ನೀವು ಯಾವ ಯಾವ ಬ್ಯಾಂಕಿನಲ್ಲಿ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಎಷ್ಟು ಸಾಲ ಪಡೆದಿದ್ದಾರೆ ಎಂಬುದನ್ನು ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಇಂದು ಬ್ಯಾಂಕುಗಳಲ್ಲಿ, ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದಿರುತ್ತಾರೆ. ಕೆಲವು ಸಲ ಸಾಲ ಮರುಪಾವತಿಸಿದ್ದರೂ ತಮಗೆ ಗೊತ್ತಿಲ್ಲದೆ ಸಾಲ ಉಳಿದಿದ್ದರೆ ಇಲ್ಲಿ ಚೆಕ್ ಮಾಡಬಹುದು. ಹೌದು, ಇಂದು ಯಾವುದೇ ಬ್ಯಾಂಕುಗಳಾಗಲಿ, ಖಾಸಗಿ ಹಣಕಾಸು ಸಂಸ್ಥೆಗಳಾಗಲಿ ಸಾರ್ವಜನಿಕರಿಗೆ ಸಾಲ ನೀಡವುದಕ್ಕಿಂತ ಮೊದಲು ಸಿಬಿಲ್ ಸ್ಕೋರ್ ಚೆಕ್ ಮಾಡುತ್ತಾರೆ.

ಸಿಬಿಲ್ ಸ್ಕೋರ್ ಚೆಕ್ ಮಾಡಿದ ನಂತರ ಸಾರ್ವಜನಿಕರಿಗೆ ಸಾಲ ನೀಡಲಾಗುವುದು. ಕೆಲವು ಸಲ ಸಾಲದ ಬಡ್ಡಿ ಅಸಲು ಪಾವತಿಸಿರುತ್ತಾರೆ. ಆದರೆ ಕೆಲವು ಸಲ ಬಡ್ಡಿ ಕಟ್ಟಿರುವುದಿಲ್ಲ. ಅದೇ ದೊಡ್ಡಮಟ್ಟದಲ್ಲಿ ಬೆಳೆದಿರುತ್ತದೆ. ನಿಮಗೆ ಗೊತ್ತಿಲ್ಲದೆ ಯಾವುದೇ ಬ್ಯಾಂಕುಗಳಲ್ಲಿ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲವಿದ್ದರೆ ಇಲ್ಲಿ ಚೆಕ್ ಮಾಡಬಹುದು.

ನೀವು ಎಲ್ಲೆಲ್ಲಿ ಸಾಲ ಪಡೆದಿದ್ದೀರಿ ಎಂಬುದನ್ನು ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿ

ಸಾರ್ವಜನಿಕರು ಎಲ್ಲೆಲ್ಲಿ ಸಾಲ ಪಡೆಯಲಾಗಿದೆ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಲು ಈ

https://homeloans.sbi/getcibil

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಉಚಿತವಾಗಿ ಸಿಬಿಲ್ ಸ್ಕೋರ್ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಸಾರ್ವಜನಿಕರು ತಮ್ಮ ಹೆಸರು ಬರೆಯಬೇಕು. ನಂತರ ಲಿಂಗ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಬೇಕು.

ನಿಮ್ಮ ವಿಳಾಸ ಭರ್ತಿ ಮಾಡಬೇಕು. ನಗರ,  ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ಪಿನ್ ಕೋಡ್ ಹಾಕಿದ ನಂತರ ನಿಮ್ಮ ಪ್ಯಾನ್ ಕಾರ್ಡ್ ನಂಬರ್ ಬರೆಯಬೇಕು. ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಇ ಮೇಲ್ ಐಡಿ ಹಾಕಬೇಕು. ನಂತರ ಟರ್ಮ್ಸ್ ಆ್ಯಂಡ್ ಕಡಿಂಶನ್  ಆಯ್ಕೆ ಮಾಡಿಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ :ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿ

ಆಗ ನಿಮ್ಮ ಮೊಬೈಲಿಗೆ ಪಿಡಿಎಫ್ ಫೈಲ್ ಓಪನ್ ಮಾಡುವ ಪಾಸ್ವರ್ಡ್ ಕಳಿಸಲಾಗುವುದು. ಆ ಪಾಸ್ವರ್ಡ್ ನಮೂದಿಸಿ ನೀವು ಪಿಡಿಎಫ್ ಫೈಲ್ ಓಪನ್ ಮಾಡಬೇಕು. ಇದನ್ನು ನಿಮ್ಮ ಮೊಬೈಲಿಗೆ ಕಳಿಸಲಾಗಿರುತ್ತದೆ.

