ಪೌತಿ ಖಾತೆಯಡಿಯಲ್ಲಿ ಈಗ ರೈತರು ಜಮೀನು ವರ್ಗಾವಣೆ ಮಾಡುವುದು ತುಂಬಾ ಸರಳವಾಗಿದೆ. ಈ ವ್ಯವಸ್ಥೆಯಡಿಯಲ್ಲಿ ರೈತರು ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಿ ಜಮೀನು ವರ್ಗಾವಣೆ ಮಾಡಿಕೊಳ್ಳಬಹುದು.
ಹೌದು, ಕಂದಾಯ ಇಲಾಖೆಯು ಪೌತಿ ಖಾತೆ ಬದಲಾವಣೆಗೆ ಈಗ ಸರ್ಕಾರಿ ಕಚೇರಿಗೆ ಅಲೆದಾಡಬೇಕಿಲ್ಲ, ಅಧಿಕಾರಿಗಳ ಬಳಿ ಹೋಗಿ ಕೈಕಟ್ಟಿ ನಿಂತುಕೊಳ್ಳಬೇಕಿಲ್ಲ. ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು. ಪೌತಿ ಖಾತೆ ಎಂದರೇನು? ಪೌತಿ ಖಾತೆಯಡಿ ಜಮೀನು ವರ್ಗಾವಣೆಗೆ ಅರ್ಜಿ ಹೇಗೆ ಸಲ್ಲಿಸಬೇಕು.? ಪೌತಿ ಖಾತೆ ಬದಲಾವಣೆಗೆ ಯಾವ ಯಾವ ದಾಖಲೆ ಬೇಕು? ಇಲ್ಲಿದೆ ಮಾಹಿತಿ.
ಪೌತಿ ಖಾತೆ ಬದಲಾವಣೆಗೆ ಮೊದಲಿದ್ದ ನಿಯಮವನ್ನು ಈಗ ಸರಳಗೊಳಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಂದೋಲನ ನಡೆಸಿ ಖಾತೆ ಬದಲಾವಣೆಗೆ ರಾಜ್ಯ ಸರ್ಕಾರದ ನಿರ್ಧರಿಸಿದೆ. ಏಕೆಂದರೆ ಈಗ ಮರಣಹೊಂದಿದ ರೈತರ ವಿವರ ಪತ್ತೆ ಹಚ್ಚಿ ದಾಖಲಿಸಲು ಗ್ರಾಮ ಲೆಕ್ಕಿಗರಿಗೆ ಹೊಣೆ ನೀಡಲಾಗಿದೆ.
ಏನಿದು ಪೌತಿ ಖಾತೆ? (What is pouti khate)
ಜಮೀನು ಮಾಲಿಕರು ಮರಣಹೊಂದಿದಾಗ ಆ ವ್ಯಕ್ತಿಯ ಹೆಸರಿನಲ್ಲಿ ಆಸ್ತಿ, ಜಮೀನು ವಾರಸುದಾರರಿಗೆ ಅಂದರೆ ಆ ವ್ಯಕ್ತಿಯ ಪತ್ನಿ, ಅಥವಾ ಮಕ್ಕಳ ಹೆಸರಿಗೆ ಜಮೀನು ವರ್ಗಾವಣೆ ಮಾಡುವ ವ್ಯವಸ್ಥಯನ್ನು ಪೌತಿ ಖಾತೆ ಎನ್ನುವರು.
ರೈತರೇಕೆ ಜಮೀನನ್ನು ಪೌತಿ ಖಾತೆ ಬದಲಾವಣೆ ಮಾಡಬೇಕು? (why should farmer change land under pouti khate)
ರೈತರು ಮರಣ ಹೊಂದಿದಾಗ ಜಮೀನು ಅವರ ಹೆಸರಿನಲ್ಲಿದ್ದರೆ ಆ ಜಮೀನಿನ ಸಾಗುವಳಿ ತನ್ನ ಪತ್ನಿ, ಅಥವಾ ಮಕ್ಕಳು ಮಾಡುತ್ತಿರುತ್ತಾರೆ. ಆದರೆ ಆ ಜಮೀನಿನ ಮೇಲೆ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದಕ್ಕಾಗುವುದಿಲ್ಲ. ಜಮೀನು ಸ್ವಾಧೀನ ಹೊಂದಿದ್ದರೂ ಉಪಯೋಗವಿಲ್ಲದಂತಾಗುತ್ತದೆ. ಜಮೀನಿನ ಮೇಲೆ ಬ್ಯಾಂಕುಗಳಿಂದ ಸಾಲ ಪಡೆಯುವುದಕ್ಕಾಗುವುದಿಲ್ಲ.
