ನಿಮ್ಮ ಜಮೀನಿನ ಪೋಡಿ ಟಿಪ್ಪಣಿ ಮೊಬೈಲ್ ನಲ್ಲೇ ಹೀಗೆ ಪಡೆಯಿರಿ

Written by Ramlinganna

Updated on:

Check your land podi in mobile ರೈತರು ತಮ್ಮ ಜಮೀನಿನ ಹಿಸ್ಸಾ ಸರ್ವೆ ನಂಬರ್ ಸಹಿತ ಪೋಡಿ ಟಿಪ್ಪಣಿಯನ್ನು ಮೊಬೈಲ್ ನಲ್ಲೇ ಪಡೆಯಬಹುದು. ಹೌದು, ರೈತರು ಜಮೀನಿನ ಪಹಣಿ (ಆರ್.ಟಿ.ಸಿ)ಯನ್ನು ಮೊಬೈಲ್ ನಲ್ಲಿ ಪಡೆಯುವಂತೆ ಜಮೀನಿನ ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿಯನ್ನು ಸಹ ಮೊಬೈಲ್ ನಲ್ಲಿ ಪಡೆಯಬಹುದು.

Check your land podi in mobile ಜಮೀನಿನ ಪೋಡಿ ಟಿಪ್ಪಣಿ ಪಡೆಯುವುದು ಹೇಗೆ?

ರೈತರು ತಮ್ಮ ಜಮೀನಿನ ಪೋಡಿ ಟಿಪ್ಪಣಿಯನ್ನು ಮೊಬೈಲ್ ನಲ್ಲಿ ಪಡೆಯಲು ಈ

https://landrecords.karnataka.gov.in/service137/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸರ್ವೆ ಡಾಕುಮೆಂಟ್ ಪೇಡ್ ಓಪನ್ ಆಗುತ್ತದೆ.  ಆಗ ರೈತರು ತಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು.ಇದಾದ ಮೇಲೆ ಯಾವ ತಾಲೂಕಿಗೆ ಸಂಬಂಧಪಟ್ಟಿದ್ದೀರೋ ಆ ತಾಲೂಕನ್ನು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಂಡ ನಂತರ ಯಾವ ಗ್ರಾಮಕ್ಕೆ ಸಂಬಂಧಿಸಿದ್ದೀರೋ ಆ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. Surnoc ನಲ್ಲಿ ಸ್ಟಾರ್ (*) ನಮೂದಿಸಬೇಕು.

ಇದಾದಮೇಲೆ ಹಿಸ್ಸಾ ನಂಬರ್ ಗೊತ್ತಿದ್ದರೆ ಹಿಸ್ಸಾ ನಂಬರ್ ನಮೂದಿಸಬೇಕು. ಇಲ್ಲದಿದ್ದರೆ ಹಿಸ್ಸಾ ಕಾಲಂನಲ್ಲಿ (*)  ನಮೂದಿಸಬೇಕು.  ನಂತರ Search ಮೇಲೆ  ಕ್ಲಿಕ್ ಮಾಡಬೇಕು.  ಆಗ ಕ್ರಮಸಂಖ್ಯೆ, ಸರ್ವೆ ನಂಬರ್ ಹಾಗೂ ಹಿಸ್ಸಾ ನಂಬರ್ ಕಾಣುತ್ತದೆ. ನಿಮ್ಮ ಜಮೀನಿನ ಸರ್ವೆನಂಬರ್ ಹಿಸ್ಸಾ ನಂಬರ್ ಮುಂದುಗಡೆ ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಕಾಣುತ್ತದೆ. ಅದ ಮುಂದುಗಡೆ ಕೊನೆಗೆ ಕಾಣುವ ವೀವ್ ಡಾಕುಮೆಂಟ್  ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು.

ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.  ಅದೇ ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿಯಾಗಿರುತ್ತದೆ.  ನೀವು ನಮೂದಿಸಿದ ಸರ್ವೆ ನಂಬರ್ ಹಾಗೂ ಹಿಸ್ಸಾನಂಬರ್ ಕಾಣುತ್ತದೆ. ಎರಡು ಪೇಜ್ ಇರುತ್ತದೆ. ನೀವು ನಮೂದಿಸಿದ ಹಿಸ್ಸಾ ಸರ್ವೆ ನಂಬರ್ ನಲ್ಲಿ  ರೈತರ ಹೆಸರು ತಂದೆಯ ಹೆಸರು ಕಾಣುತ್ತದೆ. ಇದ ಮೂಲ ಸರ್ವೆ ಟಿಪ್ಪಣಿ ಪುಸ್ತಕವಾಗಿರುತ್ತದೆ.

