ ಕಳುಹಿಸಿದ್ದ 1.10 ಲಕ್ಷ ರೈತರ ಅಂದಾಜು 80 ಕೋಟಿ ರೂಪಾಯಿ ಪರಿಹಾರದಲ್ಲಿ ಈಗ ಮೊದಲ ಕಂತು ಪರಿಹಾರ ಮಂಜೂರಾಗಿದೆ.  ಇನ್ನೆರಡು ಮೂರು ವಾರದೊಳಗೆ ಎರಡನೇ ಕಂತು ರೈತರ ಖಾತೆಗೆ ಜಮೆ ಆಗಲಿದೆ ಎಂದು ಹೇಳಲಾಗುತ್ತಿದೆ.

ಅತೀವೃಷ್ಟಿ ಹಾಗೂ ಪ್ರವಾಹದಿಂದಾಗಿ ರೈತರಿಗೆ ಅಪಾರ ಬೆಳೆ ಹಾನಿಯಾಗಿತ್ತು. ಇದರಿಂದಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದರು. ಬೆಳೆ ಹಾನಿ ಪರಿಹಾರಕ್ಕಾಗಿ ಕಾಯುತ್ತಿರುವ ರೈತರಿಗೆ ಪರಿಹಾರ ಹಣ ಜಮೆಯಾಗಿದ್ದರಿಂದ ರೈತರು ನಿಟ್ಟುಸಿರು ಬಿಟ್ಟಂತಾಗಿದೆ. ಮೊದಲ ಕಂತಿನ ಹಣ ಈಗ ಬಿಡುಗಡೆಯಾಗಿದೆ. ಇನ್ನು ಕೆಲವು ದಿನಗಳಲ್ಲಿ ಮುಂದಿನ ಕಂತು ಬಿಡುಗಡೆ ಮಾಡಲಾಗುವುದು. ಕಲಬುರಗಿ ಜಿಲ್ಲೆಯಲ್ಲದೆ ಇತರ ಜಿಲ್ಲೆಗಳ ರೈತರಿಗೂ ಅತೀ ಶೀಘ್ರದಲ್ಲಿ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಲಿದೆ.

Crop damage compensation fund ರೈತರು ತಮ್ಮ ಖಾತೆಗೆ ಜಮೆಯಾಗಿದೆಯೋ ಇಲ್ಲವೋ ಮೊಬೈಲ್ ನಲ್ಲೇ ಚೆಕ್ ಮಾಡಿ

ರೈತರು ತಮ್ಮ ಖಾತೆಗೆ ಬೆಳೆ ಹಾನಿ ಪರಿಹಾರ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಎಲ್ಲಿಯೂ ಹೋಗಬೇಕಿಲ್ಲ. ಯಾವ ಅಧಿಕಾರಿಗಳ ಬಳಿಯೂ ಕೈಕಟ್ಟಿ ನಿಲ್ಲಬೇಕಿಲ್ಲ. ತಾಂತ್ರಿಕತೆ ಬೆಳೆದಿದ್ದರಿಂದ ರೈತರು ಈಗ ಅಂಗೈಯಲ್ಲೇ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ರೈತರು ಮೊಬೈಲ್ ನಲ್ಲೇ ಸ್ಟೇಟಸ್ ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಒತ್ತಿದರೆ ಸಾಕು. ಆಗ ಪರಿಹಾರ ಪೇಮೆಂಟ್ ರಿಪೋರ್ಟ್ ಪೇಜ್ ತೆರೆದುಕೊಳ್ಳುತ್ತದೆ. ರೈತರು ಆಧಾರ್ ಸಂಖ್ಯೆ ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ ಫ್ಲಡ್, ಸೆಲೆಕ್ಟ್ ಯಿಯರ್ ಟೈಪ್ ನಲ್ಲಿ 2022-23 ಆಯ್ಕೆ ಮಾಡಿಕೊಳ್ಳಬೇಕು. 12 ಅಂಕಿಗಳ ಆಧಾರ್ ಸಂಖ್ಯೆ, ಇನ್ನೊಂದು ಬಾಕ್ಸ್ ನಲ್ಲಿ ಮುಂದೆ ಕಾಣುವ ಕ್ಯಾಪ್ಚ್ಯಾ ಕೋಡ್ ನಮೂದಿಸಬೇಕು. ಇದಾದ ನಂತರ ರೈತರು ವಿವಿರಗಳನ್ನು ಪಡೆಯಲು ಎಂಬ ಬಾಕ್ಸ್ ಒತ್ತಬೇಕು.ಆಗ ನಿಮ್ಮ ಖಾತೆಗೆ ಪ್ರಸಕ್ತ ಸಾಲಿನಲ್ಲಿ ಹಣ ಜಮೆಯಾಗಿದೆಯೋ ಇಲ್ಲವೋ ಎಂಬ ಮೆಸೆಜ್ ಕಾಣುತ್ತದೆ. ಜಮೆಯಾಗಿದ್ದರೆ ಯಾವ ಬ್ಯಾಂಕಿನಲ್ಲಿ ಜಮೆಯಾಗಿದೆ? ಯಾವ ದಿನಾಂಕದಂದು ಜಮೆಯಾಗಿದೆ ಯಾವ ಸರ್ವೆ ನಂಬರ್, ಯಾವ ಬೆಳೆಗೆ ಜಮೆಯಾಗಿದೆ ಎಂಬ ಮಾಹಿತಿ ಕಾಣುತ್ತದೆ. ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕಿಗೆ ಹಣ ಜಮೆಯಾಗುತ್ತದೆ.

ಯಾವ ಬೆಳೆಗೆ ಎಷ್ಟು ಪರಿಹಾರ ಹಣ ಜಮೆ?

ರಾಷ್ಟ್ರೀಯ  ವಿಪತ್ತು ಪರಿಹಾರ ಮಾರ್ಗಸೂಚಿಯ ಪರಿಹಾರದೊಂದಿಗೆ ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಪರಿಹಾರ ನೀಡಲಾಗುವುದು. ಮಳೆಯಾಶ್ರಿತ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್ ಗೆ 10,800 ರೂಪಾಯಿ ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 6800 ರೂಪಾಯಿ ಸೇರಿಸಿ 13500 ರೂಪಾಯಿ ನೀಡಲಾಗುವುದು.  ಎನ್.ಡಿ.ಆರ್.ಎಫ್ ನಿಯಮದ ಪ್ರಕಾರ ನೀರಾವರಿ ಬೆಳೆಗೆ 13500 ರೂಪಾಯಿ ರಾಜ್ಯ ಸರ್ಕಾರದ 11500 ಸೇರಿ 25000 ರೂಪಾಯಿ ನೀಡಲಾಗುವುದು.

ಇದನ್ನೂ ಓದಿ : ಬೆಳೆ ಹಾನಿಯಾದ ರೈತರು ಇಂದೇ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಿರಿ: ಅರ್ಜಿ ಎಲ್ಲಿ ಸಲ್ಲಿಸಬೇಕು? ಇಲ್ಲಿದೆ ಮಾಹಿತಿ

ಬಹುವಾರ್ಷಿಕ ಬೆಳೆ ಪ್ರತಿ ಹೆಕ್ಟೇರಿಗೆ 18000 ರೂಪಾಯಿ ಜೊತೆಗೆ ರಾಜ್ಯ ಸರ್ಕಾರದಿಂದ 10000 ರೂಪಾಯಿ ಸೇರಿ ಒಟ್ಟು 28000 ರೂಪಾಯಿ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.

Leave a Comment