ಹಸು, ಎಮ್ಮೆಗಳಿಗೆ ಉಚಿತ ಕೃತಕ ಗರ್ಭಧಾರಣೆ ಮಾಡಿಸುವುದು ಹೇಗೆ?

Written by By: janajagran

Updated on:

cattle and buffalo breeding ನಿಮ್ಮ ಹಸು, ಎಮ್ಮೆಯ ಹಾಲಿನ ಇಳುವರಿ ಕಡಿಮೆಯಾಗಿದೆಯೇ… ಉಚಿತವಾಗಿ ಕೃತಕ ಗರ್ಭಧಾರಣೆ ಮಾಡಿಸಿ ಕೃತಕ ಗರ್ಭಧಾರಣೆಯಿಂದ ಕಡಿಮೆ ಹಾಲಿನ ಇಳುವರಿ ನೀಡುವ ಸ್ಥಳೀಯ ಹಸು ಅಥವಾ ಎಮ್ಮೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡುವ ತಳಿಯ ಹೋರಿ ಅಥವಾ ಕೋಣದ ವೀರ್ಯಾಣುಗಳನ್ನು ನೀಡಿ ಮಿಶ್ರತಳಿ ಪಡೆಯುವ ಯೋಜನೆಯಾಗಿದೆ.

ಇದು ಹೈನುಗಾರಿಕೆಗೆ ವರದಾನವಾಗಿದೆ. ಇಲ್ಲಿಯವರೆಗೆ ಹೈನುಗಾರಿಕೆ ಮಾಡುವ ರೈತರು ತಮ್ಮ ಸ್ಥಳೀಯ ಹಸು ಅಥವಾ ಎಮ್ಮೆಗಳಿಗೆ ಕೃತಕ ಗರ್ಭಧಾರಣೆ ಮಾಡಿಸದಿದ್ದರೆ ಒಂದು ಕರೆ ಮಾಡಿದರೆ ಸಾಕು ಪಶು ಇಲಾಖೆಯ ಸಿಬ್ಬಂದಿಗಳು ಮನೆಬಾಗಿಲಿಗೆ ಬಂದು ನಿಮ್ಮ ಹಸು ಅಥವಾ ಎಮ್ಮೆಗೆ ಕೃತಕ ಗರ್ಭಧಾರಣೆಗೆ ವೀರ್ಯ ನಳಿಕೆ ನೀಡುವರು.

cattle and buffalo breeding ಏನಿದು ಕೃತಕ ಗರ್ಭಧಾರಣೆ( artificial insemination):

ಹಸು ಅಥವಾ ಎಮ್ಮೆಯ ಗರ್ಭಕೋಶದೊಳಗೆ ಸೂಕ್ತ ಉಪಕರಣಗಳ ಸಹಾಯದಿಂದ ವೀರ್ಯಾಣುಗಳನ್ನು ವರ್ಗಾಯಿಸುವ ಪ್ರಕ್ರಿಯೆಯೇ ಕೃತಕ ಗರ್ಭಧಾರಣೆ ಎನ್ನುತ್ತಾರೆ.

ವರ್ಷಕ್ಕೆ 7ಸಾವಿರ ಲೀಟರ್ ಹಾಲು ಕೊಡುವಂತಹ ಸಾಮರ್ಥ್ಯವುಳ್ಳ ಉತ್ಕೃಷ್ಟ ಎಚ್‌ಎಫ್‌ ತಳಿಯಿಂದ ಜನಿಸಿದ ಹೋರಿಯಿಂದ ಸಂಗ್ರಹಿಸಿದ ವೀರ್ಯವನ್ನು ಆಕಳುಗಳಿಗೆ ಮತ್ತು ವರ್ಷಕ್ಕೆ 3 ಸಾವಿರ ಲೀಟರ್‌ ಹಾಲು ನೀಡುವಂತಹ ‘ಮುರ್ರಾ’ ಎಮ್ಮೆಯ ತಳಿಯಿಂದ ಜನಿಸಿದ ಕೋಣಗಳ ವೀರ್ಯವನ್ನು ಎಮ್ಮೆಗಳಿಗೆ ಉಚಿತವಾಗಿ ಕೊಡಲಾಗುವುದು.ಹಾಲಿನ ಉತ್ಪಾದನೆ ಹೆಚ್ಚಿಸುವ ಮೂಲಕ ಹೈನುಗಾರರ ಆರ್ಥಿಕ ಮಟ್ಟ ಹೆಚ್ಚಿಸುವ ಆಶಯ ಹೊಂದಲಾಗಿದೆ.