ಸಿಬಿಲ್ ಸ್ಕೋರ್ ಪಿಡಿಎಫ್ ಪೈಲ್ ನಲ್ಲಿ ಯಾವ ಯಾವ ಮಾಹಿತಿ ಇರುತ್ತದೆ?

ನಿಮ್ಮ ಮೊಬೈಲಿಗೆ ಕಳಿಸಲಾಗಿರುವ ಸಿಬಿಲ್ ಸ್ಕೋರ್ ಪಿಡಿಎಫ್ ಫೈಲ್ ನಲ್ಲಿ  ಯಾವ ಯಾವ ಬ್ಯಾಂಕುಗಳಲ್ಲಿ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದಿದ್ದೀರಿ ಎಂಬ ಮಾಹಿತಿ ಇರುತ್ತದೆ. ಇದರೊಂದಿಗೆ ನಿಮ್ಮ ಸಿಬಿಲ್ ಸ್ಕೋರ್ ಎಷ್ಟಿದೆ ಎಂಬ ಮಾಹಿತಿ ಕಾಣಿಸುತ್ತದೆ. ಈ ಆಧಾರದ ಮೇಲೆ ನೀವು ಸಾಲ ಪಡೆಯಬಹುದು. ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ನೀವು ಯಾವುದೇ ಬ್ಯಾಂಕಿನಲ್ಲಿ ಸುಲಭವಾಗಿ ಸಾಲ ಪಡೆಯಬಹುದು.

ಏನಿದು ಸಿಬಿಲ್ ಸ್ಕೋರ್?

ವೈಯಕ್ತಿಕ ಸಾಲವಾಗಲಿ, ವಾಹನ ಸಾಲವಾಗಲಿ, ಹೋಂಲೋನ್ ಆಗಲಿ ಅಥವಾ ಇನ್ನಾವುದೇ ಸಾಲವಾಗಲಿ, ವಿವಿಧ ರೀತಿಯ ಸಾಲ ನೀಡಲು ಸಿಬಿಲ್ ಸ್ಕೋರ್ ಅತೀ ಮುಖ್ಯವಾಗಿದೆ. ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ ನಿಮಗೆ ಸಾಲ ಸಿಗುವುದು. ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಿದ್ದರೆ ನಿಮಗೆ ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕುತ್ತಾರೆ.

ಸಿಬಿಲ್ ಸ್ಕೋರ್ ಎಷ್ಟಿರಬೇಕು?

ಸಾಲ ಪಡೆಯಲು 750ಕ್ಕಿಂತ ಹೆಚ್ಚು ಸಿಬಿಲ್ ಸ್ಕೋರ್ ಇದ್ದರೆ ಉತ್ತಮ. 750 ಕ್ಕಿಂತ ಹೆಚ್ಚು ಸಿಬಿಲ್ ಸ್ಕೋರ್ ಇದ್ದರೆ ಬ್ಯಾಂಕುಗಳಾಗಿ ಅಥವಾ ಖಾಸಗಿ ಹಣಕಾಸು ಸಂಸ್ಥೆಗಳಾಗಲಿ ಸಾಲ ನೀಡಲು ಮುಂದೆ ಬರುತ್ತಾರೆ.  750 ರಿಂದ 900 ವರೆಗೆ ಸಿಬಿಲ್ ಸ್ಕೋರ್ ಇದ್ದವರಿಗೆ ಹೆಚ್ಚು ಸಾಲ ನೀಡಲಾಗುವುದು.

Leave a Reply

Your email address will not be published. Required fields are marked *