ಜಮೀನಿನ ಮಾಲಿಕರು ಆಕಸ್ಮಿಕವಾಗಿ ಮೃತಪಟ್ಟರೆ ಅವರ ಹೆಸರಿನಲ್ಲಿರುವ ಜಮೀನು ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಪೌತಿ ಖಾತೆ ಎನ್ನುವರು. ಹೌದು, ರೈತರ ಹೆಸರಿನಲ್ಲಿರುವ ಪಿತ್ರಾರ್ಜಿತ ಕೃಷಿ ಜಮೀನನ್ನು ಅವರ ನಿಧನದ ಬಳಿಕ ಅವರ ಮಕ್ಕಳ ಹೆಸರಿಗೆ ಖಾತೆ ಮಾಡಿಸಿಕೊಳ್ಳುವುದನ್ನೇ ಪೌತಿ ಖಾತೆ ಎನ್ನುವರು.
ಆದರೆ ರಾಜ್ಯದಲ್ಲಿ ಬಹತೇಕ ಜಮೀನಿನ ಮಾಲಿಕರು ಮಾಲಿಕರು ಮೃತಪಟ್ಟನಂತರ ಅವರ ಹೆಸರಿನಲ್ಲಿರುವ ಜಮೀನು ಅವರ ಕುಟುಂಬಸ್ಥರಿಗೆ ಅಂದರೆ ವಾರಸುದಾರರಿಗೆ ವರ್ಗಾವಣೆಯಾಗುವುದೇ ಇಲ್ಲ. ಮುಂದೆ ರೈತರು ಜಮೀನು ವರ್ಗಾವಣೆ ಮಾಡಿಕೊಳ್ಳಲು ಬಹಳಷ್ಟು ಸಂಕಷ್ಟಗಳನ್ನು ಎದರಿಸುತ್ತಾರೆ. ಪೌತಿ ಖಾತೆಯಡಿ ಜಮೀನು ವರ್ಗಾವಣೆ ಏಕೆ ಮಾಡಿಕೊಳ್ಳಬೇಕು? ಜಮೀನು ವರ್ಗಾವಣೆ ಮಾಡಿಕೊಳ್ಳುವುದರಿಂದ ರೈತರಿಗೇನು ಲಾಭ ಎಂಬುದರ ಮಾಹಿತಿ ಇಲ್ಲಿದೆ.
ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿವುದರಿಂದ ರೈತರಿಗೇನು ಲಾಭ?
ಪ್ರಕೃತಿ ವಿಕೋಪದಂತಹ ಅತೀವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಇನ್ನಿತರ ಕಾರಣಗಳಿಂದ ಬೆಳೆ ಹಾನಿಗೊಳಗಾದಾಗ ರೈತರಿಗೆ ಪರಿಹಾರ ಹಾಗೂ ಸರ್ಕಾರದ ಯೋಜನೆಗಳ ಸೌಲಭ್ಯ ನೀಡಲು ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಳ್ಳುವುದು ಅಗತ್ಯ. ಇದರೊಂದಿಗೆ ಬೆಳೆ ವಿಮೆ ಮಾಡಿಸಿ ಪರಿಹಾರ ಪಡೆಯಲು ಅನುಕೂಲವಾಗುತ್ತದೆ. ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಂಡರೆ ಜಮೀನು ಮಾರಾಟ ಮಾಡಲು ಯಾವುದೇಸಮಸ್ಯೆಯಾಗಏಕೆಂದರೆ ವಾರಸುದಾರರ ಹೆಸರಿಗೆ ಜಮೀನು ಇಲ್ಲದಿದ್ದರೆ ಸರ್ಕಾರದ ಸೌಲಭ್ಯ ಸಿಗುವುದಿಲ್ಲ.
ಇದನ್ನೂಓದಿ : ಈ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಉಳಿಯಿತು ಕೇವಲ ಐದು ದಿನ: ಮೊಬೈಲ್ ನಲ್ಲೇ ಚೆಕ್ ಮಾಡಿ
ವಾರಸುದಾರರು ಜಮೀನು ಸಾಗುವಳಿ ಮಾಡುತ್ತಿದ್ದರೂ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಾರೆ. ಮೃತ ವ್ಯಕ್ತಿಗಳ ಹೆಸರಿನಲ್ಲಿರುವ ಜಮೀನಿನ ದಾಖಲೆಗಳು ಅವರ ವಾರಸುದಾರರಿಗೆ ವರ್ಗಾವಣೆ ಆಗದೆ ಇರುವುದರಿಂದ ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳು ಪಡೆಯಲು ಆಗುವುದಿಲ್ಲ. ಕೃಷಿ ಸಂಬಂಧಿ ಸಾಲಗಳನ್ನು ಪಡೆಯುವದಕ್ಕೂ ಆಗುತ್ತಿಲ್ಲ.ಈ ಎಲ್ಲಾ ಸಮಸ್ಯೆಗಳಿಗೆ ಅಭಿಯಾನದ ಮೂಲಕ ಪರಿಹಾರ ಒದಗಿಸಲಾಗುತ್ತಿದೆ.
