ರೈತರೇಕೆ ಜಮೀನಿನ ಪೋಡಿ ಮಾಡಿಸಬೇಕು? ಮಾಹಿತಿ ಇಲ್ಲಿದೆ

Written by Ramlinganna

Updated on:

What is podi? ಪ್ರತಿಯೊಬ್ಬ ರೈತರಿಗೆ ಜಮೀನಿನ ಪೋಡಿ ಬಗ್ಗೆ ಗೊತ್ತೇ ಇರುತ್ತದೆ. ಆದರೆ ಜಮೀನಿನ ಪೋಡಿ ಮಾಡುವುದರಿಂದ ಆಗುವ ಪ್ರಯೋಜನ ಹಾಗೂ ಪೋಡಿ ಮಾಡಿಸದೆ ಇರುವುದರಿಂದ ಆಗುವ ಹಾನಿಯ ಬಗ್ಗೆ ಗೊತ್ತಿರುವುದಿಲ್ಲ. ರೈತರೇಕೆ ಪೋಡಿ ಮಾಡಬೇಕು?  ಹಾಗೂ ಪ್ರಯೋಜನದ ಸಂಪೂರ್ಣ ಮಾಹಿತಿ ಇಲ್ಲಿದೆ.

ಪೋಡಿ ಎಂದರೇನು?

ಪೋಡಿ (Podi) ಎಂದರೆ ಜಮೀನಿನ ದುರಸ್ತಿ ಅಥವಾ ಭಾಗ ಮಾಡುವುದು ಎಂದರ್ಥ.  ರೈತರ ಜಮೀನಿನ ಅಂದರೆ ಒಂದೇ ಸರ್ವೆ ನಂಬರಿನಲ್ಲಿ ಒಬ್ಬರಿಗಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪೋಡಿ ಮೂಲಕ ವಿಭಾಗ ಮಾಡಲಾಗುವುದು. ಅಂದರೆ ಬಹುಮಾಲಿಕತ್ವದಿಂದ ಏಕ ಮಾಲಿಕತ್ವ ಮಾಡುವುದು.

ಉದಾಹರಣೆ ಒಂದು ಸರ್ವೆ ನಂಬರಿನಲ್ಲಿ ಸಹೋದರರ ಅಥವಾ ಅಕಪಕ್ಕದ ರೈತರ ಹೆಸರು ಇರುತ್ತದೆ. ರೈತರು ಇದನ್ನು ಗಮನಿಸದೆ ಹಲವಾರು ವರ್ಷಗಳಿಂದ ಜಮೀನು ಸಾಗುವಳಿ ಮಾಡುತ್ತಾ ಬಂದಿರುತ್ತಾರೆ. ಸಾಗುವಳಿ ಮಾಡಲು ಸಮಸ್ಯೆಯಾಗುವುದಿಲ್ಲ. ಆದರೆ ಜಮೀನು ಮಾರಾಟ ಮಾಡುವಾಗ ಹಾಗೂ ಜಮೀನು ವರ್ಗಾವಣೆ ಮಾಡುವಾಗು ಇದು ಸಮಸ್ಯೆಯಾಗುತ್ತದೆ. ಇದರಿಂದಾಗಿ ಬಹುತೇಕ ರೈತರು ಪಹಣಿಯಿಂದ ಅಕ್ಕಪಕ್ಕದವರ ಹೆಸರು ತೆಗೆಯುವುದಕ್ಕೆ ಹಣ ಕೊಡುವ ಪ್ರಸಂಗಗಳು ನಡೆದಿವೆ. ಇದಕ್ಕೆ ನೆರೆಹೊರೆಯ ಜಮೀನಿನವರು ಹೆಚ್ಚಿನ ಹಣ ಬೇಡಿಕೆ ಇಡುತ್ತಾರೆ. ಹಾಗಾಗಿ ಜಮೀನಿಗೆ ಪೋಡಿ ಮಾಡಿಸುವುದು ಉತ್ತಮ ಮಾರ್ಗವಾಗಿದೆ.

ಇದನ್ನೂಓದಿ ಒಂದೇ ನಿಮಿಷದಲ್ಲಿ ನಿಮ್ಮ ಜಮೀನಿನ ಮ್ಯಾಪ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ: ಇಲ್ಲಿದೆ ಮಾಹಿತಿ

ಒಂದು ಸರ್ವೆ ನಂಬರಿನಲ್ಲಿ ಒಬ್ಬರಿಗಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ತೆಗೆದುಹಾಕಿ ಪ್ರತ್ಯೇಕವಾಗಿ ಪೋಡಿ ಮಾಡಿಕೊಳಳ್ಳಬೇಕು. ಇಲ್ಲದಿದ್ದರೆ ರೈತರು ಸರ್ಕಾರದ ಸೌಲಭ್ಯ ಪಡೆಯುವಲ್ಲಿಯೂ ವಂಚಿತರಾಗುತ್ತಾರೆ.

