ಸರ್ವೆ ನಂಬರ್ ಹಾಕಿ ಜಮೀನಿನ ಮುಟೇಶನ್ ಚೆಕ್ ಮಾಡಿ

Written by Ramlinganna

Updated on:

Check your land records in mobile ರೈತರು ಕೇವಲ ಸರ್ವೆ ನಂಬರ್ ಹಾಕಿದರೆ ಸಾಕು, ಜಮೀನಿಗೆ ಸಂಬಂಧಿಸಿದ ಹಲವಾರು ದಾಖಲೆಗಳನ್ನು ಮೊಬೈಲ್ ನಲ್ಲೇ ಪಡೆಯಬಹುದು. ಹೌದು, ರೈತರು ಮನೆಯಲ್ಲಿಯೇ ಕುಳಿತು ಯಾವುದೇ ಸಮಯದಲ್ಲಿ ತಮ್ಮ ಜಮೀನಿನ ದಾಖಲೆಗಳನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಮೊಬೈಲ್ ನಲ್ಲೇ ಸರಳವಾಗಿ ಚೆಕ್ ಮಾಡಲು ಹಾಗೂ ಡೌನ್ಲೋಡ್ ಮಾಡಲು ಹಲವಾರು ವಿಧಗಳ ಮೂಲಕ ವ್ಯವಸ್ಥೆ ಮಾಡಿದೆ. ಹಾಗಾದರೆ ಯಾವ ಯಾವ ದಾಖಲೆಗಳನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು ಅಂದುಕೊಂಡಿದ್ದೀರಾ… ಇಲ್ಲಿದೆ ನೋಂಡಿ ಸಂಕ್ಷೀಪ್ತ ಮಾಹಿತಿಗಳ ನೋಟ.

Check your land records in mobile ಸರ್ವೆ ನಂಬರ್ ಹಾಕಿ ಯಾವ ಯಾವ ದಾಖಲೆಗಳನ್ನು ಚೆಕ್ ಮಾಡಬಹುದು?

ರೈತರು ತಮ್ಮ ಜಮೀನಿನ ಸರ್ವೆ ನಂಬರ್ ಹಾಕಿ ಪಹಣಿ (ಆರ್.ಟಿ.ಸಿ) ಪಡೆಯಬಹುದು. ಜಮೀನಿಗೆ ಸಂಬಂಧಿಸಿದ ಆಕಾರ ಬಂದ್, ಮುಟೇಶನ್, ಜಮೀನನ ಖಾತಾ, ಹಳೆಯ ಪಹಣಿಗಳು, ಪ್ರಸಕ್ತ ವರ್ಷದ ಪಹಣಿ, ಮುಟೇಶನ್ ಸ್ಟೇಟಸ್, ಮೋಜಿನಿ ಸ್ಟೇಟಸ್, ಮೋಜಿನಿಗೆ ಅರ್ಜಿ ಸಲ್ಲಿಸಲುವುದು, ತತ್ಕಾಲ್ ಪೋಡಿ ಸೇರಿದಂತೆ ಇನ್ನೂ ಹಲವಾರು ದಾಖಲೆಗಳನ್ನು ಕೇವಲ ಸರ್ವೆ ನಂಬರ್ ಮೂಲಕ ಮೊಬೈಲ್ ನಲ್ಲೇ ಪಡೆಯಬಹುದು. ಇದೆಲ್ಲಾ ದಾಖಲೆಗಳು ಪಡೆಯಲು ನಿಮ್ಮ ಮೊಬೈಲ್ ನಲ್ಲಿ ನೆಟ್ ಇರಬೇಕು. ಇದಕ್ಕೆ ಬಹಳ ಸಮಯವೂ ಬೇಕಾಗಿಲ್ಲ. ಒಂದೆರಡು ನಿಮಿಷದಲ್ಲೇ ನಿಮಗೆ ಬೇಕಾದ ದಾಖಲೆಯನ್ನು ಚೆಕ್ ಮಾಡಬಹುದು.

