ನಿಮ್ಮ ಸರ್ವೆ ನಂಬರಿನಲ್ಲಿ ಯಾರಿಗೆ ಎಷ್ಟು ಎಕರೆ ಜಮೀನಿದೆ?

Written by Ramlinganna

Updated on:

which farmer’s name is there in your survey number ರೈತರು ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಸುತ್ತಮುತ್ತ  ಯಾವ ಯಾವ ರೈತರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರು ಸಾಗುವಳಿ ಮಾಡುತ್ತಿರುವ ಜಮೀನಿನ ಅಕ್ಕಪಕ್ಕದಲ್ಲಿ ಜಮೀನಿನ ಮಾಲಿಕರು ಯಾರೆಂಬುದು ಕೆಲವು ಸಲ ಗೊತ್ತಿರುವುದಿಲ್ಲ, ಗೊತ್ತಿದ್ದರೂ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆಎ? ಆ ಜಮೀನು ಜಂಟಿಯಾಗಿದೆಯೋ ಅಥವಾ ಅವರ ಹೆಸರಿಗಿದೆಯೋ ಎಂಬುದೆಲ್ಲಾ ಒಂದೇ ನಿಮಿ ಷದಲ್ಲಿ ರೈತರು ಮನೆಯಲ್ಲಿಯೇ ಕುಳಿತು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

which farmer’s name is there in your survey number ನಿಮ್ಮ ಜಮೀನಿನ ಅಕ್ಕಪಕ್ಕದಲ್ಲಿರುವ ಜಮೀನು ಚೆಕ್ ಮಾಡುವುದು ಹೇಗೆ?

ನಿಮ್ಮ ಜಮೀನು ಹಾಗೂ ನಿಮ್ಮ ನೆರೆಹೊರೆಯವರ ಜಮೀನು ಜಂಟಿಯಾಗಿದೆಯೋ ಅಥವಾ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಲು ಈ

https://mahitikanaja.karnataka.gov.in/Revenue/RevenueRTCInfo?ServiceId=1020&Type=TABLE&DepartmentId=2066

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅಲ್ಲಿ ತೆರೆದುಕೊಳ್ಳುವ ಕಂದಾಯ ಪೇಜ್ ನ ಆರ್.ಟಿ.ಸಿ ಮಾಹಿತಿ ವೀಕ್ಷಿಸಿ ಕೆಳಗಡೆ ನೀವು ಯಾವ ಜಿಲ್ಲೆಗೆ ಸಂಬಂಧಿಸಿದ್ದೀರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಂಡು ಯಾವ ಸರ್ವೆ ನಂಬರ್ ಅಕ್ಕಪಕ್ಕದಲ್ಲಿ ಜಮೀನು  ಯಾರ ಹೆಸರಿಗೆ ಎಷ್ಟು ಇದೆ ಎಂಬುದನ್ನು ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ಹಾಕಬೇಕಾಗುತ್ತದೆ. ನಂತರ ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು. ಆಗ ಮತ್ತೊಂದು ಪೇಜ್ ನಿಮಗೆ ಕಾಣಿಸುತ್ತದೆ. ಅಲ್ಲಿ ಹಿಸ್ಸಾ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಆರ್.ಟಿ.ಸಿ ಮಾಹಿತಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ನೀವು ಆಯ್ಕೆ ಮಾಡಿಕೊಂಡ ಸರ್ವೆ ನಂಬರ್ ಅಕ್ಕಪಕ್ಕದಲ್ಲಿ ಯಾವ ಯಾವ ರೈತರಿಗೆ ಎಷ್ಟೆಷ್ಟು ಎಕರೆ ಜಮೀನಿದೆ  ಎಂಬ ಮಾಹಿತಿ ಇರುತ್ತದೆ.

