ಯಾರಿಗೆ ಅನ್ನಭಾಗ್ಯದ ಹಣ ಎಷ್ಟು ಸಿಗುವುದು? ಇಲ್ಲೇ ಚೆಕ್ ಮಾಡಿ

Written by Ramlinganna

Updated on:

BPL Card holder name ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಪ್ರತಿ ಸದಸ್ಯರಿಗೆ ಅನ್ನಭಾಗ್ಯದ ಯೋಜನೆಯಡಿಯಲ್ಲಿ ಕಾಂಗ್ರೆಸ್ ಸರ್ಕಾರವು ತಲಾ 10 ಕೆ.ಜಿ ಅಕ್ಕಿಯನ್ನು ವಿತರಿಸುವುದಾಗಿ ಘೋಷಣೆ ಮಾಡಿತ್ತು. ಆದರೆ ಈಗ ಅನ್ನಭಾಗ್ಯದ ಯೋಜನೆಡಿಯ ಅಕ್ಕಿ ಹೊಂದಿಸಲು ಸಮಸ್ಯೆಯಾಗುತ್ತಿದ್ದರಿಂದ ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ಹಾಗೂ ಬಾಕಿ ಐದು ಕೆಜಿ ಅಕ್ಕಿಯ ಬದಲು 170 ರೂಪಾಯಿ ನೀಡಲು ಮುಂದಾಗಿದೆ.

ಹೌದು, ಇದೇ ತಿಂಗಳಿನಿಂದ ಬಿಪಿಎಲ್ ಕಾರ್ಡ್ ಹೊಂದಿಗೆ ಕುಟುಂಬದ ಮುಖ್ಯಸ್ಥನ ಖಾತೆಗೆ ಹಣ ಜಮೆ ಮಾಡಲಾಗುವುದು. ಅಂದರೆ ನಿಮ್ಮ ಕುಟುಂಬದಲ್ಲಿ ನೀವು ನಿಮ್ಮ ಪತ್ನಿ, ನಿಮಗೆ ಮೂವರು ಮಕ್ಕಳಿದ್ದರೆ ಒಟ್ಟು ಐದು ಜನ ಸದಸ್ಯರಿಗೆ 25 ಕೆ.ಜಿ ಅಕ್ಕಿಯ ಬದಲು ಅಕ್ಕಿಗೆ ತಗಲುವ ವೆಚ್ಚ ತಲಾ 170 ರೂಪಾಯಿಯಂತೆ ಒಟ್ಟು 850 ರೂಪಾಯಿಯನ್ನು ಕುಟುಂಬದ ಮುಖ್ಯಸ್ಥನ ಖಾತೆಗೆ ಜಮೆ ಮಾಡಲಾಗುವುದು.

BPL Card holder name ನಿಮ್ಮ ಬಿಪಿಎಲ್ ಕಾರ್ಡ್ ಆ್ಯಕ್ಟಿವ್ ಇದೆಯೋ ಇಲ್ಲವೋ? ಇಲ್ಲೇ ಚೆಕ್ ಮಾಡಿ

ಬಿಪಿಎಲ್ ಕಾರ್ಡ್ ಫಲಾನುಭವಿಗಳು ಈಗ ಮನೆಯಲ್ಲಿಯೇ ಕುಳಿತು ತಮ್ಮ ಕಾರ್ಡ್ ಆ್ಯಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://ahara.kar.nic.in/status3/verify_rationcard_without_mems.aspx#

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ Food, civil supplies and Consumer affairs ರೇಶನ್ ಕಾರ್ಡ್ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಆರ್.ಸಿ ನಂಬರ್ ಅಂದರೆ ರೇಶನ್ ಕಾರ್ಡ್ ನಂಬರ್ ಹಾಕಿದ ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ರೇಶನ್ ಕಾರ್ಡ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ರೇಶನ್ ಕಾರ್ಡ್ ಆ್ಯಕ್ಟಿವ್ ಇದೆಯೋ ಇಲ್ಲವೋ ಎಂಬುದನ್ನು ಬರೆಯಲಾಗಿರುತ್ತದೆ. ಅದರಲ್ಲಿ ಈ ಕಾರ್ಡಿನಲ್ಲಿ ಎಷ್ಟು ಜನ ಸದಸ್ಯರಿದ್ದಾರೆ ಹಾಗೂ ಎಷ್ಟು ಜನ ಇಕೆವೈಸಿ ಮಾಡಿಸಿಕೊಂಡಿದ್ದಾರೆ ಎಂಬ ಮಾಹಿತಿಯೂ ಅಲ್ಲಿ ಸಿಗುತ್ತದೆ.

