ಬೆಳೆ ಹಾನಿ ಪರಿಹಾರ ಬೆಳೆ ವಿಮೆ ಪರಿಹಾರ ಸ್ಟೇಟಸ್ ಚೆಕ್ ಮಾಡಿ

Written by Ramlinganna

Updated on:

Crop damage and insurance status ರೈತರು ಬೆಳೆ ಹಾನಿ ಹಾಗೂ ಬೆಳೆ ವಿಮೆ ಪರಿಹಾರ ಸ್ಟೇಟಸ್ ನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು ಬೆಳೆ ಹಾನಿ ಪರಿಹಾರ ಸ್ಟೇಟಸ್ ಹಾಗೂ ಬೆಳೆ ವಿಮೆ ಪರಿಹಾರ ಸ್ಟೇಟಸ್ ಚೆಕ್ ಮಾಡಲು ಯಾರ ಬಳಿಯೂ ಹೋಗಬೇಕಿಲ್ಲ. ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಕ್ಷಣಾರ್ಧದಲ್ಲಿ ರೈತರು ಸ್ಟೇಟಸ್ ಚೆಕ್ ಮಾಡಬಹುದು.

Crop damage and insurance status ಬೆಳೆ ಹಾನಿ ಪರಿಹಾರ  ಹಾಗೂ ಬೆಳೆ ವಿಮೆ ಪರಿಹಾರ ಎರಡೂ ಒಂದೇನಾ?

ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಪರಿಹಾರ ಎರಡೂ ಒಂದೇ ಅಲ್ಲವೇ ಅಲ್ಲ. ಎರಡೂ ಬೇರೆ ಬೇರೆಯಾಗಿದೆ. ಹೌದು, ಬೆಳೆ ಹಾನಿ ಪರಿಹಾರವನ್ನು ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾದರೆ ಸರ್ಕಾರವು ಎಕರೆಗೆ ಇಂತಿಷ್ಟು ಪರಿಹಾರ ಹಣ ಘೋಷಿಸುತ್ತದೆ. ಮಳೆಯಾಶ್ರಿತ ಬೆಳೆಗಳು, ತೋಟಗಾರಿಕೆ ಬೆಳೆಗಳು ಹಾಗೂ ಬಹುವಾರ್ಷಿಕ ಬೆಳೆಗಳು ಹೀಗೆ ಪರಿಹಾರ ಹಣ ಘೋಷಿಸಲಾಗುವುದು.

ಬೆಳೆ ವಿಮೆ ಎಂದರೇನು?

ಬೆಳೆ ವಿಮೆಯನ್ನು ರೈತರು ತಮ್ಮ ಬೆಳೆಗಳಿಗೆ ವಿಮೆ ಕಟ್ಟಬೇಕು. ವಾಹನಗಳಿಗೆ ಇನ್ಸುರೆನ್ಸ್ ಪಾವತಿಸುವಂತೆ ಬೆಳೆಗಳಿಗೆ ವಿಮೆ ಪಾವತಿಸಬೇಕು. ಒಂದು ವೇಳೆ ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದರೆ ರೈತರಿಗೆ ಬೆಳೆ ಹಾನಿ ಪರಿಶೀಲನೆ ಮಾಡಿ ಬೆಳೆ ವಿಮೆ ಪರಿಹಾರ ಹಣ ನೀಡಲಾಗುವುದು.ಇದು ವಿಮೆ ಮಾಡಿಸಿದ ರೈತರಿಗೆ ಮಾತ್ರ ನೀಡಲಾಗುವುದು.  ಅದರಲ್ಲಿ ಬೆಳೆ ಹಾನಿಯಾದಾಗ 72 ಗಂಟೆಯೊಳಗೆ ಸಂಬಂಧಿಸಿದ ವಿಮಾ ಕಂಪನಿಗೆ ತಿಳಿಸಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರಕ್ಕೆ ಮೇಲಧಿಕಾರಿಗಳ ಗಮನಕ್ಕೆ ತರುತ್ತಾರೆ.

ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ರೈತರು ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಂಡು ಫ್ಲಡ್ ಆಯ್ಕೆ ಮಾಡಿ 2022-23 ಆಯ್ಕೆ ಮಾಡಿಕೊಂಡ ನಂತರ ಆಧಾರ್ ಸಂಖ್ಯೆ ನಮೂದಿಸಬೇಕು. ಇದಾದ ಮೇಲೆ ಕ್ಯಾಪ್ಚ್ಯಾ ಕೋಡ್  ಹಾಕಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿ ಬೆಳೆ ಹಾನಿ ಪರಿಹಾರ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಬೆಳೆ ವಿಮೆ ಪರಿಹಾರ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಬೆಳೆ ವಿಮೆ ಮಾಡಿಸಿದ ರೈತರು ಬೆಳೆ ವಿಮೆ ಪರಿಹಾರ ಸ್ಟೇಟಸ್ ಚೆಕ್ ಮಾಡಲು ಈ

https://www.samrakshane.karnataka.gov.in/Premium/CheckStatusMain_aadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ರೈತರು ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.  ಮೊಬೈಲ್ ನಂಬರ್ ನಮೂದಿಸಿದ ನಂತರ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು  ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಬೇಕು. ಯಾವ ದಿನಾಂಕದಂದು ಬೆಳೆ ವಿಮೆ ಮಾಡಿಸಿದ್ದೀರಿ. ಬೆಳೆ ವಿಮೆ ಹಣ ಎಲ್ಲಿ ಪಾವತಿಸಲಾಗಿದೆ. ಬ್ಯಾಂಕ್ ದಿಂದಾಗಿ ಅಪ್ರೂವ್ ಆಗಿ ಇನ್ಸುರೆನ್ಸ್ ಕಂಪನಿಗೆ ಫಾರ್ವರ್ಡ್ ಮಾಡಲಾಗಿದೆಯೇ  ಎಂಬ ಮಾಹಿತಿಯನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಬೆಳೆ ಹಾನಿ ಪರಿಹಾರ ಯಾವ ಬೆಳೆಗಳಿಗೆ ಎಷ್ಟು ನೀಡಲಾಗುವುದು?

ಬೆಳೆ ಹಾನಿಯನ್ನು ಬೆಳೆ ಹಾಳಾದ ಎಲ್ಲಾ ರೈತರಿಗೆ ಸರ್ಕಾರವು ಪರಿಹಾರ ನೀಡುವುದು. ಪ್ರಸಕ್ತ ವರ್ಷ ಮಳೆಯಾಶ್ರಿತ  ಪ್ರದೇಶದಲ್ಲಿ ಪ್ರತಿ ಹೆಕ್ಟೇರಿಗೆ 16800ರೂಪಾಯಿ, ನೀರಾವರಿ ಬೆಳೆಗಳಿಗೆ 25500 ರೂಪಾಯಿ ಅದೇ ರೀತಿ ಬಹುವಾರ್ಷಿಕ ಬೆಳೆಗಳಿಗೆ 28000 ರೂಪಾಯಿ ಪರಿಹಾರ ನೀಡಲು ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

Leave a Comment