ಚಂಡಮಾರುತ ಪರಿಣಾಮ ಹಲವೆಡೆ ಭಾರಿ ಮಳೆಯ ಮುನ್ಸೂಚನೆ

Written by Ramlinganna

Updated on:

Cyclone mocha heavy rain ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಮೇ 6 ರಂದು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳಿುವ ಸಾಧ್ಯತೆಯಿದೆ.ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮೇ 9 ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಸೃಷಿಯಾಗುವ ಸಾಧ್ಯತೆ ದಟ್ಟವಾಗಿದ್ದು, ಅದರ ಪಥ ಯಾವ ಕಡೆ ಇರಲಿದೆ ಎಂಬುದನ್ನುಇನ್ನೆರಡು ದಿನಗಳಲ್ಲಿತಿಳಿಯಲಿದೆ. ಹೀಗಾಗಿ ಮೀನುಗಾರರು ಸಮುದ್ರ ಪ್ರವೇಶ ಮಾಡುವುದು ಬೇಡ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮೇ 6 ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ಹಲವು ಬದಲಾವಣೆಗಳಾಗಲಿವೆ. ಆದರ ಮರು ದಿನವೇ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ.ಹೀಗಾಗಿ ಮೀನುಗಾರರು ಹಾಗೂ ಹಡಗು ನಡೆಸುವವರು ಬಂಗಾಳಕೊಲ್ಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಮನವಿ  ಮಾಡಿದೆ.

ಒಂದು ವೇಳೆ ಈ ಚಂಡಮಾರುತ ಸೃಷ್ಟಿಯಾದದ್ದೇ ಆದಲ್ಲಿ ಅದು ಭಾರತ ಕಾಣುತ್ತಿರುವ ಈ ವರ್ಷದ ಮೊದಲ ಚಂಡಮಾರುತವಾಗಲಿದೆ. ಈ ಚಂಡಮಾರುತಕ್ಕೆ  ಮೋಚಾ ಎಂದು ಹೆಸರಿಡಲಾಗಿದೆ. ಯೆಮೆನ್ ಸರ್ಕಾರ ಅದನ್ನು ಸೂಚಿಸಿದೆ. ಮೇ 9 ರಂದು ಚಂಡಮಾರುತ ತೀವ್ರಗೊಳ್ಳಲಿದೆ. ಚಂಡಮಾರುತವು ಉತ್ತರಾಭಿಮುಖವಾಗಿ ಕೇಂದ್ರ ಬಂಗಾಲ ಕೊಲ್ಲಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ : ಈ ಲಿಸ್ಟ್ ನಲ್ಲಿರುವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ ಇಲ್ಲೇ ಚೆಕ್ ಮಾಡಿ

ಒಡಿಸ್ಸಾದ ಕರಾವಳಿ ಪ್ರದೇಶಕ್ಕೆ ಚಂಡಮಾರುತ ಪರಿಣಾಮ ಬೀಳಲಿದೆ. ಹಾಗಾಗಿ ರಾಜ್ಯದ ಕರಾವಳಿ ಭಾಗದ 18 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಲರ್ಟ್ ಘೋಷಿಸಿದ್ದಾರೆ.ಅಲ್ಲದೆ ಎನ್.ಡಿ.ಆರ್.ಎಫ್ ಮತ್ತು ಒ.ಡಿ.ಆರ್.ಎಂ.ಎಫ್ ಸಿಬ್ಬಂದಿಯನ್ನು ಸನ್ನದ್ದ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.

ಮೀನುಗಾರರಿಗೆ ಸೂಚನೆ

ಆರಂಭದಲ್ಲಿ ಗಂಟೆಗೆ 40.50 ಕಿ.ಮೀ ವೇಗದಲ್ಲಿ ಬೀಸುವ ಗಾಳಿ, ಮೇ 7 ರಿಂದ ಗಂಟೆಗೆ 60 ಕಿ.ಮೀ ವೇಗ ಪಡೆಯುವ ಸಾಧ್ಯತೆಯಿದೆ. ಈ ಸಮಯದಲ್ಲಿ ಆಗ್ನೆಯ ಬಂಗಾಳ ಕೊಲ್ಲಿ ಮತ್ತು ಸಮೀಪದ ಕರಾವಳಿ ತೀರಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಇದೇ ವೇಳೆ ಮಧ್ಯಪ್ರದೇಶ, ಛತ್ತಿಸಗಢ, ಮಹಾರಾಷ್ಟ್ರ  ಆಂಧ್ರಪ್ರದೇಶ, ಅಸ್ಸಾಂನಲ್ಲಿ ಮೇ 5 ರವರೆಗೆ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Cyclone mocha heavy rain ಕರ್ನಾಟಕದ ವಿವಿಧ ಭಾಗಗಳಲ್ಲಿ ಮೇ 7 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಹೌದು,  ಕರ್ನಾಟಕದಲ್ಲಿ ಮೇ 7 ರ ವರೆಗೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು-ಮಿಂಚು ಸಹಿತ ವ್ಯಾಪಕ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಒಳನಾಡಿನ ಬೀದರ್, ಬೆಳಗಾವಿ, ಕಲಬುರಗಿ, ಯಾದಗರಿ, ರಾಯಚೂರು, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ಮೇ 7 ರವರೆಗೆ ಮಳೆಯಾಗಲಿದೆ.ಅದೇ ರೀತಿ ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ರಾಮನಗರದಲ್ಲಿಯೂ ಮೇ 7 ರವರೆಗೆ ಮಳೆಯಾಗಲಿದೆ.

ಇದನ್ನೂ ಓದಿ ನಿಮ್ಮ ಜಮೀನಿನ ಮ್ಯಾಪ್ ನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.

ಇತ್ತೀಚಿನ ವರ್ಷಗಳಲ್ಲಿ 2020 ರಲ್ಲಿ ಅಂಫಾನ್,2021 ರಲ್ಲಿ ಅಸಾನಿ ಹಾಗೂ 2022 ರಲ್ಲಿ ಯಾಸ್ ಸೇರಿದಂತೆ ಹೆಚ್ಚಿನ ಚಂಡಮಾರುತಗಳು ಮೇ ತಿಂಗಳಲ್ಲಿ  ಅಪ್ಪಳಿಸಿದ್ದವು.

ಚಂಡಮಾರುತವುಮೇ 11 ರವರೆಗೆ ಪೂರ್ವ- ಮಧ್ಯ ಬಂಗಾಳಕೊಲ್ಲಿಯ ಕಡೆಗೆ ಉತ್ತರ-ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Leave a Comment