2018-19ರಲ್ಲಿ ರಾಯಚೂರು ಮತ್ತು ಯಾದ ಗಿರಿ ಜಿಲ್ಲೆಗಳಲ್ಲಿ ಕೆಲ ಗ್ರಾಮಗಳನ್ನು ಆಯ್ಕೆಮಾಡ ಲಾಗಿತ್ತು. ಅಲ್ಲಿ ತಳಿ ಸಂವರ್ಧನೆ ಆದ ಬಳಿಕ ಈ ಯೋಜನೆಯನ್ನು ರಾಜ್ಯದ 17 ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಪ್ರತಿ ಜಿಲ್ಲೆಯಲ್ಲಿ 100 ಗ್ರಾಮಗಳನ್ನು ಗುರುತಿಸಲಾಗಿದೆ. ಅನಿರ್ದಿಷ್ಟ ತಳಿ (ಎನ್‌ಡಿ) ಹಾಗೂ ಮಿಶ್ರ ತಳಿಯ ಜಾನುವಾರುಗಳನ್ನು ಪ್ರತಿಯೊಂದು ಗ್ರಾಮದಲ್ಲಿ ಕಡಿಮೆ ಹಾಲು ನೀಡುವ ರಾಸುಗಳಿಗೆ ಥಾರ್‌ಪಾರ್ಕರ್‌, ಶಾಹಿವಾಲ್‌, ಗಿರ್‌ ಮತ್ತು ಮಿಶ್ರತಳಿಯ ಜಾನುವಾರುಗಳ ವೀರ್ಯನಳಿಕೆ ಕೊಡುವ ಮೂಲಕ ಕೃತಕ ಗರ್ಭಧಾರಣೆ ಮಾಡಲಾಗುವುದು.ಅಂತಹ ಹಸುಗಳು ಜನ್ಮ ನೀಡುವ ಕರುಗಳು ಅಧಿಕ ಹಾಲು ನೀಡುವ ಮೂಲಕ ಕೃಷಿಕರ ಬದುಕು ಹಸನಾಗಲಿದೆ.

ಕೃತಕ ಗರ್ಭಧಾರಣೆಯಿಂದಾಗುವ ಉಪಯೋಗ

ಕೃತಕ ಗರ್ಭಧಾರಣೆಯಿಂದ ಉತ್ತಮ ಮತ್ತು ಉತ್ಕೃಷ್ಟ ಹೋರಿ ತಳಿಗಳ ವೀರ್ಯ ಸಂಕಲನದಿಂದ ದೇಸೀ ತಳಿಗಳಲ್ಲಿ ಅಧಿಕ ಪ್ರಮಾಣದ ಹಾಲಿನ ಇಳುವರಿ ಮತ್ತು ಹಾಲಿನಲ್ಲಿ ಕೊಬ್ಬಿನ ಅಂಶ ವೃದ್ಧಿ ಸಾಧ್ಯವಾಗುತ್ತದೆ. ಗುಣಮಟ್ಟದ ಹೊರಿಯ ಗುಣಲಕ್ಷಣಗಳನ್ನು ಹೆಚ್ಚಿನ ಜಾನುವಾರುಗಳಿಗೆ ಹಂಚಬಹುದು. ಇದರಿಂದಾಗಿ ಹೆಚ್ಚಿನ ರೈತರಿಗೆ ಪ್ರಯೋಜನ ಸಿಗುತ್ತದೆ. ಈ ಪದ್ಧ್ದತಿಯಿಂದಾಗಿ ಪ್ರತಿ ರೈತನೂ ಹೋರಿಗಳನ್ನು ಸಾಕುವ ಮತ್ತು ನಿರ್ವಹಿಸುವ ಅವಶ್ಯಕತೆ ಇರುವುದಿಲ್ಲ.

ಮುನ್ನೆಚ್ಚರಿಕೆ ಇದ್ದರೆ ಉತ್ತಮ (precaution):

ರೈತರು ಈ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದು ಜಾನುವಾರುಗಳಿಗೆ ಅದರ ಅಗತ್ಯಕ್ಕೆ ಅನುಸಾರವಾಗಿ ವೀರ್ಯವನ್ನು ಕೊಡಿಸಬೇಕು. ಒಮ್ಮೆಯೂ ಕರು ಹಾಕದ ಹಸುಗಳಿಗೆ ಜೆರ್ಸಿ ತಳಿಯ ವೀರ್ಯವನ್ನು ಕೊಡಿಸುವುದು ಸೂಕ್ತ. ಇದರಿಂದ ಪ್ರಸವದ ಸಮಯದಲ್ಲಿ ತೊಂದರೆ ಉಂಟಾಗುವುದಿಲ್ಲ. ಹಸುವು ಬೆದೆಗೆ ಬಂದಾಗ ಪಶುವೈದ್ಯರನ್ನು ಸಂರ್ಪಕಿಸಿ ಹಸುವಿನ ವಯಸ್ಸು ಹಾಗೂ ಆ ಪ್ರದೇಶದ ಹವಾಗುಣಕ್ಕೆ ಅನುಗುಣವಾಗಿ ಕೃತಕ ಗರ್ಭಧಾರಣೆ ಮಾಡಿಸುವುದು ಮತ್ತು ಹೆಚ್ಚಿನ ಮಾಹಿತಿಗೆ ಹತ್ತಿರದ ಪಶುಚಿಕಿತ್ಸಾಲಯವನ್ನು ಸಂಪರ್ಕಿಸಬಹುದು..

ರೈತರು ದೂರವಾಣಿ ಸಂಖ್ಯೆ 1800 425 0012 (ಉಚಿತ) ಅಥವಾ 080-23417100 ಕ್ಕೆ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಕರೆ ಮಾಡಿ ಪಶುವೈದ್ಯರು ಮತ್ತು  ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆಯಬಹುದು

Leave a Comment