ಬೆಳೆ ವಿಮೆ ಮಾಡಿಸಿದ ರೈತರಿಗೆ 15 ದಿನಗಳಲ್ಲಿ ವಿಮೆ ಪರಿಹಾರ ಜಮೆ

Written by By: janajagran

Updated on:

Crop insurance relief amount  ರೈತರ ಬೆಳೆ ವಿಮೆಗೆ ಸಂಬಂಧಪಟ್ಟಂತೆ ಖಾಸಗಿ ವಿಮಾ ಕಂಪನಿಗಳು 15 ದಿನಗಳಲ್ಲಿ ಪರಿಹಾರ ವಿತರಣೆ ಮಾಡಬೇಕೆಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದ್ದಾರೆ.

ಅವರು ಶುಕ್ರವಾರ ವಿಧಾನಸೌಧದಲ್ಲಿ ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲರವರೊಂದಿಗೆ ಪ್ರಧಾನಮಂತ್ರಿ ಫಸಲ್ ಬಿಮಾ  ಯೋಜನೆ ಸೇರಿದಂತೆ ಇತರ ವಿಚಾರಗಳ ಕುರಿತು ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ವಿಷಯ ಪ್ರಸ್ತಾಪಿಸಿದರು.

ಅತೀವೃಷ್ಟಿಯಿಂದ ಬೆಳೆಯಾನಿಯಾಗಿದ್ದರಿಂದ ಬೆಳೆ ವಿಮೆ ಮಾಡಿಸಿದ ರೈತರಿಗೆ ಪರಿಹಾರ ಹಣ ಶೀಘ್ರ ಬಿಡುಗಡೆ ಮಾಡುವಂತೆ ವಿಮಾ ಕಂಪನಿಗಳಿಗೆ ಸೂಚನೆ ನೀಡಲಾಗಿದೆ. 16 ಲಕ್ಷ ರೈತರಿಗೆ 1147.57 ಕೋಟಿ ರೂಪಾಯಿ ನೀಡಬೇಕಿದೆ. ಈ ಬಾರಿ ವಿಮೆಗಾಗಿ 12 ಲಕ್ಷ ರೈತರು ನೋಂದಣಿ ಮಾಡಿಸಿದ್ದಾರೆ.

ಸರ್ಕಾರಿ ವಿಮಾ ಕಂಪನಿಗಳು ಸರಿಯಾದ ಸಮಯಕ್ಕೆ ರೈತರಿಗೆ ಬೆಳೆ ವಿಮೆ ನೀಡಲು ಸಾಧ್ಯವಾಗುತ್ತದೆ ಎಂದ ಮೇಲೆ ಖಾಸಗಿ ವಿಮಾ ಕಂಪನಿಗಳೇಕೆ ಸರಿಯಾದ ಸಮಯಕ್ಕೆ ರೈತರಿಗೆ ವಿಮೆ ಮಾಡಿಸಲು ಸಾಧ್ಯವಿಲ್ಲವೆಂದು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ :  ಯಾವ ಬ್ಯಾಂಕಿನಲ್ಲಿ ಎಷ್ಟು ಮತ್ತು ಎಲ್ಲೆಲ್ಲಿ ಸಾಲ ಪಡೆದಿದ್ದೀರೆಂಬುದನ್ನು ಮೊಬೈಲ್ ನಲ್ಲಿಯೇ ಉಚಿತವಾಗಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಅತೀವೃಷ್ಟಿಯಿಂದಾಗಿ ಬೆಳೆಹಾನಿಯಾದ ರೈತರು ಮೊದಲೇ ಸಂಕಷ್ಟದಲ್ಲಿರುತ್ತಾರೆ. ಸಂಕಷ್ಟ ಕಾಲದಲ್ಲಿ ರೈತರ ಕೈಹಿಡಿಯಲೆಂದು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಆರಂಭಿಸಲಾಗಿದೆ. ಸರ್ಕಾರದ ಈ ಯೋಜನೆಯನ್ನು ನಂಬಿ ಲಕ್ಷಾಂತರ ರೈತರು ಬೆಳೆಗಳಿಗೆ ವಿಮೆ ಮಾಡಿಸುತ್ತಾರೆ. ಅಂತಹ ರೈತರಿಗೆ ಕೂಡಲೇ ವಿಮೆ ಹಣ ಬಿಡುಗಡೆ ಮಾಡಬೇಕು. ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿಮಾ ಪರಿಹಾರ ಕಂಪನಿಗಳ ವಿಷಯದಲ್ಲಾಗಲಿ, ಬೇರೆ ಯಾವುದೇ ವಿಚಾರದಲ್ಲಾಗಲಿ ಯಾವುದೇ ರೀತಿಯ ರಾಜಿಯಾಗುವ ಪ್ರಶ್ನೆಯೇ ಇಲ್ಲ. ರೈತರ ಕಾಳಜಿಯೇ ಪ್ರಮುಖ ಗುರಿಯಾಗಿದೆ.  ಖಾಸಗಿ ವಿಮಾ ಕಂಪನಿಗಳು ಸರಿಯಾದ ಸಮಯಕ್ಕೆ ರೈತರ ಖಾತೆಗೆ ಹಣ ಪರಿಹಾರ ಹಣ ಜಮೆ ಮಾಡಬೇಕು. 15 ದಿನದಲ್ಲಿ ಖಾಸಗಿ ವಿಮಾ ಕಂಪನಿಗಳು ಪರಿಹಾರವನ್ನು ವಿತರಿಸಬೇಕು. ಜಿಲ್ಲೆಯ ಕೃಷಿ ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆ ಇರಬೇಕು.  ವಿಮಾ ಇಲಾಖೆಯಲ್ಲಿ ಬೆಳೆ ವಿಮೆಗೆ ನೋಂದಣಿಯಾಗಿರುವ ಜಿಲ್ಲಾವಾರು, ಪ್ರದೇಶ, ಬೆಳೆಗಳ ಬಗ್ಗೆ ರೈತರ ಮಾಹಿತಿ ಪಡೆದು ಸಾಂಖ್ಯಿಕ ಇಲಾಖೆ ಅಂಕಿ-ಅಂಶಗಳ ಜತೆ ಪರಿಶೀಲನೆ ಮಾಡಿ ಒಂದು ವಾರದೊಳಗೆ ವರದಿ ನೀಡಬೇಕೆಂದು ಆಯುಕ್ತರಿಗೆ ಖೂಬಾ ಸೂಚಿಸಿದ್ದಾರೆ.

