ಈ ರೈತರಿಗೆ ಬೆಳೆ ವಿಮೆ ಜಮೆ- ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Updated on:

Crop insurance facility these farmers will get ಬೆಳೆ ವಿಮೆ ಹಣ ಯಾವ ರೈತರಿಗೆ ಜಮೆಯಾಗುತ್ತದೆ? ಯಾವ ರೈತರಿಗೆ ಜಮೆಯಾಗುವುದಿಲ್ಲ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು,  ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿರುತ್ತಾರೆ. ವಿಮಾ ಕಂತನ್ನು ಸಹ ಅವಧಿಯೊಳಗೆ ಪಾವತಿಸಿರುತ್ತಾರೆ. ಆದರೆ ಬೆಳೆ ವಿಮೆ ಮಾಡಿಸಿದ ಮಾತ್ರಕ್ಕೆ ವಿಮೆ ಹಣ ಜಮಯಾಗುವುದಿಲ್ಲ.  ರೈತರು ವಿಮೆ ಮಾಡಿಸಿದ ನಂತರ ತಮ್ಮ ಬೆಳೆ ಹಾಳಾಗಿರುವ ಕುರಿತು ಮಾಹಿತಿ ನೀಡುವುದಿಲ್ಲ. ಬಹುತೇಕ ರೈತರಿಗೆ ಯಾವ ವಿಮಾ ಕಂಪನಿಗೆ ಹಣ ಪಾವತಿಸಿರುತ್ತಾರೋ ಅದರ ಮಾಹಿತಿಯೂ ಇರುವುದಿಲ್ಲ. ಹಾಗಾಗಿ ಬಹುತೇಕ ರೈತರು ವಿಮಾ ಸೌಲಭ್ಯದಿಂದ ವಂಚಿತರಾಗಿರುತ್ತಾರೆ.

Crop insurance facility these farmers will get ಯಾವ ರೈತರಿಗೆ ಬೆಳೆ ವಿಮೆ ಹಣ ಜಮಯಾಗುತ್ತದೆ?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮೆ ಮಾಡಿಸಿದ ರೈತರು ಯಾವ ಬೆಳೆಗೆ ವಿಮೆ ಮಾಡಿಸಿದ್ದಾರೆ. ಎಷ್ಟು ವಿಮಾ ಹಣ ಪಾವತಿಸಿರುತ್ತಾರೋ ಆ ರಸೀದಿ ತಮ್ಮಲ್ಲಿ ಜೋಪಾನವಾಗಿಟ್ಟುಕೊಳ್ಳಬೇಕು.  ಇದಾದ ನಂತರ ಅಕಾಲಿಕ ಮಳೆಯಿಂದಾಗಿ ತಮ್ಮ ಬೆಳೆ ಹಾಳಾದರೆ 72 ಗಂಟೆಯೊಳಗೆ ವಿಮಾ ಕಂಪನಿಗೆ ದೂರು ನೀಡಬೇಕಾಗುತ್ತದೆ. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ದೂರು ಸಲ್ಲಿಸಿದ ರೈತರ ಜಮೀನಿಗೆ ಬಂದು ಬೆಳೆ ಹಾಳಾಗಿರುವ ಕುರಿತು ಪರಿಶೀಲನೆ ನಡೆಸುತ್ತಾರೆ.  ನಂತರ ಯಾವ ಪ್ರಮಾಣದಲ್ಲಿ ಬೆಳೆ ಹಾಳಾಗಿದೆ? ಎಂಬುದನ್ನು ಪರಿಶೀಲಿಸಿ ವಿಮಾ ಪರಿಹಾರಕ್ಕಾಗಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವರು.

ಇದನ್ನೂ ಓದಿ ನಿಮ್ಮ ಜಮೀನಿನ ಎಲ್ಲಾ ದಾಖಲೆಗಳು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ -ಇಲ್ಲಿದೆ ಸಂಪೂರ್ಣ ಮಾಹಿತಿ

ಮೇಲಧಿಕಾರಿಗಳು ವರದಿ ಪರಿಶೀಲಿಸಿ ಬೆಳೆ ಹಾನಿ ಪ್ರಕಾರ ವಿಮಾ ಕಂಪನಿಗೆ ಶಿಫಾರಸ್ಸು ಮಾಡುತ್ತಾರೆ. ನಂತರ ವಿಮಾ ಕಂಪನಿಯು ಬೆಳೆ ವಿಮೆಮಾಡಿಸಿದ ರೈತರಿಗೆ ವಿಮೆ ಹಣ ಜಮೆಮಾಡುತ್ತದೆ.

