ಹೂವು, ಹಣ್ಣು, ತರಕಾರಿ ಬೆಳೆದ ರೈತರಿಗೆ ಕೋವಿಡ್ ಪರಿಹಾರ ಜಮೆ

Written by By: janajagran

Updated on:

Covid Compensation ಲಾಕ್ಡೌನ್ ನಿಂದ ಮಾರುಕಟ್ಟೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ  ಹೂವು, ಹಣ್ಣು, ತರಕಾರಿ ಬೆಳೆಗಾರರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಧನವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.  ಬೆಳೆ ಸಮೀಕ್ಷೆ ಮಾಡಿದ ಎಲ್ಲಾ ರೈತರಿಗೆ ಕೋವಿಡ್ ಪರಿಹಾರ ಯೋಜನೆಯಡಿಯಲ್ಲಿ  ಸರ್ಕಾರ ಪ್ರತಿ ಹೆಕ್ಟೇರಿಗೆ 10 ಸಾವಿರ ರೂಪಾಯಿ ಪರಿಹಾರ ಧನ ನೀಡಿದೆ.

ಕೊರೋನಾ ಸೋಂಕು ತಡೆಯುವುದಕ್ಕಾಗಿ ಸರ್ಕಾರವು ಲಾಕ್ಡೌನ್ ಹೇರಿತ್ತು. ಆಗ ಹೂವು, ತರಕಾರಿ ಬೆಳೆದ ರೈತರು ನಗರಗಳಿಗೆ ಹಾಗೂ ಸೂಕ್ತ ಮಾರುಕಟ್ಟೆಗೆ ಬೆಳೆದ ಬೆಳೆಯನ್ನು ಸಾಗಾಟ ಮಾಡದೆ ನಷ್ಟ ಅನುಭವಿಸಿದ್ದರು. ಅಂತಹ ರೈತರಿಗೆ ಸರ್ಕಾರ ಪರಿಹಾರ ಧನ ಘೋಷಿಸಿದಂತೆ ಈಗ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.

ಜಿಲ್ಲಾಮಟ್ಟದಲ್ಲಿ ತೀವ್ರತರವಾಗಿ ಹಾನಿಗೊಳಗಾದ ವಾರ್ಷಿಕ ಮತ್ತು ಬಹುವಾರ್ಷಿಕ ಹೂವಿನ ಬೆಳೆಗಳು, ಹಣ್ಣಿನ ಬೆಳೆಗಳಾದ ಮಾವು, ಸಪೋಟ, ಆಂಜೂರ, ಕಲ್ಲಂಗಡಿ, ಕರಬೂಜ, ದಾಳಿಂಬೆ, ಪೇರಲ, ನಿಂಬೆ, ಮೋಸಂಬಿ, ದ್ರಾಕ್ಷಿ, ಅನಾನಸ್, ಪಪ್ಪಾಯ ಮತ್ತು ಬಾಳೆ ಹಾಗೂ ತರಕಾರಿ ಬೆಳೆಗಳಾದ ಈರುಳ್ಳಿ, ಟೊಮ್ಯಾಟೋ, ಹಸಿರು ಮೆಣಸಿನಕಾಯಿ, ಸೌತೆಕಾಯಿ, ಬದನೆಕಾಯಿ, ಹೂಕೋಸು, ಎಲೆಕೋಸು, ಬೆಂಡೆಕಾಯಿ, ಸಿಹಿಕುಂಬಳ, ಹೀರೇಕಾಯಿ, ಹಾಗಲಕಾಯಿ, ಸೋರೆಕಾಯಿ, ಗಜ್ಜರಿ, ಸಿಹಿಗೆಣಸು, ಬೀನ್ಸ್, ಜವಳಿಕಾಯಿ, ದಪ್ಪ ಮೆಣಸಿನಕಾಯಿ, ಬೀಟ್ ರೂಟ್, ನುಗ್ಗೆಕಾಯಿ, ತೊಂಡೆಕಾಯಿ, ಮೂಲಂಗಿ ಮತ್ತು ಸೊಪ್ಪು ಜಾತಿಯ ತರಕಾರಿ ಬೆಳೆಗಳನ್ನು ಪರಿಹಾರಕ್ಕಾಗಿ ಪರಿಗಣಿಸಲಾಗಿದೆ.