Crop insurance relief amount  ಬೆಳೆ ವಿಮೆ ಅರ್ಜಿಯ ಸ್ಟೇಟಸ್ ಚೆಕ್ ಮಾಡಿ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮೆ ಕಟ್ಟಿದ ರೈತರು ಅರ್ಜಿಯ ಸ್ಟೇಟಸ್ ನ್ನು ಮೊಬೈಲ್ ನಲ್ಲಿ ತಿಳಿದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಈ   https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಸಂರಕ್ಷಣೆಯ ವೆಬ್ ಪೇಜ್ ಓಪನ್ ಆಗುತ್ತದೆ.. ಅಲ್ಲಿ ವರ್ಷ ಮತ್ತು ಋತು ಆಯ್ಕೆ ಮಾಡಿಕೊಳ್ಳಬೇಕು. (ಈಗಾಗಲೇ ವರ್ಷದ ಆಯ್ಕೆಯಲ್ಲಿ  2021-2022 ಮತ್ತು ಋತು ಆಯ್ಕೆಯಲ್ಲಿ Kharif)  ಇದ್ದರೆ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ಹಿಂಗಾರು ಬೆಳೆಯ ಕುರಿತಂತೆ ರಾಬಿ ಆಯ್ಕೆ ಮಾಡಿಕೊಳ್ಳಬೇಕು. ನಂತರ  ಫಾರ್ಮರ್ಸ್ ಕಾಲಂನಲ್ಲಿರುವ ಕೆಳಗಡೆ ಚೆಕ್ ಸ್ಟೇಟಸ್ ಮೇಲೆ  ಕ್ಲಿಕ್ ಮಾಡಬೇಕು. ಅಲ್ಲಿ ಮೊಬೈಲ್ ನಂಬರ್ ಸೆಲೆಕ್ಟ್ ಮಾಡಿಕೊಳ್ಳಬೇಕು. ಆಗ ಮೊಬೈಲ್ ನಂಬರ್ ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು..  ನಿಮ್ಮ ಹೆಸರು ಮತ್ತು ಅರ್ಜಿಯ ಸ್ಟೇಟಸ್ ಕಂಪನಿಯಿಂದ ವಿಮೆಯ ಹಣ ಸ್ವೀಕೃತವಾಗಿದೆಯೋ ಇಲ್ಲವೋ ಹಾಗೂ ಬೆಳೆ ನೋಂದಣಿಯ ಸ್ಥಿತಿಗತಿಯನ್ನು ನೋಡಬಹುದು.

Leave a Comment