ರೈತರು ಪಡೆಯುವ ಶೂನ್ಯ ಬಡ್ಡಿದರದ 3 ಲಕ್ಷವರೆಗಿನ ಅಲ್ಪಾವಧಿ ಕೃಷಿ ಸಾಲ (crop loan) ಕ್ಕೆ ಸರ್ಕಾರ ವಿಧಿಸಿರುವ ಹೊಸ ಷರತ್ತುಗಳಿಂದಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಲ್ಪಾವಧಿ ಕೃಷಿ ಸಾಲ ಪಡೆದು ಆರ್ಥಿಕವಾಗಿ ಸಬಲರಾಗಲು ಬಯಸುತ್ತಿರುವ ರೈತರಿಗೆ ಸರ್ಕಾರ ಹೊಸ ಷರತ್ತು ವಿಧಿಸಿ ಆಘಾತ ನೀಡಿದೆ. ಹೊಸ ಸಾಲ ಪಡೆಯಬೇಕಾದರೆ ಈಗ ಹೊಸ ಷರತ್ತಿನನ್ವಯ ಸಾಲ ಪಡೆಯಬೇಕು.

ಕೋವಿಡ್ ಲಾಕ್ಡೌನ್, ಕಳೆನಾಶಕ, ಬಿತ್ತನೆ ಬೀಜಗಳ ಬೆಲೆ ಏರಿಕೆ, ಬೆಳಗಳಿಗೆ ತಗಲುವ ವಿವಿಧ ರೋಗಗಳು ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಸರ್ಕಾರ ವಿಧಿಸಿರುವ ಹೊಸ ಷರತ್ತಿನಿಂದ ಆಂತಕಕ್ಕೊಳಗಾಗಿದ್ದಾರೆ. ಸರ್ಕಾರದ ಹೊಸ ಷರತ್ತಿನಿಂದಾಗಿ ರಾಜ್ಯದ ಬಹುತೇಕ ರೈತರು ಶೂನ್ಯ ಬಡ್ಡಿದರದ ಸಾಲದಿಂದ ವಂಚಿರಾಗುವ ಸಾಧ್ಯತೆ ಹೆಚ್ಚಿದೆ.

ಸರ್ಕಾರ ವಿಧಿಸಿರುವ ಹೊಸ ಷರತ್ತಿನಲ್ಲಿ (crop loan condition) ಏನೇನಿದೆ?

ರೈತರು ಪಡೆಯುವ ಶೂನ್ಯ ಬಡಿದರದ 3 ಲಕ್ಷದವರೆಗಿನ ಅಲ್ಪಾವಧಿ ಸಾಲ ಯೋಜನೆಯಲ್ಲಿ ಒಂದು ಕುಟುಂಬವು ಗರಿಷ್ಠ 3 ಲಕ್ಷದವರೆಗೆ ಸಾಲ ಪಡೆಯಬಹುದು. ಪಹಣಿ ಇಬ್ಬರ ಹೆಸರಿನಲ್ಲಿದ್ದು, ಅವರ ಹೆಸರುಗಳು ಒಂದೇ ಪಡಿತರ ಚೀಟಿಯಲ್ಲಿದ್ದರೆ, ಅಂತಹ ಕುಟುಂಬದ ಒಬ್ಬರಿಗೆ ಮಾತ್ರ ಸಾಲ ದೊರೆಯಲಿದೆ. ಮಾಸಿಕ ವೇತನ ಅಥವಾ ತಿಂಗಳಿಗೆ 20 ಸಾವಿರಕ್ಕಿಂತ ಹೆಚ್ಚು ಪಿಂಚಣಿ ಪಡೆಯುತ್ತಿರುವ ಅಥವಾ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿಸಿದ ರೈತರಿಗೆ ಶೂನ್ಯ ಬಡ್ಡಿ ಸಾಲ ದೊರೆಯುವುದಿಲ್ಲ.

2004 ರಿಂದ ಸರ್ಕಾರವು ಸಹಕಾರ ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿದರದ ಸಾಲ ನೀಡುತ್ತಿದೆ. ವಾರ್ಷಿಕ  ಕೃಷಿ ನಿರ್ವಹಣೆಗೆ ನೀಡುವ ಸಾಲ ಇದಾಗಿದೆ. ಈವರೆಗೆ ಹಿಡುವಳಿ ಹೊಂದಿರುವ ಎಲ್ಲಾ ರೈತರು ಈ ಸಾಲ ಪಡೆಯಲು ಅವಕಾಶವಿತ್ತು.ಈಗ ಹೊಸ ಷರತ್ತಿಗೆ ಒಳಪಡುವವರು ಮಾತ್ರ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯಬಹುದು. ಉಳಿದವರು ಸಾಲಕ್ಕೆ ಶೇ. 7 ರಷ್ಟು ಬಡ್ಡಿ ಪಾವತಿಸಬೇಕು.

ಇದನ್ನೂ ಓದಿ: ಮೊಬೈಲ್ ನಲ್ಲಿಯೇ ನಿಮ್ಮ ಬೆಳೆಸಾಲಮನ್ನಾ (crop loan status) ಆಗಿದ್ದನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಶೂನ್ಯ ಬಡ್ಡಿದರದ ಅಲ್ಪಾವಧಿ ಕೃಷಿ ಸಾಲಕ್ಕೆ ಪ್ರತ್ಯೇಕ ಷರತ್ತು ವಿಧಿಸಬಾರದೆಂದು ಸಹಕಾರ ಸಚಿವ ಸೋಮಶೇಖರ ರವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ವಿಧಿಸಿರುವ ಷರತ್ತುಗಳನ್ನು ಹಿಂಪಡೆಯಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಸಚಿವರಲ್ಲಿ ವಿನಂತಿ ಮಾಡಲಾಗಿದೆ. ಸಚಿವರು ಬೇಡಿಕೆಗೆ ಸ್ಪಂದಿಸಿದರೆ ರೈತರಿಗೆ ಅನುಕೂಲವಾಗುತ್ತದೆ.ಈಗಾಗಲೇ ಮುಂಗಾರು ಆರಂಭವಾಗಿ ಬಿತ್ತಣಿಕೆಯಲ್ಲಿ ತೊಡಗಿದ್ದ ರೈತರಿಗೆ ಅನುಕೂಲವಾಗಲಿದೆ.

2 Replies to “ರೈತರಿಗೆ 3 ಲಕ್ಷ ರೂಪಾಯಿಯವರೆಗೆ ನೀಡುವ ಶೂನ್ಯ ಬಡ್ಡಿ ದರದ ಸಾಲದ (crop loan)ಷರತ್ತುಗಳು ಯಾವುವು ಗೊತ್ತಾ?… ಇಲ್ಲಿದೆ ಮಾಹಿತಿ”

Leave a Reply

Your email address will not be published. Required fields are marked *