ನೀವು ನಮೂದಿಸಿದ ಸರ್ವೆ ನಂಬರಿನ ಆರ್.ಟಿ.ಸಿ ಮಾಹಿತಿ ಯಾವ ದಿನಾಂಕದವರೆಗೆ ಮಾನ್ಯವಾಗಿದೆಎಂಬುದೂು ಕಾಣಿಸುತ್ತದೆ. ಇಧರ ಕೆಳಕಡೆ ನಿಮ್ಮ ತಾಲೂಕು, ಹೋಬಳಿ, ಗ್ರಾಮದ ಹೆಸರಿರುತ್ತದೆ. ನಂತರ ಸರ್ವೆ ನಂಬರ್, ಜಮೀನು ಹೇಗಿದೆ? ಅಂದರೆ ಸಮತಟ್ಟಾಗಿದೆಯೋ ಬೆಟ್ಟಗುಡ್ಡಗಳಿಂದ ಕೂಡಿದೆಯೋ? ನೀವು ನಮೂದಿಸಿ ಸರ್ವೆ ನಂಬರ್ ಒಳಗಡೆ ಒಟ್ಟು ಎ ಷ್ಟು ಎಕರೆ ಜಮೀನಿದೆ ಹಾಗೂ ಜಮೀನಿನ ಪ್ರಕಾರ ಯಾವುದು ಎಂಬ ಮಾಹಿತಿ ಇರುತ್ತದೆ.

ಇದನ್ನೂ ಓದಿ : ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿ- ಏ. 11 ರವರೆಗೆ ಹೆಸರು ಸೇರಿಸಲು ಅವಕಾಶ

ಜಮೀನನ ಮಾಲಿಕರ ಹೆಸರು ಅಂದರೆ ನೀವು ನಮೂದಿಸಿದ ಸರ್ವೆ ನಂಬರೊಳಗೆ ಯಾವ ಯಾವ ರೈತರು ಬರುತ್ತದೆ? ಆ ಜಮೀನಿನ ಮಾಲಿಕರ ಹೆಸರು, ಅವರ ಜಮೀನು ಜಂಟಿಯಾಗಿದೋ ಅಥವಾ ಅವರ ಹೆಸರಿಗೆದೆಯೋ ಎಂಬುದನ್ನು ಬರೆಯಲಾಗಿರುತ್ತದೆ. ಅದರ ಪಕ್ಕದಲ್ಲಿ ದಾಖಲೆಗಳ ಪ್ರಕಾರ ಅವರ ಹೆಸರಿಗೆ ಎ ಷ್ಟು ಎಕರೆ ಜಮೀನಿದೆ ಹಾಗೂ ಖಾತಾ ನಂಬರ್ ಮಾಹಿತಿ ಇರುತ್ತದೆ.

ಒಂದು ವೇಳೆ ಜಮೀನು ಜಂಟಿಯಾಗಿದ್ದರೆ ಯಾವ ಯಾವ ರೈತರ ಹೆಸರು ಜಂಟಾಯಾಗಿದೆ. ಒಂದಲು ಮೂಲ ರೈತ ಹೆಸರು ಅವರ ಹೆಸರಿನೊಂದಿಗೆ ಯಾವ ಯಾವ ರೈತರು ಜಂಟಿಯಲ್ಲಿ ಬರುತ್ತಾರೆ.ಅವರೆಲ್ಲರಿಗೂ ಎ ಷ್ಟು ಎಕರೆ ಜಮೀನಿದೆ? ಎಂಬ ಮಾಹಿತಿ ಇರುತ್ತದೆ.

ನಿಮ್ಮ ಜಮೀನು ಜಂಟಿಯಾಗಿದ್ದರೆ ಪ್ರತ್ಯೇಕವಾಗಿ ನಿಮ್ಮ ಹೆಸರಿಗೆ ಪಹಣಿ ಮಾಡಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ಸರ್ಕಾರಿ ಸೌಲಭ್ಯ ಪಡೆಯಲು ಜಮೀನು ಪ್ರತ್ಯೇಕವಾಗಿದ್ದರೆ ಒಳ್ಳೆಯದು. ಜಮೀನು ಜಂಟಿಯಾಗಿದ್ದರೆ ಸರ್ಕಾರಿ ಸೌಲಭ್ಯ ಸಿಗುವದಷ್ಟೇ ಅಲ್ಲ ಮುಂದೆ. ತಾಂತ್ರಿಕ ಸಮಸ್ಯೆ ಎದುರಿಸಬೇಕಾಗುತ್ತದೆ.

Leave a Comment