Bara Parihara 350 crore credited: ನಿಮಗೆಷ್ಟು ಜಮೆ

Written by Ramlinganna

Updated on:

Bara Parihara 350 crore creditedBara Parihara: ರೈತರ ಖಾತೆಗೆ ಜಮೆಯಾಗಿದೆ. ಹೌದು, ಯಾರು ಯಾರಿಗೆ ಜಮೆಯಾಗಿದೆ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ಕಳೆದ ಒಂದು ವರ್ಷದಿಂದ ಭೀಕರ ಬರಗಾಲ ಆವರಿಸಿದ್ದು ಬರ ಪರಿಹಾರ ಹಣವನ್ನು ರೈತರ ಖಾತೆಗಳಿಗೆ ಈಗಾಗಲೇBara Parihara 350 crore credited. ಮುಂದಿನ ದಿನಗಳಲ್ಲಿ 900 ಕೋಟಿ ರೂಪಾಯಿಗಳು ವಿತರಣೆಯಾಗಲಿದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ ತಿಳಿಸಿದ್ದಾರೆ.

ಅವರು ನಗರದ ಎಪಿಎಂಸಿ ಪ್ರಾಂಗಣದಲ್ಲಿ ನಗರದ ಎಪಿಎಂಸಿ ದವಸಧಾನ್ಯ ಮಾರುಕ್ಟೆಯಲ್ಲಿ 1968 ರಲ್ಲಿ ಸ್ಥಾಪಿತವಾಗಿರುವ ಚಿಂತಾಮಣಿ ಪೂರ್ವ ರೇಷ್ಮೆಬೆಳೆಗಾರರಹಾಗೂ ರೈತರ ಸವಾ ಸಹಕಾರ ನಿಯಮಿತದ ನವೀಕೃತ ಕಟ್ಟಡ ಉದ್ಘಾಟಿಸಿ ಮಾತನಾಡಿ ಸರ್ಕಾರಕ್ಕೆ ಪಾವತಿ ಮಾಡಲು ಎಪಿಎಂಸಿಯಲ್ಲಿರುವ 5 ಕೋಟಿ ರೂಪಾಯಿ ಖರ್ಚು ಮಾಡದಂತೆ ಕಾರ್ಯದರ್ಶಿಗೆ ಸೂಚಿಸಿದ್ದೇನೆಎಂದರು.

ಅಸಲು ಸಲ್ಲಿಸಿದರೆ ಬಡ್ಡಿ ಮನ್ನಾ

2013 ರಿಂದ ಚಿಂತಾಮಣಿಯ ಹಲವು ಮಹಿಳಾ ಸಂಘಗಳಿಗೆ ಹೆಚ್ಚು ಅನುದಾನ  ಸಿಕ್ಕಿರಲಿಲ್ಲ. ನಾಗಿರೆಡ್ಡಿ ನಿರ್ದೇಶಕರಾದ ನಂತರ 4 ಸಾವಿರ ಸಂಘಗಳಿಗೆ ಬಡ್ಡಿ ರಹಿತ ಸಾಲ, ಸಂಘಗಳ ಪುನಶ್ಚೇತನ ಮಾಡಿ 170 ಕೋಟಿ ರೂಪಾಯಿ ಸಾಲವಾಗಿ ನೀಡಿದ್ದಲ್ಲದೆ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆಯಡಿ ರೈತರಿಗೆ ಕೋಟ್ಯಂತರ ರೂಪಾಯಿ ವಿತರಿಸಲಾಗಿದೆ.ಪ್ರಸ್ತುತ ಶೂನ್ಯ ಬಡ್ಡಿ ಸಾಲಕ್ಕೆ ಕಾನೂನು ಬದಲಾವಣೆಯಾಗಿದ್ದು, ಸಾಲ ಪಡೆದವರು ಸಕಾಲಕ್ಕೆ ಮರುಪಾವತಿ ಮಾಡಿದರೆ  ಮಾತ್ರ ಪುನಃ ಸಾಲ ದೊರೆಯಲಿದೆ ಎಂದರು.

