Check here khata number ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಜಮೀನಿನ ಖಾತಾ ನಂಬರ್ ಚೆಕ್ ಮಾಡಬಹುದು. ಹೌದು, ಇದರೊಂದಿಗೆ ರೈತರು ಸರ್ವೆ ನಂಬರ್ ಹಾಕಿ ಖಾತಾ ನಂಬರ್ ಪ್ರಕಾರ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಬಹುತೇಕ ರೈತರಿಗೆ ತಮ್ಮ ಜಮೀನಿನ ಸರ್ವೆ ನಂಬರ್ ಗೊತ್ತಿರುತ್ತದೆ. ಆದರೆ ಖಾತಾ ನಂಬರ್ ಗೊತ್ತಿರುವುದಿಲ್ಲ. ಇಲ್ಲಿ ಸರ್ವೆ ನಂಬರ್ ಹಾಕಿ ಖಾತಾ ನಂಬರ್ ತಿಳಿದುಕೊಳ್ಳುವುದರ ಜೊತೆಗೆ ಖಾತಾ ನಂಬರ್ ಪ್ರಕಾರ ತಮ್ಮ ಹೆಸರಿಗೆ ಎಷ್ಚು ಎಕರೆ ಜಮೀನಿದೆ ಎಂಬುದನ್ನು ಸಹ ರೈತರು ಮೊಬೈಲ್ ನಲ್ಲಿ ಪರಿಶೀಲಿಸಬಹುದು.
ಖಾತಾ ನಂಬರ್ ತಿಳಿದುಕೊಳ್ಳುವುದು ಹೇಗೆ? ಅದೇ ರೀತಿ ಖಾತಾ ನಂಬರ್ ಪ್ರಕಾರ ಜಮೀನು ಎಷ್ಚು ಎಕರೆಯಿದೆ ಎಂಬುದನ್ನು ಚೆಕ್ ಮಾಡುವುದು ಹೇಗಪ್ಪಾ ಅಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
Check here khata number ಖಾತಾ ನಂಬರ್ ಹಾಗೂ ಖಾತಾ ನಂಬರ್ ಪ್ರಕಾರ ಜಮೀನು ಎ ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಬಳಿಯಿರುವ ಫೋನ್ ನಲ್ಲೆ ಖಾತಾ ನಂಬರ್ ಹಾಗೂ ಖಾತಾ ನಂಬರ್ ಪ್ರಕಾರ ತಮ್ಮ ಹೆಸರಿಗೆ ಎ ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಲು ಈ
https://landrecords.karnataka.gov.in/service64/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಖಾತಾ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು Search by Survey Number ಆಯ್ಕೆ ಮಾಡಿಕೊಳ್ಳಬೇಕು. ನಂತರ ರೈತರು ತಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಂಡು ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು.
ಇದಾದ ಮೇಲೆ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. Go ಮೇಲೆ ಕ್ಲಿಕ್ ಮಾಡಬೇಕು. Surnoc ಕಾಲಂ ನಲ್ಲಿ ಸ್ಟಾರ್ (*) ಆಯ್ಕೆ ಮಾಡಿಕೊಳ್ಳಬೇಕು. Hissa No. ಕಾಲಂನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ Get Report ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ಸರ್ವೆ ನಂಬರ್, ಸ್ವಾದೀನದಾರರ ಮತ್ತು ತಂದೆಯ ಹೆಸರು, ವಿಸ್ತೀರ್ಣ ಹಾಗೂ ಖಾತೆ ನಂಬರ್ ಕಾಣುತ್ತದೆ. ರೈತರ ಹೆಸರು ಮುಂದುಗಡೆ ಕಾಣುವ ಖಾತೆ ನಂಬರ್ ರೈತರು ನಮೂದಿಸಿದ ಸರ್ವೆ ನಂಬರಿನ ಖಾತಾ ನಂಬರ್ ಆಗಿರುತ್ತದೆ.
ಇದನ್ನೂ ಓದಿ : ನಿಮ್ಮ ಜಮೀನಿಗೆ ಹೋಗಲು ದಾರಿಯಿದೆಯೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡಿ
ಖಾತಾ ನಂಬರ್ ಪ್ರಕಾರ ಎಷ್ಚು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಲು ಸರ್ವೆ ನಂಬರ್ ಹಿಂದಿರುವ Select ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಖಾತಾ ನಂಬರ್ ಕಾಣುತ್ತದೆ. ಅದರ ಕೆಳಗಡೆ ಕಾಣುವ Preview ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಖಾತಾ ಅಂದರೆ ಜಮೀನಿನ ಪಟ್ಟಾ ಪುಸ್ತಕದ ಪ್ರತಿ ಕಾಣುತ್ತದೆ. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ನಿಮ್ಮಸರ್ವೆ ನಂಬರ್ ಹಾಗೂ ನಿಮ್ಮ ಹೆಸರು ಮತ್ತು ತಂದೆಯ ಹೆಸರು ಕಾಣುತ್ತದೆ. ಅದರ ಮುಂದುಗಡೆ ಖಾತಾ ನಂಬರ್ ಪ್ರಕಾರ ನಿಮ್ಮ ಹೆಸರಿಗೆ ಎಷ್ಚು ಎಕರೆ ಜಮೀನಿದೆ ಎಂಬುದು ಕಾಣುತ್ತದೆ.
ಜಮೀನಿನ ಆಕಾರಬಂದ್ ಮೊಬೈಲ್ ನಲ್ಲೇ ನೋಡಿ
ರೈತರು ತಮ್ಮ ಜಮೀನಿನ ಆಕಾರಬಂದ್ ನ್ನು ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು ರೈತರು ಈ
https://bhoomojini.karnataka.gov.in/service39/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಒಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ, ತಾಲೂಕು , ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸರ್ವೆ ನಂಬರ್ ಹಾಕಿ ಸರ್ನೋಕ್ ನಲ್ಲಿ ಸ್ಟಾರ್, ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ನಮೂದಿಸಿ View Akarband ಮೇಲೆ ಕ್ಲಿಕ್ ಮಾಡಬೇಕು. ನಂತರ ಆಕಾರ್ ಬಂದ್ ಪ್ರತಿ ಓಪನ್ ಆಗುತ್ತದೆ. ಇದನನ್ನು ರೈತರು ಪ್ರಿಟಂ ಸಹ ತೆಗೆದುಕೊಳ್ಳಬಹುದು.