ನಿಮ್ಮ ಮನೆಯ ಟ್ಯಾಕ್ಸ್ ಕಟ್ಟುವುದೆಷ್ಟಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Published on:

ನಾವು ನಮ್ಮ ಮನೆಯ ತೆರಿಗೆ ಕಟ್ಟುವುದು ಎಷ್ಟಿದೆ? ಹಿಂದೆ ತೆರಿಗೆ ಪಾವತಿಸಿದ್ದರೆ ಅದನ್ನೂ ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ತೆರಿಗೆ ಕಟ್ಟಿರುವುದದನ್ನು ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದಾ? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತಿದ್ದರೆ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. ಕೇವಲ ಒಂದೇ ನಿಮಿಷದಲ್ಲಿ ನಾವು ಮನೆಯಲ್ಲಿಯೇ ಕುಳಿತು ಯಾರ ನೆರವೂ ಇಲ್ಲದೆ ಚೆಕ್ ಮಾಡಬಹುದು. ಹೌದು, ಇದಕ್ಕಾಗಿ ನಾವು ಗ್ರಾಮ ಪಂಚಾಯತ ಕಚೇರಿಗೆ ಹೋಗುವ ಅವಶ್ಯಕತೆಯೂ ಇಲ್ಲ. ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ನಿಮ್ಮ ಮನೆಯ ತೆರಿಗೆ ಬಾಕಿ ಎಷ್ಟಿದೆ? ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ನಾವು ನಮ್ಮ ಮನೆಯ ತೆರಿಗೆ ಬಾಕಿ ಕಟ್ಟುವುದೆಷ್ಟಿದೆ ಎಂಬುದನ್ನು ಚೆಕ್ ಮಾಡಲು ಈ

https://mahitikanaja.karnataka.gov.in/PTBank/PTDemandCollectionAndBalance?ServiceId=23&Type=TABLE&DepartmentId=2065

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಮನೆ ತೆರಿಗೆ ಸಂಗ್ರಹ ಮತ್ತು ಬಾಕಿ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ಇಯರ್ ನಲ್ಲಿ 2022-2023 ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಿದರೆ ಸಾಕು, ನೀವು ಆಯ್ಕೆ ಮಾಡಿಕೊಂಡ ಗ್ರಾಮದಲ್ಲಿ ಯಾರು ಎಷ್ಟು ತೆರಿಗೆ ಕಟ್ಟುವ ಬಾಕಿ ಇದೆ ಎಂಬುದನ್ನು ಚೆಕ್ ಮಾಡಬಹುದು.

ಮನೆ ಮಾಲಿಕರ ಹೆಸರು ಇರುತ್ತದೆ.  ನಂತರ ನಿಮ್ಮ ಮನೆ ಸಂಖ್ಯೆ ಕಾಣಿಸುತ್ತದೆ. ಆಸ್ತಿ ಸಂಖ್ಯೆ ಹಾಗೂ ಆಸ್ತಿಯ ವಿಶಿಷ್ಟ ಐಡಿ ಇರುತ್ತದೆ. ನಂತರ ಮನೆ ತೆರಿಗೆ ಎಷ್ಟು ಸಂಗ್ರಹವಾಗಿದೆ. ನಂತರ ಇನ್ನೂ ತೆರಿಗೆ ಬಾಕಿ ಎಷ್ಟಿದೆ ಎಂಬ ಮಾಹಿತಿಯೂ ಅಲ್ಲಿ ಕಾಣಿಸುತ್ತದೆ.

ಇದನ್ನೂ ಓದಿ ನಿಮ್ಮ ಯಾವ ಸರ್ವೆ ನಂಬರ್ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಹೆಸರು ಅಲ್ಪಬೇಟಿಕ್ ಆರ್ಡ್ ಅಂದರ ಎ ದಿಂದ ಆರಂಭವಾಗುತ್ತದೆ. ಅಲ್ಲಿ ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ? ಎಂಬುದನ್ನು ನೋಡಿಕೊಂಡು ನಿಮ್ಮ ಹೆಸರು ಹುಡುಕಬಹುದು.

ಏನಿದು ಆಸ್ತಿ / ಮನೆ ತೆರಿಗೆ? (What is Property Tax)

ಆಸ್ತಿ ತೆರಿಗೆ ಎನ್ನುವುದು ಆಸ್ತಿ ಮಾಲಿಕರು ತಮ್ಮ ಆಯಾ ಪುರಸಭೆ ಅಥವಾ ಸ್ಥಳೀಯ ಸರ್ಕಾರಿ ಸಂಸ್ಥೆಗಳಿಗೆ ಪಾವತಿಸುವ ಹಣದ ಮೊತ್ತವಾಗಿದೆ. ಇದನ್ನು ರಾಜ್ಯ ಸರ್ಕಾರವು ನಿರ್ಧರಿಸುತ್ತದೆ. ಒಂದು ಪ್ರದೇಶದ ಪುರಸಭೆಯು ವಾರ್ಷಿಕವಾಗಿ ಅಥವಾ ಅರ್ಧ ವಾರ್ಷಿಕವಾಗಿ ತೆರಿಗೆಗಳನ್ನು ಮೌಲ್ಯಮಾಪನ ಮತ್ತು ವಿಧಿಸುವ ಶುಲ್ಕವನ್ನು ವಿಧಿಸುತ್ತದೆ.

ಆಸ್ತಿ ತೆರಿಗೆಯಲ್ಲಿ ಎಷ್ಟು ಪ್ರಕಾರಗಳಿವೆ? (Types of Property Tax)

ಆಸ್ತಿ ತೆರಿಗೆಯನ್ನು ನಾಲ್ಕು ಪ್ರಕಾರವಾಗಿ ವಿಂಗಡಿಸಲಾಗಿದೆ.

ವಸತಿ ಮತ್ತು ವಾಣಿಜ್ಯ ಕಟ್ಟಡಗಳು

ಜಮೀನು

ಬಾಡಿಗೆ ಮನೆಗಳು

ಪ್ಲಾಟ್ ಗಳು

ಆಸ್ತಿ ತೆರಿಗೆ ಕ್ಯಾಲ್ಕುಲೇಟರ್ (ಲೆಕ್ಕಾಚಾರ) ಹೇಗಿರುತ್ತದೆ? (property Tax calculation)

ಭಾರತದಲ್ಲಿ ಆಸ್ತಿ ತೆರಿಗೆ ಲೆಕ್ಕಾಚಾರವು ರಾಜ್ಯದಿಂದ ರಾಜ್ಯ್ಕಕ್ಕೆ ಭಿನ್ನವಾಗಿದೆ. ತೆರಿಗೆ ಲೆಕ್ಕಾಚಾರವು ಆಸ್ತಿ ಪ್ರಕಾರ, ಆಸ್ತಿಯ ಸ್ಥಳ, ಸ್ವಯಂ ಆಕ್ರಮಿತ ಅಥವಾ ಬಾಡಿಗೆ, ನೆಲ, ನಿರ್ಮಿಸಿದ ಮಹಡಿಗಳ ಸಂಖ್ಯೆ ಹೀಗೆ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆಸ್ತಿ ತೆರಿಗೆ ಲೆಕ್ಕಾಚಾರ ಮಾಡಲಾಗುವುದು.

ಆಸ್ತಿ ತೆರಿಗೆಯನ್ನು ಏಪ್ರೀಲ್ ಒಳಗಾಗಿ ಪಾವತಿಸುವವರಿಗೆ ಕೆಲವು ಜಿಲ್ಲೆಗಳಲ್ಲಿ ಶೇ. 5 ರಷ್ಟು ರಿಯಾಯಿತಿ ನೀಡಲಾಗಿದೆ. ನಿಮ್ಮ ಹತ್ತಿರದ ಪುರಸಭೆ, ಪಂಚಾಯತ್ ಕಚೇರಿಯಲ್ಲಿ ಏಪ್ರೀಲ್ 30 ರೊಳಗೆ ತೆರಿಗೆ ಪಾವತಿಸಬಹುದು.  ಒಂದು ವೇಳೆ ತೆರಿಗೆ ಪಾವತಿಸದಿದ್ದರೆ ಮುಂದಿನ ವರ್ಷ ನೀವು ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಹಾಗಾಗಿ ಕೊನೆಯ ದಿನಾಂಕದೊಳಗೆ ಆಸ್ತಿ ತೆರಿಗೆ ಪಾವತಿಸಬಹುದು.

Leave a comment