Election Voter list ನಲ್ಲಿ ನಿಮ್ಮ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿಕೊಳ್ಳಿ

Written by Ramlinganna

Updated on:

Election Voter list ಸಾರ್ವಜನಿಕರು ವೋಟರ್ ಲಿಸ್ಟ್ ನಲ್ಲಿ ತಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಯಾರ ಸಹಾಯವೂ ಇಲ್ಲದೆ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

ಹೌದು, ಸಾರ್ವಜನಿಕರು ಯಾರ ಸಹಾಯವೂ ಇಲ್ಲದೆ ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲಿ ಅತೀ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು. ಆದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಅತೀ ಸುಲಭ ವಿಧಾನ.

Election Voter list ನಲ್ಲಿ ಹೆಸರಿರುವುದನ್ನು ಚೆಕ್ ಮಾಡುವುದು ಹೇಗೆ?

ಸಾರ್ವಜನಿಕರು ವೋಟರ್ ಲಿಸ್ಟ್ ನಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಲು ಈ

https://electoralsearch.in/#!#resultArea

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಹೆಸರು ಬರೆಯಬೇಕು. ನಂತರ ನಿಮ್ಮ ತಂದೆ ಹೆಸರು ಬರೆಯಬೇಕು. ಮದುವೆಯಾಗಿದ್ದರೆ ಪತಿಯ ಹೆಸರು ಹಾಕಬೇಕು.ನಿಮ್ಮ ವಯಸ್ಸು ನಮೂದಿಸಬೇಕು. ಅಥವಾ ನಿಮ್ಮ ಜನ್ಮ ದಿನ ನೆನಪಿದ್ದರೆ ಜನ್ಮ ದಿನ, ತಿಂಗಳು ಹಾಗೂ ವರ್ಷ ಹಾಕಬೇಕು.  ಲಿಂಗ ಆಯ್ಕೆ ಮಾಡಿಕೊಳ್ಳಬೇಕು. ನಂತರ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಲ್ಲೆ ಆಯ್ಕೆ ಮಾಡಿಕೊಂಡು ಯಾವ ತಾಲೂಕಿನವರಾಗಿದ್ದೀರೋ ಆ ತಾಲೂಕೂ ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಯ್ಚಾ ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನೀವು ಮತದಾರರ ಪಟ್ಟಿಯಲ್ಲಿದ್ದೀರೋ ಇಲ್ಲವೋ ಎಂಬುದು ಕಾಣಿಸುತ್ತದೆ.

ಚುನಾವಣೆ  ಮುಂದಿನ ತಿಂಗಳು ಮೇ ತಿಂಗಳಲ್ಲಿ ನಡೆಯುಲಿದೆ. ಹಾಗಾಗಿ ನಿಮ್ಮ ಹೆಸರು ಈಗಲೇ ಪರಿಶೀಲಿಸಿಕೊಳ್ಳಬಹುದು. ಹೆಸರು ಜನ್ಮ ದಿನಾಂಕ ಹಾಗೂ ವಯಸ್ಸು ಎಲ್ಲವೂ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಸಹ ಪರಿಶೀಲಿಸಿಕೊಳ್ಳಬೇಕು. ಹೆಸರು ಅಥವಾ ವಯಸ್ಸು ತಪ್ಪಾಗಿದ್ದರೆ ಸರಿಪಡಿಸಲು ಅವಕಾಶವಿದೆ. ಹಾಗಾಗಿ ನಿಮ್ಮ ಹೆಸರು ಪರಿಶೀಲಿಸಿಕೊಂಡು ಸರಿಪಡಿಸಿಕೊಳ್ಳಬಹುದು.