ಪೌತಿ ಖಾತೆ ಮೂಲಕ ಜಮೀನು ಯಾವಾಗ ವರ್ಗಾವಣೆ ಮಾಡಿಕೊಳ್ಳಬಹುದು?
ರೈತರು ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಳ್ಳದೆ ಅನುಭವಿಸುತ್ತಿರುವ ಸಮಸ್ಯೆಯನ್ನು ದೂರ ಮಾಡಲು ರಾಜ್ಯ ಸರ್ಕಾರವು ಪೌತಿ ಖಾತೆ ಆಂದೋಲವನ್ನು ಆರಂಭಿಸಿದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮದ ಮೂಲಕ ಜಮೀನಿನ ಮಾಲಿಕರು ಮೃತಪಟ್ಟರೆ ವಾರಸುದಾರರ ಹೆಸರಿಗೆ ವರ್ಗಾವಣೆ ಮಾಡಿಕೊಡಲಾಗುವುದು. ರೈತರ ಸಂಕಷ್ಟವನ್ನು ನಿವಾರಿಸಲು ಸರ್ಕಾರ ಪೌತಿ ಖಾತೆ ಆಂದೋಲನ ನಡೆಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಪೌತಿ ಖಾತೆಯ ಮಾರ್ಗಸೂಚಿಗಳು
ಜಮೀನು ಮಾಲಿಕರು ಮರಣ ಹೊಂದಿದಾಗ ಗ್ರಾಮ ಲೆಕ್ಕಿಗರು ಮರಣ ಹೊಂದಿದ ಮಾಲಿಕರ ವಿವರವನ್ನು ಮರಣ ನೋಂದಣಿ ರಿಜಿಸ್ಟಾರ್ ರಿಂದ ಪಡೆಯಬೇಕು. ಮನೆ ಮನೆಗೆ ಹೋಗಿ ಸಂದರ್ಶಿಸಿ ಮಾಹಿತಿ ಪಡೆಯಬೇಕು.ಮರಣ ಪ್ರಮಾಣ ಪತ್ರ ಹಾಗೂ ವಂಶವೃಕ್ಷ ಪತ್ರವನ್ನು ಮೃತರ ಕುಟುಂಬದವರಿಂದ ಪಡೆದು ಭೂಮಿ ತಂತ್ರಾಂಶದಲ್ಲಿ ಪೌತಿ ಖಾತೆಗಾಗಿ ಅರ್ಜಿಯನ್ನು ದಾಖಲಿಸಬೇಕು. ಒಂದು ವೇಳೆ ಭೂ ಮಾಲಿಕರು ಮರಣಹೊಂದಿ ಒಂದು ವರ್ಷ ಕಳೆದರೂ ಮರಣ ನೋಂದಣಿಯಾಗದಿದ್ದಲ್ಲಿ ಜೆಎಂಎಫ್.ಸಿ ಕೋರ್ಟ್ ನಲ್ಲಿ ಮರಣದ ಕುರಿತು ಆದೇಶ ಪಡೆಯಬೇಕು. ಮರಣ ಪತ್ರವನ್ನು ತಹಶೀಲ್ದಾರ ರ ಕಚೇರಿಯಿಂದ ಪಡೆದ ಬಳಿ ಪೌತಿ ಖಾತೆ ಮಾಡಿಸಲು ಅರ್ಜಿ ಹಾಕಬಹುದು.
ಇದನ್ನೂಓದಿ : ನಿಮಗೆ ಎಷ್ಟು ಎಕರೆಗೆ ಯಾವ ಬೆಳೆಗೆ ಬೆಳೆ ಹಾನಿ ಪರಿಹಾರ ಜಮೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಆಧಾರ್ ಮತ್ತು ಪಡಿತರ ಚೀಟಿ ದಾಖಲೆಗಳನ್ನು ಪರಿಶೀಲಿಸಿಕೊಂಡು ವಿಎ ಮತ್ತು ರೆವಿನ್ಯು ಇನ್ಸಪೆಕ್ಟರ್ ಗಳು ಸಹ ಸ್ಥಳ ಮಹಜರು ನಡೆಸಿ ಖಾತೆದಾರರು ಮರಣವಾಗಿರುವ ಬಗ್ಗೆ ವಾರಸುದಾರರಿಂದ ಅಫಿಡಿವೇಟ್ ಪಡೆದು ಅವರುಗಳ ಆಧಾರ್, ಪಡಿತರ ದಾಖಲೆಗಳೊಂದಿಗೆ ಪೌತಿ ಖಾತೆ ಮಾಡಿಸಲು ಅರ್ಜಿ ಸಲ್ಲಿಸಬಹುದು.
ಮರಣ ಹೊಂದಿದ ಖಾತೆದಾರರ ವಿವರಪತ್ತೆ ಹಚ್ಚಿ ದಾಖಲಿಸಲು ಗ್ರಾಮ ಲೆಕ್ಕಿಗರಿಗೆ ಹೊಣೆ ನೀಡಲಾಗಿದೆ. ಗ್ರಾಮ ಲೆಕ್ಕಿಗರು ಮನೆ ಮನೆ ಮನೆಗೆ ತೆರಳಿ ಮರಣ ಹೊಂದಿದವರ ವಿವರಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ.