ರೈತರಿಗಿಲ್ಲಿದೆ ಸಂತಸದ ಸುದ್ದಿ. ಈಗ ರೈತರು ತಮ್ಮ ಜಮೀನಿನ ಮುಟೇಷನ್ ಸ್ಟೇಟಸ್ ಹಾಗೂ ಸಂಪೂರ್ಣ ಮಾಹಿತಿಯನ್ನು ಮೊಬೈಲ್ ನಲ್ಲಿಯೇ ಪಡೆಯಬಹುದು. ಹೌದು ರಾಜ್ಯ ಸರ್ಕಾರವು ರೈತರಿಗೆ ಅನುಕೂಲವಾಗಲೆಂದು ಭೂಮಿ ತಂತ್ರಾಂಶದಲ್ಲಿ ಈ ಸೌಲಭ್ಯವನ್ನು ಒದಗಿಸಿದೆ. ಮೊಬೈಲ್ ನಲ್ಲಿಯೇ ಮುಟೇಷನ್ ಮಾಹಿತಿ ಹೇಗೆ ಪಡೆಯಬಹುದು ಅಂದುಕೊಂಡಿದ್ದೀರಾ… ಇಲ್ಲಿದೆ ಸಂಪೂರ್ಣ ಮಾಹಿತಿ.
ರೈತರು ತಮ್ಮ ಜಮೀನು ಮುಟೇಷನ್ ಆಗಿದೆಯೋ ಇಲ್ಲವೋ ಎಂಬುದನ್ನು ನೋಡಲು ಈಗ ರೈತರು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ತಮ್ಮ ಮೊಬೈಲ್ ನಲ್ಲಿ ನೋಡಬಹುದು. ಭೂಮಿ ತಂತ್ರಾಂಶದಲ್ಲಿ ಜಮೀನಿನ ಪಹಣಿಯನ್ನು ಆನ್ಲೈನ್ ನಲ್ಲಿ ಪಡೆಯುವಂತೆ ಮುಟೇಷನ್ ನ ಸ್ಟೇಟಸ್ ಹಾಗೂ ಪ್ರಿಂಟ್ ಸಹ ತೆಗೆದುಕೊಳ್ಳಬಹುದು.
ರೈತರು ಮುಟೇಷನ್ ಸ್ಟೇಟಸ್ ಹಾಗೂ ಮಾಹಿತಿ ನೋಡಲು ಈ https://landrecords.karnataka.gov.in/service2/RTC.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ತಂತ್ರಾಂಶದ ಪೇಜ್ ಓಪನ್ ಆಗುತ್ತದೆ. ಇಲ್ಲಿ ಕರೆಂಟ್ ಇಯರ್ ಮುಟೇಷನ್ ನೋಡಬೇಕು ಅಥವಾ ಹಳೆಯ ವರ್ಷದ ಮುಟೇಷನ್ ಪ್ರತಿ ಪಡೆಯಬೇಕೋ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ ಈ ವರ್ಷದ ಮುಟೇಷನ್ ಸ್ಟೇಟಸ್ ನೋಡಬೇಕಾದರೆ ಕರೆಂಟ್ ಇಯರ್ ಮೇಲೆ ಕ್ಲಿಕ್ ಮಾಡಬೇಕು. ಮುಟೇಷನ್ ಮಾಹಿತಿ ನೋಡಬೇಕಾದರೆ MR ಮೇಲೆ ಕ್ಲಿಕ್ ಮಾಡಬೇಕು. Mutation status ಬೇಕಾದರೆ ಮುಟೇಷನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು.
ಉದಾಹರಣೆ ಮುಟೇಷನ್ ಮಾಹಿತಿ ನೋಡಬೇಕಾದರೆ ಎಮ್ಆರ್ ಮೇಲೆ ಕ್ಲಿಕ್ ಮಾಡಬೇಕು ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಆಯ್ಕೆ ಮಾಡಿಕೊಂಡು Fetch details ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಸರ್ವೆ ನಂಬರ್ ಅಡಿಯಲ್ಲಿ ಯಾರ್ಯಾರು ರೈತರು ಬರುತ್ತಾರೋ ಅವರ ಹೆಸರು ಬರುತ್ತದೆ.
ಅಲ್ಲಿ ನಿಮ್ಮ ಸರ್ವೆ ನಂಬರ್ ಹಿಸ್ಸಾ ಇರುತ್ತದೆ. ಅಧನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ Preview ಮೇಲೆ ಕ್ಲಿಕ್ ಮಾಡಬೇಕು. ಆಗ ಮುಟೇಷನ್ ರಿಜಿಸ್ಟರ್ ಪ್ರಿತ ಓಹನ್ ಆಗುತ್ತದೆ. ಇಲ್ಲಿ ಸರ್ವೆ ನಂಬರ್ ಅಡಿಯಲ್ಲಿ ಅ ಖರಾಬು ಜಮೀನು, ಬಿ ಖರಾಬ್ ಜಮೀನು ಎಷ್ಟಿದೆ ಬ ಮಾಹಿತಿ ಇರುತ್ತದೆ. ಇದರೊಂದಿಗೆ ಜಮೀನು ಪಟ್ಟಾ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಇರುತ್ತದೆ.
ಮುಟೇಷನ್ ಸ್ಟೇಟಸ್ ನೋಡಬೇಕಾದರೆ ಈ https://landrecords.karnataka.gov.in/Service12/MutationStatus.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ತಂತ್ರಾಂಶದ ಮುಟೇಷನ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಹಳ್ಳಿ, ಸರ್ವೆ ನಂಬರ್ Surnoc No ನಲ್ಲಿ *ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ಇದ್ದರೆ ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.ನಂತರ Fetch details ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಜಮೀನಿನ ಮುಟೇಷನ್ ಸ್ಟೇಟಸ್ ನೋಡಬಹುದು.