ಮಳೆ ಯಾವಾಗ ಬರುತ್ತದೆ? ಈ ನಂಬರಿಗೆ ಕರೆ ಮಾಡಿ

Written by Ramlinganna

Updated on:

Call this number and get rain information ನಿಮ್ಮೂರಿನಲ್ಲಿ ಮಳೆ ಯಾವಾಗ ಬರುತ್ತದೆ ಎಂಬ ಮಾಹಿತಿ ಬೇಕೆ? ಈ ನಂಬರಿಗೆ ಕರೆ ಮಾಡಿದರೆ ಸಾಕು ಕ್ಷಣಾರ್ಧದಲ್ಲಿ ಮಳೆ ಮುನ್ಸೂಚನೆಯ ಮಾಹಿತಿ ನೀಡಲಾಗುತ್ತದೆ.

ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ವಾಡಿಕೆಯಂತೆ ಮಳೆಯಾದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿದೆ. ಕೆಲವು ಕಡೆ ಬಿತ್ತನೆಯಾದರೆ ಇನ್ನೂ ಕೆಲವು ಕಡೆ ಬಿತ್ತನೆಯಾಗಿಲ್ಲ. ಮಳೆಯ ಮಾಹಿತಿಯ ಕೊರತೆಯಿಂದಾಗಿ ಕೆಲವು ರೈತರ ಕೃಷಿ ಚಟುವಟಿಕೆ ಮೇಲೆ ಸಮಸ್ಯೆಯಾಗುತ್ತಿದೆ. ರೈತರಿಗೆ ಮಳೆ ಮಾಹಿತಿಯ ಕೊರತೆಯಿಂದಾಗಿ ಕೃಷಿ ಚಟುವಟಿಕೆಯಲ್ಲಿ ತೊಂದರೆಯಾಗಬಾರದೆಂಬ ಉದ್ದೇಶದಿಂದಾಗಿ ವರುಣಮಿತ್ರ ಎಂಬ ಸಹಾಯವಾಣಿಯನ್ನು ಆರಂಭಿಸಲಾಗಿದೆ.

ಹೌದು, ರೈತರು ಈಗ ಮನೆಯಲ್ಲಿಯೇ ಕುಳಿತು ಮಳೆಯ ಮಾಹಿತಿ ಪಡೆಯಬಹುದು. ಸರ್ಕಾರ ಆರಂಭಿಸಿದ ಸಹಾಯವಾಣಿಗೆ ಒಂದು ಕರೆ ಮಾಡಿದರೆ ಸಾಕು ನಿಮ್ಮೂರಿನಲ್ಲಿ ಯಾವಾಗ ಮಳೆಯಾಗುತ್ತದೆ ಎಂಬ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ಇದಕ್ಕಾಗಿ ರೈತರು  ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ.  ಹಾಗಾದರೆ ಯಾವುದಪ್ಪಾ ಅದು ಸಹಾಯವಾಣಿ ಎಂದುಕೊಂಡಿದ್ದೀರಾ… ಇಲ್ಲಿದೆ ಮಾಹಿತಿ.

Call this number and get rain information ವರುಣಮಿತ್ರ ಸಹಾಯವಾಣಿ

ರೈತರು ಮಳೆಯ ಮಾಹಿತಿ ಪಡೆಯಲು 92433 45433 ನಂಬರಿಗೆ ಕರೆ ಮಾಡಬೇಕು. ಆಗ ಸಹಾಯವಾಣಿಯಲ್ಲಿರುವ ಸಿಬ್ಬಂದಿಗಳು ಕರೆ ಸ್ವೀಕರಿಸುತ್ತಾರೆ. ಆಗ ರೈತರು ತಮ್ಮೂರಿನಲ್ಲಿ ಯಾವಾಗ ಮಳೆಯಾಗುತ್ತದೆ ಎಂದು ಕೇಳಬಹುದು. ಆಗ ಅವರು ನಿಮ್ಮೂರಿನಲ್ಲಿ ಮಳೆಯಾಗುತ್ತೋ ಇಲ್ಲವೋ ಅಥವಾ ಮುಂದೆ ಯಾವಾಗ ಮಳೆಯಾಗಬಹುದು ಎಂಬುದರ ಕುರಿತು ಮಾಹಿತಿಯನ್ನು ನೀಡುತ್ತಾರೆ. ಈ ಉಚಿತ ಸಹಾಯವಾಣಿಯೂ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ.

ರೈತರು ಕರೆ ಮಾಡಿದ ಊರಿನ ಹವಾಮಾನ, ಗಾಳಿಯ ವೇಗ, ಯಾವ ದಿಕ್ಕಿಗೆ ಗಾಳಿ ಬೀಸುತ್ತದೆ ಎಂಬ ಮಾಹಿತಿಯನ್ನು ಸಹ ನೀಡುತ್ತಾರೆ.  ಮಳೆಯ ಪ್ರಮಾಣ ಹೇಗಿರುತ್ತದೆ. ಅಂದರೆ ಭರ್ಜರಿ ಮಳೆಯೋ ಅಥವಾ ಸಾಧಾರಣ ಮಳೆಯಾಗುತ್ತೋ ಹಾಗೂ ಮುಂದಿನ ದಿನಗಳಲ್ಲಿ ವಾತಾವರಣ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಇದರಿಂದಾಗಿ ರೈತರಿಗೆ ಕೃಷಿ ಚಟುವಟಿಕೆಗೆ ತುಂಬಾ ಅನುಕೂಲವಾಗುತ್ತದೆ.