ಪೋಡಿ ಮಾಡುವುದರಿಂದ ರೈತರಿಗೆ ಯಾವ ಯಾವ  ಪ್ರಯೋಜನವಿದೆ? (farmer what benefit get from land podi)

ರೈತರು ಪೋಡಿ ಮಾಡಿಸದೆ ಹೋದರೆ ಅವರು ಬೆಳೆ ಸಾಲ ಸಿಗುವುದಿಲ್ಲ. ಬೆಳೆ ಸಾಲ, ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ಪ್ರತ್ಯೇಕ ಪೋಡಿ ಜಮೀನಿರಬೇಕು. ಬಹುಮಾಲಿಕತ್ವದ ಪಹಣಿ ಮೇಲೆ ರೈತರಿಗೆ ಸರ್ಕಾರದ ಸೌಲಭ್ಯ ಸಿಗುವುದಿಲ್ಲ.  ಬೆಳೆ ವಿಮೆ ಮಾಡಿಸಲು ಅನುಕೂಲವಾಗುತ್ತದೆ. ಬೆಳೆ ಹಾನಿ ಪರಿಹಾರ, ಪಿಎಂ ಕಿಸಾನ್ ಯೋಜನೆಯ ಸೌಲಭ್ಯ ಪಡೆಯಲು ರೈತರ ಹೆಸರಿಗೆ ಪ್ರತ್ಯೇಕ ಪಹಣಿ ಇರಬೇಕು.

ಪೋಡಿ ಮಾಡಿಸಲು ರೈತರಿಗೆ ಬೇಕಾಗುವ ದಾಖಲೆಗಳು ಯಾವುವು? (farmer need these document for land podi)

ಜಮೀನಿನ ಪೋಡಿ ಮಾಡಿಸಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಜಮೀನಿನ ಪಹಣಿ ಇರಬೇಕು. ಪೋಡಿ ಮಾಡಿಸಲು ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು. ಪಹಣಿಯಲ್ಲಿ ಯಾವ ಯಾವ ರೈತರ ಹೆಸರಿರುತ್ತದೆಯೋ ಅವರಿಗೆ ಪೋಡಿ ಮಾಡಿಸಲು ತಕರಾರು ಇಲ್ಲವೆಂಬುದನ್ನುಬರೆಸಿಟ್ಟುಕೊಳ್ಳಬೇಕು. ಅರ್ಜಿಯೊಂದಿಗೆ ಮೇಲೆ ತಿಳಿಸಲಾದ ದಾಖಲೆಗಳನ್ನು ನಾಡಕಚೇರಿ ಅಥವಾ ತಹಶೀಲ್ದಾರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಪೋಡಿಯಲ್ಲಿ ಎಷ್ಟು ಪ್ರಕಾರಗಳಿವೆ? (how many types of land podi)

ಪೋಡಿಯಲ್ಲಿ ನಾಲ್ಕು ಪ್ರಕಾರಗಳಿವೆ. ತತ್ಕಾಲ್ ಪೋಡಿ, (Tatkal podi) ದರ್ಖಾಸ್ ಪೋಡಿ (Darkas podi), ಆಲಿನೇಶನ್ ಪೋಡಿ (Alintion podi) ಹಾಗೂ ಮುಟೇಶನ್ ಪೋಡಿ.

ರೈತರು ತತ್ಕಾಲ್ ಪೋಡಿ ಮೂಲಕ ಅರ್ಜಿ ಸಲ್ಲಿಸಿ ಜಮೀನು ತಮ್ಮ ಹೆಸರಿಗೆ ಏಕಮಾಲಿಕತ್ವ ಮಾಡಿಸಿಕೊಳ್ಳಬಹುದು. ಅಂದರೆ ಬಹು ಮಾಲಿಕತ್ವದಿಂದ ಏಕಮಾಲಿಕತ್ವ ಮಾಡಲು ತತ್ಕಾಲ್ ಪೋಡಿ ಮೂಲಕ ಅರ್ಜಿ ಸಲ್ಲಿಸಬೇಕು.

Leave a Comment