ಸೋಲಾರ್ ಜಾಗಕ್ಕೆ ಹುಡುಕಾಟ

ಸೋಲಾರ್ ಉತ್ಪಾದನೆಗೆ ಜಾಗ ಹುಡುಕುತ್ತಿದ್ದು, ಅಂಬೇಡ್ಕರ್ ಭವನದ ಕಾಮಗಾರಿ ವಿಸ್ತರಣೆ, ಐಡಿಎಸ್ಎಂಟಿಯ ಮೇಲ್ಬಾಗದಲ್ಲಿ ಬೀದಿ ವ್ಯಾಪರಸ್ಥರಿಗೆ ಅನುಕೂಲ ಮಾಡಿಕೊಡಲು ಯೋಜನೆ ರೂಪಿಸಲಾಗಿದೆ ಎಂದರು.

Bara Parihara 350 crore credited: ಜಮೆಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಬೆಳೆ ಹಾನಿ ಪರಿಹಾರದ ಸ್ಟೇಟಸ್ ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಹಣ ಸಂದಾಯ ವರದಿ ಕಾಣಿಸುತ್ತದೆ. ಅಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ ಫ್ಲಡ್ ಅಥವಾ ಡ್ರಾಟ್ ಆಯ್ಕೆ ಮಾಡಿಕೊಳ್ಳಬೇಕು. ನಂತರ 2023ನೇ  ವರ್ಷ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನಂತರ ಕ್ಯಾಪ್ಚ್ಯಾ ಕೋಡ್ ಹಾಕಿ ವಿವರಗಳನ್ನು ಪಡೆಯಿರಿ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಜಮೆಯಾಗಿರುವ ಸ್ಟೇಟಸ್ ಚೆಕ್ ಮಾಡಬಹುದು.

Bara Parihara 350 crore credited ರಾಮನಗರ ಜಿಲ್ಲೆಗೆ 10.61 ಕೋಟಿ  ಬಿಡುಗಡೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಬರದಿಂದಾಗಿರುವ ಬೆಳೆಹಾನಿಗೆ ಜಿಲ್ಲೆಗೆ 10.61 ಕೋಟಿ ಪರಿಹಾರ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ ಜಮೀನಿಗೆ ಹೋಗಲು ಕಾಲುದಾರಿ ಬಂಡಿದಾರಿ ಇದೆಯೇ? ಇಲ್ಲೇ ಚೆಕ್ ಮಾಡಿ

ಬರದಿಂದಾಗಿ ಶೇ. 33 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಂಟಾದ ಬೆಳೆ ಹಾನಿಗೆ ಗರಿಷ್ಟ 2 ಹೆಕ್ಟೇರಿಗೆ ಸೀಮಿತಗೊಳಿಸಿ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರಿಗೆ 8500 ರೂಪಾಯಿ, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರಿಗೆ 17 ಸಾವಿರ ರೂಪಾಯಿ ಹಾಗೂ ಬಹುವಾರ್ಷಿಕ ಬೆಳೆಗೆ ಪ್ರತಿ ಹೆಕ್ಟೇರಿಗೆ 22500 ರೂಪಾಯಿ ಪರಿಹಾರ ನಿಗದಿಪಡಿಸಲಾಗಿದೆ.

Bara Parihara: ಹಾಸನ ಜಿಲ್ಲೆಗೆ 34.36 ಕೋಟಿ ರೂಪಾಯಿ ಬಿಡುಗಡೆ

ಮಳೆಯ ಕೊರತೆಯಿಂದಾಗಿ  ಹಾಸನ ಜಿಲ್ಲೆಯ 8 ತಾಲೂಕುಗಳನ್ನು ತೀವ್ರ ಬರ ಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿದೆ. ಅದರಂತೆ ರಾಜ್ಯ ಸರ್ಕಾರದಿಂದ ಎಸ್.ಡಿ.ಆರ್.ಎಫ್ ನಡಿಯಲ್ಲಿ ಮೊದಲ ಕಂತಿನಲ್ಲಿ ಜಿಲ್ಲೆಗೆ 34.36 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.1,89,379 ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಜಮೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.

Leave a Comment