ರೈತರಿಗೆ ಹೇಗೆ ಮಾಹಿತಿ ನೀಡಲಾಗುವುದು?

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಸೆಲ್ ನ ಹವಾಮಾನ ಮೇಲ್ವಿಚಾರಣಾ ಕೇಂದ್ರಗಳು ಹೋಬಳಿ ಮಟ್ಟದಲ್ಲಿ ದತ್ತಾಂಶಗಳನ್ನುಸಂಗ್ರಹಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿವಾರು ಮಳೆ ಪ್ರಮಾಣದ ಕರಾರುವಾಕ್ ಮಾಹಿತಿ ನೀಡುವ ತಂತ್ರಜ್ಞಾನ ಇರುವುದರಿಂದ ರೈತರಿಗೆ ಮಾಹಿತಿ ನೀಡಲಾಗುವುದು.

ಇದನ್ನೂ ಓದಿಮೊಬೈಲ್ ನಲ್ಲೇ ನಿಮ್ಮ ಜಮೀನಿನ ಅಳತೆ ಮಾಡಬೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಹವಾಮಾನ ಹಾಗೂ ಗಾಳಿಯ ವೇಗದ ಬಗ್ಗೆ ಮಾಹಿತಿ ನೀಡಲಾಗುವುದು. ರೈತರು  ಈ ಉಚಿತ ಸಹಾಯವಾಣಿಯಿಂದ ಬಿತ್ತನೆ, ಕೃಷಿ ಚಟುವಟಿಕೆ ಕುರಿತು ಸಹ ಸಲಹೆ ಕೇಳಬಹುದು.

ಐದು ದಿನಗಳ ಮುಂಚೆಯೇ ಮಳೆಯ ಮಾಹಿತಿ ಪಡೆಯಲು ಮೇಘದೂತ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

ರೈತರಿಗೆ ಐದು ದಿನ ಮುಂಚೆಯೇ ಮಳೆಯ ಮಾಹಿತಿ ನೀಡಲು ಮೇಘದೂತ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ರೈತರು ಈ ಆ್ಯಪ್ ನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಐದು ದಿನ ಮುಂಚಿತವಾಗಿ ಮಾಹಿತಿ ಪಡೆಯಬಹುದು.

ಮೇಘದೂತ್ ಆ್ಯಪನ್ನು ಭಾರತೀಯ ಹವಾಮಾನ ಇಲಾಖೆ ಹಾಗೂ ಭಾರತೀಯ ಸಂಶೋಧನಾ ಮಂಡಳಿ ಜಂಟಿಯಾಗಿ ಮೇಘದೂತ್ ಆ್ಯಪ್ ನ್ನು ಅಭಿವೃದ್ಧಿಪಡಿಸಿದೆ. ಈ ಮೇಘದೂತ್ ಆ್ಯಪ್ ಕನ್ನಡ, ತೆಲಗು, ತಮಿಳು, ಮರಾಠಿ, ಹಿಂದಿ, ಬಂಜಾಬಿ, ಬಂಗಾಳಿ ಭಾಷೆಯಲ್ಲಿಯೂ ಲಭ್ಯವಿದೆ.  ಯಾವ ಭಾಷೆಯಲ್ಲಿ ಮಾಹಿತಿ ಪಡೆದುಕೊಳ್ಳಬೇಕೆಂದುಕೊಂಡಿದ್ದೀರೋ ಆ ಭಾಷೆ ಆಯ್ಕೆ ಮಾಡಿಕೊಂಡು ಇನ್ ಸ್ಟಾಲ್ ಮಾಡಿಕೊಳ್ಳಬಹುದು. ಮೇಘದೂತ್ ಆ್ಯಪ್ ಮುಂದಿನ ಐದು ದಿನ ಹಾಗೂ ಹಿಂದಿನ ಐದು ದಿನದ ಹವಾಮಾನ ಮಾಹಿತಿ ನೀಡುತ್ತದೆ.ರೈತರು ಮೇಘೂದತ್ ಆ್ಯಪ್ ನ್ನು  ಮೊಬೈಲ್ ನಲ್ಲಿರುವ ಪ್ಲೇ ಸ್ಟೋರ್ ನಲ್ಲಿ meghdoot ಎಂದು ಟೈಪ್ ಮಾಡಿ ಇನಸ್ಟಾಲ್ ಮಾಡಿಕೊಳ್ಳಬಹುದು.

Leave a Comment