ಬೆಳೆ ವಿಮೆ ಕುರಿತಂತೆ ಯಾರಿಗೆ ಕೇಳಬೇಕು?

ಬೆಳೆ ವಿಮೆ ಕುರಿತಂತೆ ರೈತರಿಗೆ ಯಾರಿಗೆ ಕೇಳಬೇಕು ಎಂಬುದು ಗೊತ್ತಿರುವುದಿಲ್ಲ. ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೋ ಎಂಬುದು ಗೊತ್ತಿರುವುದಿಲ್ಲ. ನೀವು ಯಾವ ಕಂಪನಿಗೆ ವಿಮಾ ಪಾವತಿಸಿದ್ದೀರಿ ಎಂಬುದನ್ನು ಚೆಕ್ ಮಾಡಲು

https://www.samrakshane.karnataka.gov.in/publichome.aspx

ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮಾ ಕಂಪನಿಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಫಾರ್ಮರ್ ಕಾರ್ನರ್ ಕೆಳಗಡೆ know your insurance co. ಮೇಲೆ ಕ್ಲಿಕ್ ಮಾಡಬೇಕು. ಆಗ ಜಿಲ್ಲಾವಾರು ವಿಮಾ ಕಂಪನಿಯ ಪಟ್ಟಿ ಕಾಣಿಸುತ್ತದೆ. ಅಲ್ಲಿ ಜಿಲ್ಲೆಗಳು, ವಿಮಾ ಕಂಪನಿಯ ಹೆಸರು ಕಾಣಿಸುತ್ತದೆ. ಆ ಆಧಾರದ ಮೇಲೆ ನೀವು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರಿ ಎಂಬ ಮಾಹಿತಿಯನ್ನು ಚೆಕ್ ಮಾಡಬಹುದು.

ಬೆಳೆ ವಿಮೆ ಕುರಿತಂತೆ ಯಾರಿಗೆ ಕೇಳಬೇಕು?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮೆ ಮಾಡಿಸಿದ ರೈತರು ವಿಮೆ ಕುರಿತಂತೆ ಮಾಹಿತಿ ಪಡೆಯಲು ಸರ್ಕಾರವು ರೈತರಿಗೆ ಉಚಿತ ಸಹಾಯವಾಣಿಯನ್ನು ಆರಂಭಿಸಿದೆ.  ಹೌದು, ರೈತರು 1800 180 1551 ನಂಬರಿಗೆ ಕರೆ ಮಾಡಿ ಬೆಳೆ ವಿಮೆ ಕುರಿತಂತೆ ಮಾಹಿತಿಗಳನ್ನು ಪಡೆಯಬಹುದು.

ಯಾರಿಗೆ ಬೆಳೆ ವಿಮೆ ಜಮೆಯಾಗಲ್ಲ?

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮೆ ಮಾಡಿಸಿದ ರೈತರು ಬೆಳೆ ಹಾನಿಯಾದ ನಂತರ ವಿಮಾ ಕಂಪನಿಗೆ ಮಾಹಿತಿ ನೀಡದೆ ಹೋದರೆ ಅಂತಹ ರೈತರಿಗೆ ವಿಮಾ ಸೌಲಭ್ಯ ಸಿಗುವ ಸಾಧ್ಯತೆ ಕಡಿಮೆಯಿದೆ. ಏಕೆಂದರೆ ನಿಮ್ ಬೆಳೆ ಯಾವ ಪ್ರಮಾಣದಲ್ಲಿ ಹಾಳಾಗಿದೆ? ಬಿತ್ತಿದ ಬೆಳೆ ಎಲ್ಲವೂ ಹಾಳಾಗಿದೆಯೋ ಅಥವಾ ಸ್ವಲ್ಪ ಪ್ರಮಾಣದಲ್ಲಿ ಹಾಳಾಗಿದೆಯೋ ಎಂಬುದನ್ನೆಲ್ಲಾ ಪರಿಶೀಲಿಸಿ ವಿಮಾ ಹಣ ರೈತರಿಗೆ ನವೀಡಲಾಗುವುದು.

Leave a Comment