ಇದನ್ನೂ ಓದಿ : Podi ಎಂದರೇನು? ರೈತರೇಕೆ ಜಮೀನಿನ ಪೋಡಿ ಮಾಡಿಸಬೇಕು? ಪೋಡಿ ಮಾಡುವುದರಿಂದ ಪ್ರಯೋಜನೆಗಳ ಮಾಹಿತಿ ಇಲ್ಲಿದೆ
ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾಳಾದರೆ ಬೆಳೆ ಹಾನಿ ಹಾಗೂ ಬೆಳೆ ವಿಮೆ ಪಡೆಯುವುದಕ್ಕಾಗುವದಿಲ್ಲ. ಇದಲ್ಲದೆ ಪಿಎಂ ಕಿಸಾನ್ ಯೋಜನೆಯಡಿ ಸೌಲಭ್ಯ ಪಡೆಯುವುದಕ್ಕಾಗುದಿಲ್ಲ. ಜಮೀನಿನ ಮೇಲೆ ಯಾವುದು ಸಬ್ಸಿಡಿ ಪಡೆಯಲು ಅರ್ಹರಾಗಿರುವುದಲ್ಲ. ಹಾಗಾಗಿ ರೈತರು ಪೌತಿ ಖಾತೆ ಬದಲಾವಣೆ ಮಾಡಲೇಬೇಕು.ಆಗ ರೈತರಿಗೆ ಸರ್ಕಾರದ ಸಬ್ಸಿಡಿ ಸೌಲಭ್ಯಗಳು ಸಿಗುತ್ತವೆ.
ಜಮೀನು ಹೇಗೆ ಬದಲಾವಣೆ ಮಾಡಲಾಗುವುದು? (how to change land records)
ಜಮೀನಿನ ಮಾಲಿಕರು ಮೃತಪಟ್ಟಲ್ಲಿ ರೈತರ ವಾರಸುದಾರರು ಮರಣ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ವಂಶವೃಕ್ಷ ಅಥವಾ ವಂಶಾವಳಿಗಾಗಿ ಅರ್ಜಿ ಸಲ್ಲಿಸಿ ಪೌತಿ ಖಾತೆಗಾಗಿ ಭೂಮಿ ತಂತ್ರಾಂಶದಲ್ಲಿ ನಮೂನೆ 1 ರಲ್ಲಿ ದಾಖಲಿಸಬೇಕು.
ಇದನ್ನೂ ಓದಿ : ಒಂದೇ ನಿಮಿಷದಲ್ಲಿ ನಿಮ್ಮ ಜಮೀನಿನ ಮ್ಯಾಪ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ: ಇಲ್ಲಿದೆ ಮಾಹಿತಿ
ಒಂದು ವೇಳೆ ವಂಶಾವಳಿ ಲಭ್ಯವಾಗದಿದ್ದಲ್ಲಿ ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿ ಮಾಡಿಸಿ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ದಾಖಲಿಸಬೇಕು. ರೈತರು ಮರಣ ಪ್ರಮಾಣ ಪತ್ರ ಪಡೆಯದಿದ್ದಲ್ಲಿ ಒಂದು ವರ್ಷಕ್ಕೂ ಹೆಚ್ಚಾದರೆ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಮರಣದ ಕುರಿತು ಆದೇಶ ಪಡೆದು ತಹಶೀಲ್ದಾರ ಕಚೇರಿಯಲ್ಲಿ ಮರಣ ಪತ್ರವನ್ನು ಪಡೆಯಬಹುದು. ಮರಣ ಪ್ರಮಾಣ ಪತ್ರ ಪಡೆದ ನಂತರ ಸಂಬಂಧಪಟ್ಟ ವಾರಸುದಾರರಿಂದ ಅಫಿಡಿವೇಟ್ ಪಡೆದು ಪೌತಿ ಖಾತೆಗೆ ಗ್ರಾಮ ಲೆಕ್ಕಿಗರಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಎಲ್ಲಿ ಸಿಗುತ್ತದೆ? (where should apply for poti khate)
ಪೌತಿ ಖಾತೆ ಮಾಡಿಕೊಳ್ಳಲು ನಮೂನೆ 1 ಅರ್ಜಿ ಎಲ್ಲಾ ನಾಡಕಚೇರಿಗಳಲ್ಲಿ ಲಭ್ಯವಿರುತ್ತದೆ. ನಾಡಕಚೇರಿಗಳಲ್ಲಿ ಸಿಗುವ ಅರ್ಜಿ ಪಡೆದು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪೌತಿ ಖಾತೆಯಡಿ ಜಮೀನು ವರ್ಗಾವಣೆ ಮಾಡಿಕೊಂಡು ರೈತರು ಜಮೀನು ತಮ್ಮ ಹೆಸರಿಗೆ ಮಾಡಿಕೊಳ್ಳಬಹುದು.