ಸರ್ವೆ ನಂಬರ್ ಹಾಕಿ ತಮಗೆ ಬೇಕಾದ ದಾಖಲೆಗಳನ್ನು ಪಡೆಯಲು ಹೀಗೆ ಮಾಡಿ

ರೈತರು ಮನೆಯಲ್ಲಿ ಕುಳಿತು ತಮಗೆ ಬೇಕಾದ ದಾಖಲೆ ಪಡೆಯಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮುಂದೆ ಕಂದಾಯ ಇಲಾಖೆಯು ಅಭಿವೃದ್ಧಿಪಡಿಸಿದ ಭೂಮಿ ಆನ್ಲೈನ್ ನಲ್ಲಿ ಲ್ಯಾಂಡ್ ರಿಕಾರ್ಡ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ current year, Old year, MR, Mutation Status, Khata Extract, Survey Documents, Akarband ಹೀಗೆ ಹಲವಾರು ಆಯ್ಕೆಗಳು ಕಾಣುತ್ತವೆ.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ನೀವು ಯಾವ ದಾಖಲೆ ಪಡೆಯಬೇಕೆಂದುಕೊಳ್ಳಬೇಕೆಂದುಕೊಂಡಿದ್ದೀರೋ  ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಉದಾಹರಣೆಗೆ ನೀವು ಹಳೆಯ ಪಹಣಿಗಳನ್ನು ಚೆಕ್ ಮಾಡಬೇಕಾದರೆ Old Year ಮೇಲೆ ಕ್ಲಿಕ್ ಮಾಡಬೇಕು.ನಿಮ್ಮ ಜಮೀನಿನ ಮುಟೇಶನ್ ಚೆಕ್ ಮಾಡಬೇಕಾದರೆ MR ಮೇಲೆ ಕ್ಲಿಕ್ ಮಾಡಬೇಕು. ಜಮೀನಿನ ಖಾತಾ ಚೆಕ್ ಮಾಡಬೇಕಾದರೆ Khata Extract ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಜಮೀನಿನ ಆಕಾರಬಂದ್ ಚೆಕ್ ಮಾಡಬೇಕಾದರೆ Akarband ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ನಿಮಗೆ ಜಮೀನಿನ ಮುಟೇಶನ್ ಚೆಕ್ ಮಾಡಬೇಕೆ?

ನಿಮಗೆ ಜಮೀನಿನ ಮುಟೇಶನ್ ಚೆಕ್ ಮಾಡಬೇಕಾದರೆ ರೈತರು  ಅಲ್ಲಿ ಕಾಣುವ MR ಮೇಲೆ ಕ್ಲಿಕ್ ಮಾಡಬೇಕು. ಅಥವಾ ಈ

https://landrecords.karnataka.gov.in/Service11/MR_MutationExtract.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ನಿಮಗೆ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆ, ತಾಲೂಕು ಆಯ್ಕೆ ಮಾಡಿಕೊಂಡ ನಂತರ ಹೋಬಳಿ ಆಯ್ಕೆ ಮಾಡಿಕೊಂಡು ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ಹಾಕಬೇಕು. ನಂತರ Fetch details ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಸರ್ವೆ ನಂಬರ್ ಹಾಗೂ ಹಿಸ್ಸಾನಂಬರ್ ನೊಂದಿಗೆ ಆಯ್ಕೆಗಳು ಕಾಣುತ್ತವೆ. ಅಲ್ಲಿ ನಿಮ್ಮ ಸರ್ವೆ ನಂಬರ್ ಹಾಗೂ ಹಿಸ್ಸಾ ನಂಬರ್ ಹಿಂದಿರುವ Select ಮೇಲೆ ಕ್ಲಿಕ್ ಮಾಡಿದ ನಂತರ Preview ಮೇಲೆ ಕ್ಲಿಕ್ ಮಾಡಿ ಮುಟೇಶನ್ ಚೆಕ್ ಮಾಡಬಹುದು. ಇದೇ ರೀತಿ ನಿಮಗೆ ಬೇಕಾದ ಇತರ ದಾಖಲೆಗಳನ್ನು ಚೆಕ್ ಮಾಡಿಕೊಳ್ಳಬಹುದು.

Leave a Comment