ರಾಜ್ಯದಲ್ಲಿ ಈಗಾಗಲೇ ಚುನಾವಣಾ ಪ್ರಚಾರ ಚೋರು ನಡೆಯುತ್ತಿದೆ. ಚುನಾವಣೆಗೆ ಸಿದ್ದತೆ ನಡೆಸುತ್ತಿರುವ ಪಕ್ಷಗಳು ಈಗಗಲೇ ಅಭ್ಯರ್ಥಿಗಳನ್ನು ಸಹ ಘೋಷಣೆ ಮಾಡಿದೆ. ಕೆಲವು ಕಡೆ ಸಂತೃಪ್ತಿಯಾಗಿದ್ದರೆ ಇನ್ನೂ ಕೆಲವು ಕಡೆ ನಿರಾಶೆಯಾಗಿದ್ದರಿಂದ ಪಕ್ಷಾಂತರವಾಗುತ್ತಿದೆ. ಚುನಾವಣೆಯಿದ್ದುದ್ದರಿಂದ ಪಕ್ಷಾಂತರ ಸಹಜವಾಗಿರುತ್ತದೆ.

ಇದನ್ನೂ ಓದಿ ನಿಮ್ಮ ಯಾವ ಸರ್ವೆ ನಂಬರ್ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಪ್ರತಿಯೊಬ್ಬರೂ ಮತದಾನ ಮಾಡಬೇಕು. ನಿಮ್ಮ ಮತ ಯಾರಿಗೂ ಹಾಕಿ, ಆದರೆ ನಿಮ್ಮಅಮೂಲ್ಯ ಮತ ಹಾಕುವದನ್ನು ಮರೆಯಬಾರದು. ಪ್ರತಿ ಐದು ವರ್ಷಕ್ಕೊಮ್ಮೆ ನಿಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಅವಕಾಶ ದೊರೆಯುತ್ತದೆ.  ಹಾಗಾಗಿ ನಿಮ್ಮ ಅಮೂಲ್ಯ ಮತವನ್ನು ಹಾಕುವುದನ್ನು ಮರೆಯಬಾರದು.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಸಾರ್ವಜನಿಕರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡುವುದಸ್ಟೇ ಅಲ್ಲ 18 ವರ್ಷ ಪೂರ್ಣಗೊಳಿಸಿದವರು ಮೊಬೈಲ್ ನಲ್ಲೇ ತಮ್ಮ ಹೆಸರನ್ನು ಚುನಾವಣೆ ಪಟ್ಟಿಯಲ್ಲಿ ಸೇರಿಸಲಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಏಕೆಂದರೆ ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿರುತ್ತಾರೆ. ಅವರ ಹೆಸರು ಸೇರ್ಪಡೆಯಾಗಿದೆಯೋ ಇಲ್ಲವೋ ಗೊತ್ತಾಗುವುದಿಲ್ಲ. ಹಾಗಾಗಿ ಈಗಲೇ ಚೆಕ್ ಮಾಡಿಕೊಂಡರೆ ಚುನಾವಣೆ ದಿನ ಮತದಾನ ಮಾಡಲು ಸಮಸ್ಯೆಯಾಗುವುದಿಲ್ಲ. ಇಲ್ಲದಿದ್ದರೆ ಮತದಾನ ದಿನ ತಮ್ಮ ಹೆಸರಿಲ್ಲವೆಂದು ಮತದಾನ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ.

ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಪಡೆಯಲು ಟೋಲ್ ಫ್ರೀ ನಂಬರ್ ಆರಂಭಿಸಲಾಗಿದೆ. ಟೋಲ್ ಪ್ರೀ ಸಂಖ್ಯೆ 1950ಹಾಗೂ ಸಹಾಯವಾಣಿ ಸಂಖ್ಯೆ 080 27275946 ಬಳಿ ಮತ್ತು ಚುನಾವಣೆ ಕುರಿತಂತೆ ದೂರು ಸಲ್ಲಿಕೆಗಾಗಿ ಸಿವಜಿಲ್ ಮೊಬೈಲ್ ಆ್ಯಪ್ ಬಳಸಬಹುದು.

ಈಗಾಗಲೇ ಟೋಲ್ ಫ್ರೀ ನಂಬರ್ 1950 ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ವಿವಿಧ ಬಗೆಯ ಚುನಾವಣೆಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದು.

Leave a Comment