ಒಂದು ವೇಳೆ ನಿಮ್ಮ ಆರ್.ಸಿ ನಂಬರ್ ನಿಮಗೆ ಗೊತ್ತಿಲ್ಲದಿದ್ದರೆ ಈ

https://ahara.kar.nic.in/Home/EServices

ಆಗ ರೇಶನ್ ಕಾರ್ಡ್ ಮಾಹಿತಿ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ಇ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಹಳ್ಳಿ ಪಟ್ಟಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯತ್ ಹಾಗೂ ನಿಮ್ಮ ಊರು ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಊರಿನಲ್ಲಿ ಯಾರು ಯಾರು ರೇಶನ್ ಕಾರ್ಡ್ ಪಡೆದಿದ್ದಾರೆ ಅವರ ಹೆಸರು ಕಾಣಿಸುತ್ತದೆ.  ನಿಮ್ಮ ಹೆಸರಿನ ಹಿಂದುಗಡೆ ಇರುವ ಆರ್.ಸಿ ನಂಬರ್ ಬರೆದಿಟ್ಟುಕೊಳ್ಳಬೇಕು. ಇದು ನಿಮ್ಮಲ್ಲಿ ಶಾಶ್ವತವಾಗಿ ಇರಬೇಕು. ಎಂದಾದರು ಅವಶ್ಯಕತೆ ಇದ್ದಾಗ ಆರ್.ಸಿ ನಂಬರ್ ದಿಂದ ನಿಮ್ಮ ರೇಶನ್ ಕಾರ್ಡ್ ಓಪ್ ಮಾಡಬಹುದು.

ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ

ರೇಶನ್ ಕಾರ್ಡ್ ಆರ್.ಸಿ ನಂಬರ್ ಎದುರುಗಡೆ ನಿಮ್ಮ ಹೆಸರು, ವಿಳಾಸ ಹಾಗೂ ನಿಮ್ಮ ರೇಶನ್ ಕಾರ್ಡ್ ಯಾವ ಪ್ರಕಾರದ್ದಾಗಿದೆ ಎಷ್ಟು ಜನ ಸದಸ್ಯರ ಹೆಸರು ಸೇರಿಸಲಾಗಿದೆ ಎಂಬುದರ ಕುರಿತು ಮಾಹಿತಿ ಸಿಗುತ್ತದೆ.

ಏನಿದು ಅನ್ನಭಾಗ್ಯ ಯೋಜನೆ?

ಕರ್ನಾಟಕ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯನ್ನು 2013 ರಿಂದ ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡ್ ಪಡೆದಿರುವವರಿಗೆ ಆಹಾರಧಾನ್ಯ ವಿತರಿಸಲಾಗುವುದು. ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿತ್ತು. ಈ ಯೋಜನೆಯ ಫಲಾನುಭವಿಗಳಿಗೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ 5 ಕೆಜಿ ಹೆಚ್ಚುವರಿಯಾಗಿ ಅಕ್ಕಿ ನೀಡಲಾಗುವುದು ಎಂದು ಘೋಷಣೆ ಮಾಡಿತ್ತು. ಇದೇ ಯೋಜನೆಯಡಿಯಲ್ಲಿ ಅಕ್ಕಿಯ ಬದಲು ಸರ್ಕಾರವು ಪ್ರತಿ ಕುಟುಂಬದ ಸದಸ್ಯರಿಗೆ 170 ರೂಪಾಯಿ ನೀಡಲು ಮುಂದಾಗಿದೆ.

Leave a Comment