ಇದನ್ನೂ ಓದಿ 2018 ರಲ್ಲಿ ನಿಮಗೆಷ್ಟು ಬೆಳೆ ಸಾಲಮನ್ನಾ ಆಗಿದೆ? ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಂಡಿದೆಯೇ? ಚೆಕ್ ಮಾಡಿ

ಪ್ರಿಂಟ್ ಬೇಕಾದರೆ ರೈತರು ತಮ್ಮ ಹತ್ತಿರದ ನಾಡ ಕಚೇರಿ ಅಥವಾ ತಹಶೀಲ್ದಾರ ಕಚೇರಿಯಲ್ಲಿ ಶುಲ್ಕ ಪಾವತಿಸಿದ ಓರಿಜಿನಲ್ ಪ್ರಿಂಟ್ ತೆಗೆದುಕೊಳ್ಳಬಹುದು.

ಪೋಡಿ ನಕ್ಷೆಯನ್ನು ತಯಾರಿಸಿಕೊಳ್ಳುವುದು ಹೇಗೆ?

ಭೂ ಒಡೆತನ ಹೊಂದಿರುವವರು ತಮ್ಮ ಜಮೀನಿನ ಪೋಡಿ ನಕ್ಷೆಯನ್ನು (ಸ್ಕೆಚ್) ತಾವೇ ತಯಾರಿಸಿಕೊಳ್ಳಬಹುದಾದ ಸ್ವಯಂ ಸೇವೆಯ ಹೊಸ ವ್ಯವಸ್ಥೆಯನ್ನು ಕಂದಾಯ ಇಲಾಖೆ ಸಿದ್ದಪಡಿಸಿದೆ.  ಇದಕ್ಕಾಗಿ ಕಂದಾಯ ಇಲಾಖೆಯು ಸ್ವಾವಲಂಬಿ ಎಂಬ ಹೆಸರಿನ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್ ನಿರ್ವಹಣೆ ಕೂಡ ತುಂಬಾ ಸರಳವಾಗಿದೆ.

ರೈತ ಬಾಂಧವರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಭಆಗ ಮಾಡಿಕೊಳ್ಳಲು ಇದು ಅವಕಾಶ ಕಲ್ಪಿಸಿದೆ. ಉದಾಹರಣೆಗೆ ಮನೆಯಲ್ಲಿ ಇಬ್ಬರು ಸಹೋದರರು, ಒಬ್ಬ ಸಹೋದರಿಯರು ತಮ್ಮ 4 ಎಕರೆ ಭೂಮಿಯನ್ನುಯಾರಿಗೆ ಎಷ್ಟು ಭಾಗ ಎಂಬುದನ್ನು ನಿರ್ಧರಿಸಿ ಸ್ಕೆಚ್ ಸಿದ್ದಪಡಿಸಬಹುದು.

ಏನಿದು ಪೋಡಿ?

ಪೋಡಿ ಎಂದರೆ ಜಮೀನಿನ ಭಾಗ ಮಾಡುವುದು ಎಂದರ್ಥ. ಒಂದು ಸರ್ವೆ ನಂಬರ್ ನಲ್ಲಿ ಒಬ್ಬರಿಗಿಂತ ಹೆಚ್ಚು ಜನರ ಹೆಸರು ಇದ್ದರೆ ಪ್ರತ್ಯೇಕವಾಗಿ ತಮ್ಮ ಹೆಸರಿಗೆ ಜಮೀನು ಮಾಡಿಕೊಳ್ಳುವ ಪ್ರಕ್ರಿಯೆಯಾಗಿದೆ.  ಅಂದರೆ ಪ್ರತ್ಯೇಕವಾಗಿ ಒಬ್ಬೊಬ್ಬರ ಹೆಸರಿಗೆ ಜಮೀನು ಮಾಡಿಕೊಳ್ಳುವುದು.

ಪೋಡಿಯಲ್ಲಿ ನಾಲ್ಕು ವಿಧಗಳಿರುತ್ತವೆ. ಹೌದು, ತತ್ಕಾಲ್ ಪೋಡಿ, ದರ್ಖಾಸು ಪೋಡಿ, ಆಲಿನೇಶನ್ ಪೋಡಿ ಹಾಗೂ ಮುಟೇಶನ್ ಪೋಡಿ ಎಂಬ ನಾಲ್ಕು ಪ್ರಕಾರಗಳಿರುತ್ತದೆ. ಇದರಲ್ಲಿ ರೈತರು ತತ್ಕಾಲ್ ಪೋಡಿಗೆ ಅರ್ಜಿ ಸಲ್ಲಿಸಿ ತಮ್ಮಹೆಸರಿಗೆ ಪ್ರತ್ಯೇಕವಾಗಿ ತಮ್ಮ ಹೆಸರಿಗೆ ಮಾಡಿಕೊಳ್ಳಬಹುದು.

Leave a Comment