ಕೊವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಚದಲ್ಲಿರುವ ರೈತರಿಗೆ, ಅಸಂಘಟಿತ ಕಾರ್ಮಿಕರಿಗೆ (relief package to farmers ) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು 1250 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಇತ್ತೀಚೆಗೆ ಲಾಕ್ಡೌನ್ ನಿಂದಾಗಿ ತರಕಾರಿ, ಹೂವು ಹಣ್ಣು ಬೆಳೆಯುವ ರೈತರಿಗೆ ಖರೀದಿದಾರರಿಲ್ಲದೆ ಹಾನಿಯಾಗಿತ್ತು. ಹಾಕಿದ ಖರ್ಚು ಬರದೆ ರೈತರ ಸಂಕಷ್ಟದಲ್ಲಿ ಸಿಲುಕಿದ್ದರು. ಹೀಗಾಗಿ ರೈತರಿಗೆ ನೆರವಾಗಲಿ ಎಂದು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಇಂದು ಬೆಳಗ್ಗೆ ಮುಖ್ಯಮಂತ್ರಿಯವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೂವು ಬೆಳೆಗಾರರಿಗೆ ಹಾನಿಯಾಗಿದ್ದರೆ ಹೆಕ್ಟೇರಿಗೆ 10 ಸಾವಿರ ರೂಪಾಯಿ ಘೋಷಿಸಿದ್ದಾರೆ. ಇದು 20 ಸಾವಿರ ರೈತರಿಗೆ 12.73 ಕೋಟಿ ಖರ್ಚಾಗುತ್ತದೆ. ಅದರೇ ರೀತಿ ಹಣ್ಣು ತರಕಾರಿ, ಬೆಳೆಯುವ ರೈತರಿಗೂ ಪ್ರತಿ ಹೆಕ್ಟೇರಿಗೆ 10ಸಾವಿರ ರೂಪಾಯಿ ಪರಿಹಾರ ನೀಡಿದದ್ರೆ. ಸುಮಾರು 70 ಸಾವಿರ ರೈತರಿಗೆ ಇದರ ಪ್ರಯೋಜನ ಸಿಗಲಿದೆ.
ಸಾಲ ಮರು ಪಾವತಿ ದಿನಾಂಕ ಜುಲೈ ಅಂತ್ಯದವರೆಗೆ ವಿಸ್ತರಣೆ
ರೈತರು, ಸ್ವಸಹಾಯ ಸಂಘ, ಸೊಸೈಟಿ ಸಾಲ ಮರು ಪಾವತಿ ದಿನಾಂಕ ಜುಲೈ ಅಂತ್ಯದವರೆಗೆ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪಡೆದಿರುವ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲ ಕಂತಿನ ಮರುಪಾವತಿಯನ್ನು 31-07-2021ರವರೆಗೆ ಅಂದರೆ ಮೂರು ತಿಂಗಳು ವಿಸ್ತರಿಸಲಾಗಿದೆ. ಈ ಅವಧಿಯಲ್ಲಿನ ಬಡ್ಡಿ ಮೊತ್ತವನ್ನು ಸರ್ಕಾರದವೇ ಪಾವತಿಸಲಿದೆ ಇದಕ್ಕಾಗಿ 135 ಕೋಟಿ ರೂಪಾಯಿ ಖರ್ಚು ಆಗಲಿದೆ.
ಆಟೋ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಗಳ ಚಾಲಕರಿಗೆ ತಲಾ 3 ಸಾವಿರ ರೂಪಾಯಿ, ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ರೂಪಾಯಿ, ಅಸಂಘಟಿತ ವಲಯದ ಕಾರ್ಮಿಕರಿಗೆ ತಲಾ 2 ಸಾವಿರ ರೂಪಾಯಿ , ಬೀದಿ ವ್ಯಾಪಾರಿಗಳಿಗೆ 2 ಸಾವಿರ ಹಾಗೂ ಕಲಾವಿದರು ಮತ್ತು ಕಲಾತಂಡಗಳಿಗೆ 3 ಸಾವಿರ ರೂಪಾಯಿ ನೀಡಲಾಗುವುದು ಎಂದು ತಿಳಿಸಿದ್ದಾರೆ.