Covid Compensation ಫಲಾನುಭವಿಗಳ ಆಯ್ಕೆ ಮತ್ತು ಅರ್ಹತೆ

ಫಲಾನುಭವಿಗಳ ಆಯ್ಕೆಯನ್ನು ಆಡಳಿತ ವತಿಯಿಂದ ಕೈಗೊಳ್ಳಲಾದ ಬೆಳೆ ಸಮೀಕ್ಷೆಕ್ಕನುಗುಣವಾಗಿ ಆಯ್ಕೆ ಮಾಡಲಾಗಿದೆ.  ವಾರ್ಷಿಕ ಹೂವು,ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ 2021-22ನೇ ಸಾಲಿನ ಬೇಸಿಗೆ ಬೆಳೆ ಸಮೀಕ್ಷೆಯನ್ನು ಆಧಾರವಾಗಿರಿಸಿಕೊಂಡು  ಮತ್ತು ಬಹುವಾರ್ಷಿಕ ಬೆಳಗಳಿಗೆ 2020-21ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆಯನ್ನು ಆಧಾರವಾಗಿರಿಸಿ ಪರಿಹಾರ ನೀಡಲಾಗುತ್ತಿದೆ. ಈ ಪರಿಹಾರವನ್ನು ಏಪ್ರೀಲ್ ಮತ್ತು ಮೇ ತಿಂಗಳಿನಲ್ಲಿ ಕಟಾವಿಗೆ ಬಂದಿರುವ ಹಣ್ಣು ಮತ್ತು ತರಕಾರಿಗಳನ್ನು ಮಾತ್ರ ಪರಿಗಣಿಸಿ ಪರಿಹಾರ ನೀಡಲಾಗಿದೆ.

ಇದನ್ನೂ ಓದಿ ನಿಮ್ಮ ಜಮೀನಿನ ಮ್ಯಾಪ್ mobileನಲ್ಲಿ ಡೌನ್ಲೋಡ್ ಮಾಡಿ

ಬಾಳೆ ಮತ್ತು ಈರುಳ್ಳಿ ಬೆಳಗೆ ಸಂಬಂದಿಸಿದಂತೆ ಮೇ ತಿಂಗಳಿನಲ್ಲಿ ಕಟಾವಿಗೆ ಬಂದಿರುವ ಫಸಲನ್ನು ಮಾತ್ರ ಪರಿಗಣಿಸಿ, ಉಳಿದ ಬೆಳೆಗಳನ್ನು ಏಪ್ರೀಲ್ ಮತ್ತು ಮೇ ತಿಂಗಳಿನಲ್ಲಿ ಕಟಾವಿಗೆ ಬಂದಿರುವ ಫಸಲನ್ನು ಮಾತ್ರ ಪರಿಹಾರಧನಕ್ಕಾಗಿ ಪರಿಗಣಿಸಲಾಗಿಸಿ ಜಮೆ ಮಾಡಲಾಗಿದೆ.

ನಿಮ್ಮ ಖಾತೆಗೆ ಪರಿಹಾರ ಹಣ ಜಮೆಯಾಗಿರದಿದ್ದರೆ ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಬಹುದು.

ತರಕಾರಿ ಹಾಗೂ ತೋಟಗಾರಿಕೆ ಬೆಳೆದ ರೈತರಿಗೆ ಪರಿಹಾರ ಹಣ ಜಮೆ ಮಾಡಲಾಗಿದೆ.  ಈಗಾಗಲೇ ರೈತರ ಖಾತೆಗೂ ಹಣ ಜಮೆಯಾಗಿದೆ. ಯಾರಿಗೆ ಹಣ ಜಮೆಯಾಗಿಲ್ಲವೋ ಅಂತಹ ರೈತರು ಮೊಬೈಲ್ ನಲ್ಲೇ ಬ್ಯಾಲೆೆನ್ಸ್ ಚೆಕ್ ಮಾಡಬಹುದು. ಅಲ್ಲೂ ಗೊತ್ತಾಗುತ್ತಿಲ್ಲವಾದರೆ ನಿಮ್ಮ ಹತ್ತಿರದ ಬ್ಯಾಂಕಿಗೆ ಹೋಗಿ ವಿಚಾರಿಸಬಹುದು.

Leave a Comment