ಜುಲೈ 15 ಹಾಗೂ ಜುಲೈ 31 ರೊಳಗೆ ಈ ಬೆಳೆಗಳಿಗೆ ವಿಮೆ ಮಾಡಿಸಿ ಬೆಳೆ ವಿಮೆ ಹಣ ಪಡೆಯಿರಿ

Written by Ramlinganna

Published on:

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಜುಲೈ 15 ಹಾಗೂ  ಹಾಗೂ ಜುಲೈ 31 ರೊಳಗೆ ಮುಂಗಾರು ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಿದರೆ ಮಾತ್ರ ನಿಮ್ಮ ಬೆಳೆಗೆ ವಿಮಾ ಸೌಲಭ್ಯ ದೊರೆಯಲಿದೆ.

ಹೌದು, ಪ್ರಸಕ್ತ ಸಾಲಿನ ಅಂದರೆ 2023-24ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ಜುಲೈ 31 ರೊಳಗೆ ಬೆಳೆ ವಿಮೆ ಮಾಡಿಸಬಹುದು. ಹಾಗಾದರೆ ಯಾವ ಯಾವ ಬೆಳೆಗಳಿಗೆ ಜುಲೈ 31 ರೊಳಗೆ ವಿಮೆ ಮಾಡಿಸಬಹುದೆಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಕ್ಷೀಪ್ತ ಮಾಹಿತಿ.

ಯಾವ ಯಾವ ಬೆಳೆಗಳಿಗೆ ಜುಲೈ 31 ಕೊನೆಯ ದಿನವಾಗಿದೆ? ಚೆಕ್ ಮಾಡುವುದು ಹೇಗೆ?

ರೈತರು ಯಾವ ಯಾವ ಬೆಳೆಗಳಿಗೆ ಜುಲೈ 31 ರೊಳಗೆ ವಿಮೆ ಮಾಡಿಸಬಹುದೆಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಕರ್ನಾಟಕದ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Farmers  ಕಾಲಂ ಕೆಳಗಡೆ View cut off Dates ಮೇಲೆ ಕ್ಲಿಕ್ ಮಾಡಬೇಕು. ಅಥವಾ

https://samrakshane.karnataka.gov.in/PublicView/FindCutOff.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.ಅಲ್ಲಿ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಂಡರೆ ಸಾಕು, ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಡರೆ ಸಾಕು, ನಿಮ್ಮ ಜಿಲ್ಲೆಯಲ್ಲಿ ಜುಲೈ 31 ರೊಳಗೆ ಯಾವ ಯಾವ ಬೆಳೆಗಳಗೆ ವಿಮೆ ಮಾಡಿಸಬಹುದು ಎಂಬ ಪಟ್ಟಿ ಕಾಣಿಸುತ್ತದೆ.

ಉದಾಹರಣೆಗೆ ಕಲಬುರಗಿ ಜಿಲ್ಲೆಗೆ ಅರಿಶಿಣ, ಹತ್ತಿ, ಮುಸುಕಿನ ಜೋಳ, ಸಜ್ಜೆ, ಜೋಳ, ಉದ್ದು, ಹೆಸರು, ತೊಗರಿ, ಶೇಂಗಾ, ಎಳ್ಳು ಹಾಗೂ ಸೋಯಾಅವರೆ ಬೆಳೆಗಳನ್ನು ಜುಲೈ 31 ರೊಳಗೆ ವಿಮೆ ಮಾಡಿಸಲು ಅವಕಾಶವಿದೆ.

ಅದೇ ರೀತಿ ಸೂರ್ಯಕಾಂತಿ, ಈರುಳ್ಳಿ, ಕೆಂಪು ಮೆಣಸಿನಕಾಯಿ, ಟೋಮ್ಯಟೋ ಬೆಳೆಗಳಿಗೆ ಆಗಸ್ಟ್ 16 ರೊಳಗಾಗಿ ವಿಮೆ ಮಾಡಿಸಲು ಅವಕಾಶವಿದೆ.

ಇದನ್ನೂ ಓದಿ : ಈ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ: ಜಮೆಯಾಗಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ

ತುಮಕೂರು ಜಿಲ್ಲೆಯ ರೈತರು ಮಾವು, ಈರುಳ್ಳಿ, ಸೂರ್ಯಕಾಂತಿ, ನವಣೆ, ಮುಸುಕಿನ ಜೋಳ, ಸಜ್ಜೆ ಬೆಳೆಗಳನ್ನು ಜುಲೈ 31 ರೊಳಗೆ ವಿಮೆ ಮಾಡಿಸಲು ಅವಕಾಶವಿದೆ.

ತೊಗರಿ, ಅಲಸಂಧೆ, ನೆಲಗಡಲೆ (ಶೇಂಗಾ), ಟೊಮ್ಯಾಟೋ, ಅಡಿಕೆ, ಪಪ್ಪಾಯ, ದಾಳಿಂಬೆ ಬೆಳೆಗಳಿಗೆ ಜುಲೈ 15 ರೊಳಗೆ ವಿಮೆ ಮಾಡಿಸಬಹುದು. ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಬೇಗನೆ ಬೆಳೆ ವಿಮೆ ಮಾಡಿಸಿಕೊಳ್ಳಬಹುದು.

ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಎಲ್ಲಾ ಬೆಳಗಳಿಗೆ ವಿಮೆ ಮಾಡಿಸಲು ಒಂದೇ ದಿನಾಂಕವಿರುವುದಿಲ್ಲ. ಜಿಲ್ಲೆಯಿಂದ ಜಿಲ್ಲೆಗೆ ಬೆಳೆಗಳ ವಿಮೆ ಮಾಡಿಸಲು ಕೊನೆಯ ದಿನಾಂಕವೂ ವ್ಯತ್ಯಾಸವಾಗಿರುತ್ತದೆ. ಹಾಗಾಗಿ ರೈತರು ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಲು ಅವಕಾಶವಿದೆ ಹಾಗೂ ಕೊನೆಯ ದಿನಾಂಕ ಯಾವುದೆಂಬುದನ್ನು ಈಗಲೇ ಚೆಕ್ ಮಾಡಿಕೊಳ್ಳಬಹುದು.

ಬೆಳೆ ವಿಮೆ ಮಾಡಿಸಿದ ರೈತರಿಗೆ ಪರಿಹಾರ ಯಾವಾಗ ಬರುತ್ತದೆ?

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರ ಬೆಳೆ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಥವಾ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಪೋಟ, ಪ್ರವಾಹ, ಹಾಗೂ ಗುಡುಗು ಮಿಂಚುಗಳಿಂದಾಗಿ ಉಂಟಾಗುವ ಬೆಂಕಿ ಅವಘಡಕ್ಕೆ ಬೆಳೆ ಹಾಳಾದರೆ ರೈತರು ಬೆಳೆ ವಿಮೆಯ ಸದುಪಯೋಗ ಪಡೆದುಕೊಳ್ಳಬಹುದು.

ಬೆಳೆ ವಿಮೆ ಕುರಿತಂತೆ ಹೆಚ್ಚಿ ನ ಮಾಹಿತಿಗಾಗಿ ರೈತರು ತಮ್ಮ ಹತ್ತಿರ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು. ಕಲಬುರಗಿ ಜಿಲ್ಲೆಯ ರೈತರು 1800 200 5142 ಉಚಿತ ಸಹಾಯವಾಣಿಗೆ ಕರೆ ಮಾಡಬಹುದು.

Leave a comment