ನಾಳೆ ಸೈಕ್ಲೋನ್- ಮೂರು ರಾಜ್ಯದಲ್ಲಿ ಭಾರಿ ಮಳೆಯ ಕಟ್ಟೆಚ್ಚರ

Written by Ramlinganna

Published on:

ಸೈಕ್ಲೋನ್ ಪರಿಣಾಮದಿಂದಾಗಿ ಮೂರು ರಾಜ್ಯಗಳಲ್ಲಿ ಭಾರಿ ಮಳೆಯಾಗುವಎಚ್ಚರಿಕೆ ನೀಡಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಸೋಮವಾರ ಚಂಡಮಾರುತವಾಗಿ ರೂಪ ಪಡೆದು, ಆಂಧ್ರಪ್ರದೇಶದ ನೆಲ್ಲೂರು ಹಾಗೂ ಮಚಲಿಪಟ್ಟಣ ಕರಾವಳಿಗಳ ನಡುವೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ಇದರಿಂದಾಗಿ ಒಡಿಸ್ಸಾ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಕರಾವಳಿಯಲ್ಲಿ ಸೋಮವಾರ ಹಾಗೂ ಮಂಗಳವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಈಗ ಬಂಗಾಳ ಕೊಲ್ಲಿಯಲ್ಲಿ ಗಂಟೆಗೆ 18 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಾ ವಾಯುಭಾರ ಕುಸಿತ ಸೃಷ್ಟಿಯಾಗಿದೆ. ಅದು ವಾಯುವ್ಯ ಭಾಗದತ್ತ ಸಾಗುತ್ತಿದ್ದು, ಡಿಸೆಂಬರ್ 4 ರಂದು ಆಂಧ್ರ ಕರಾವಳಿಯ ಮಚಲಿಪಟ್ಟ ಹಾಗೂ ನೆಲ್ಲೂರು ಕರಾವಳಿ ನಡುವೆ ಅಪ್ಪಳಿಸುವ ಸಂಭವವಿದೆ.

ಎಲ್ಲೆಲ್ಲಿ ಹೈ ಅಲರ್ಟ್

ಆಂಧ್ರ, ಒಡಿಸ್ಸಾ ಹಾಗೂ ತಮಿಳುನಾಡಿನಲ್ಲಿ ಭಾರಿ ಮಳೆ ಸಾಧ್ಯತೆಯಿರುವುದರಿಂದ ಹೈ ಅಲರ್ಟ್ ನೀಡಲಾಗಿದೆ. ಗಂಟೆಗೆ 100 ಕಿ. ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ ಗ್ರಾಮ ಪಂಚಾಯತ್ ನ ಮಾಹಿತಿ ಮೊಬೈಲ್ ನಲ್ಲೇ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಚಂಡಮಾರುತ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ಒಡಿಸ್ಸಾ ಹಾಗೂ ತಮಿಳುನಾಡು ಸರ್ಕಾರಗಳು ಕಟ್ಟೆಚ್ಚರ ಸಾರಿದ್ದು, ಜನರ ರಕ್ಷಣೆಗೆ ಕ್ರಮಗಳನ್ನು ಆರಂಭಿಸಿವೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಿವೆ.

ರಾಯಲಸೀಮಾ ಪ್ರದೇಶವು ಭಾನುವಾರ ಮತ್ತು ಸೋಮವಾರದಂದು ಪ್ರತ್ಯೇಕವಾದ ಭಾರಿ ಮಳೆಯೊಂದಿಗೆ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು.

ಸೈಕ್ಲೋನ್ ರಾಜ್ಯದ ಮೇಲೆ ಪರಿಣಾಮವಿಲ್ಲ- ಹವಾಮಾನ ಇಲಾಖೆ

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಮುಂಬರುವ ಚಂಡಮಾರುತದಿಂದ ರಾಜ್ಯದ ಮೇಲೆ ಯಾವುದೇ  ಪರಿಣಾಮಗಳಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಭಾನುವಾರದ ವೇಳೆಗೆ ತೀವ್ರ ವಾಯುಭಾರ ಕುಸಿತವಾಗಲಿದೆ. ಸೋಮವಾರ ಮತ್ತು ಮಂಗಳವಾರದ ವೇಳೆಗೆ ಚಂಡಮಾರುತವಾಗಿ ರೂಪುಗೊಳ್ಳಲಿದೆ. ಇದು ಬಂಗಾಳಕೊಲ್ಲಿಯ ಕರಾವಳಿ ಸಮೀಪಕ್ಕೆ ಬಂದು ಚಂಡಮಾರುತವಾಗಿ ಪರಿವರ್ತನೆಗೊಳ್ಳುವುದರಿಂದ ತೀವ್ರತೆ ಕಡಿಮೆ ಇದೆ.

ಇದನ್ನೂ ಓದಿ ನಿಮ್ಮ ಮಕ್ಕಳಿಗೆ ಸ್ಕಾಲರ್ ಶಿಪ್ ಜಮೆ ಆಗಿದೆಯೇ? ಇಲ್ಲೇ ಚೆಕ್ ಮಾಡಿ

ಪೂರ್ವ ಕರಾವಳಿಯಲ್ಲಿಯೇ ಚಲಿಸಲಿದೆ. ಇದರಿಂದ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಹೆಚ್ಚಿನ ಮಳೆ ಆಗಲಿದೆ. ಉಳಿದಂತೆ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಕೆಲವು ಭಾಗದಲ್ಲಿ ಸಾಧಾರಣ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಸ್ಪಷ್ಪಪಡಿಸಿದೆ.

ನಿಮ್ಮ ಜಿಲ್ಲೆಯಲ್ಲಿ ಮಳೆಯಾಗಬಹುದೇ?

ನಿಮ್ಮ ಜಿಲ್ಲೆಯಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ಸಾರ್ವಜನಿಕರು ವರುಣಮಿತ್ರ ನಂಬರಿಗೆ ಕರೆ ಮಾಡಿ ವಿಚಾರಿಸಬಹುದು. ಹೌದು, ವರುಣಮಿತ್ರ ನಂಬರ್ 92433 45433 ಗೆ ಕರೆ ಮಾಡಿ ಮಳೆಯ ಮಾಹಿತಿ ಪಡೆದುಕೊಳ್ಳಬಹುದು.  ಇ ವರುಣಮಿತ್ರ ಸಹಾಯವಾಣಿ ನಂಬರ್ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಹಾಗಾಗಿ ಸಾರ್ವಜನಕರು ಕರೆ ಮಾಡಿ ವಿಚಾರಿಸಕೊಳ್ಳಬಹುದು.

Leave a Comment