ಆರ್ಮಿಯಲ್ಲಿ ಸೇರಲಿಚ್ಚಿಸುವ ಅಭ್ಯರ್ಥಿಗಳಿಗೆ ಸಂತಸದ ಸುದ್ದಿ. ರಾಜ್ಯದ 13 ಜಿಲ್ಲೆಗಳ ಅಭ್ಯರ್ಥಿಗಳಿಗಾಗಿ ಭಾರತೀಯ ಮಿಲಿಟರಿಯು ಪುರುಷ ಅಭ್ಯರ್ಥಿಗಳಿಗಾಗಿ ಆರ್ಮಿ ನೇಮಕಾತಿ ರ‍್ಯಾಲಿಯನ್ನು (army recruitment rally from may 7th )ಹಮ್ಮಿಕೊಂಡಿದೆ. ಹಾಗಾದರೆ ಯಾವ್ಯಾವ ಜಿಲ್ಲೆಯವರೆಗೆ ಆರ್ಮಿ ನೇಮಕಾತಿ ರ‍್ಯಾಲಿ ಹಮ್ಮಿಕೊಂಡಿದೆ ಎಂಬುದರ ಮಾಹಿತಿ ಇಲ್ಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, , ಚಾಮರಾಜನಗರ, ರಾಮನಗರ, ಕೊಡಗು, ಮಂಡ್ಯ, ಮೈಸೂರು, ಬಳ್ಳಾರಿ ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಮತ್ತು ಚಿತ್ರದುರ್ಗ ಜಿಲ್ಲೆಗಳ ಅಭ್ಯರ್ಥಿಗಳಿಗಾಗಿ ಈ ನೇಮಕಾತಿ ರ‍್ಯಾಲಿಯನ್ನು ಹಮ್ಮಿಕೊಂಡಿದೆ.
ಮಿಲಿಟರಿಯಲ್ಲಿ ಸೇರಲಿಚ್ಚಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೂಡಲೇ ಆನ್‌ಲೈನ್ ಮೂಲಕ ನೋಂದಣಿ ಮಾಡಿಸಲು ಸೂಚಿಸಲಾಗಿದೆ.
ಅರ್ಹತೆಗಳು (Education Eligibility) :
ಇಂಡಿಯನ್ ಆರ್ಮಿಯು ಸೋಲ್ಜರ್ ಜೆನೆರಲ್ ಡ್ಯೂಟಿ, ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ಟ್ರೇಡ್ಸ್‌ಮನ್ ಹುದ್ದೆಗೆ (10ನೇ ತರಗತಿ ಪಾಸ್), ಸೋಲ್ಜರ್ ಟ್ರೇಡ್ಸ್‌ಮನ್ ಹುದ್ದೆಗೆ (8ನೇ ತರಗತಿ ಪಾಸ್), ಸೋಲ್ಜರ್ ಕ್ಲರ್ಕ್ ಮತ್ತು ಸ್ಟೋರ್ ಕೀಪರ್ , ಟೆಕ್ನಿಕಲ್ ಅಸಿಸ್ಟಂಟ್, ನರ್ಸಿಂಗ್ ಅಸಿಸ್ಟಂಟ್ ಹುದ್ದೆಗಳ ಭರ್ತಿಗಾಗಿ ಈ ನೇಮಕಾತಿ ರ‍್ಯಾಲಿ ನಡೆಸಲಿದೆ.
: ಮೇ 07, 2021 ರಿಂದ ಮೇ 12, 2021 ರವರೆಗೆ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೇಮಕಾತಿ ರ್ಯಾಲಿಯನ್ನು ವಿಶ್ವೇಶ್ವರಯ್ಯ ಸ್ಟೇಡಿಯಂ, ಕೋಲಾರದಲ್ಲಿ ನಡೆಯಲಿದೆ.
ಈ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ವೆಬ್‌ಸೈಟ್ www.joinindianarmy.nic.in ನಲ್ಲಿ ನೋಂದಣಿ ಮಾಡಿಸಬೇಕು. ಆನ್‌ಲೈನ್ ರಿಜಿಸ್ಟ್ರೇಷನ್ ಆರಂಭ ದಿನಾಂಕ : 13-03-2021ಆನ್‌ಲೈನ್ ರಿಜಿಸ್ಟ್ರೇಷನ್‌ಗೆ ಕೊನೆಯ ದಿನಾಂಕ : 26-04-2021 ಆಗಿದೆ.
ವಯಸ್ಸು (Age):
ಆರ್ಮಿ ನೇಮಕಾತಿ ರ‍್ಯಾಲಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯೋಮಾನ 17 ವರ್ಷ 6 ತಿಂಗಳು ಕನಿಷ್ಠ, 23 ವರ್ಷ ಗರಿಷ್ಠ ಮೀರಿರಬಾರದು. ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಲು ಆನ್‌ಲೈನ್ ಮೂಲಕ ರಿಜಿಸ್ಟ್ರೇಷನ್ ಪಡೆದ ಅಭ್ಯರ್ಥಿಗಳ ಇ-ಮೇಲ್ ವಿಳಾಸಕ್ಕೆ ಅಡ್ಮಿಟ್ ಕಾರ್ಡ್ ಕಳುಹಿಸಲಾಗುತ್ತದೆ. ಅದರಲ್ಲಿ ನಿಗದಿಪಡಿಸಿದ ದಿನಾಂಕದಂದು ಅಭ್ಯರ್ಥಿ ಅಗತ್ಯ ದಾಖಲೆಗಳೊಂದಿಗೆ ರ‍್ಯಾಲಿಗೆ ದಾಖಲಾಗಬಹುದು. ಆರ್ಮಿಯು ವಿವಿಧ ವಿಭಾಗಕ್ಕೆ ಸೈನಿಕ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ www.joinindianarmy.nic.in ಲಿಂಕ್ ಮೇಲೆ ಕ್ಲಿಕ್ ಮಾಡಿ ವಿವರ ಭರ್ತಿ ಮಾಡಿಕೊಳ್ಳಬೇಕು.
ನೋಟಿಫಿಕೇಷನ್ ಹಾಗೂ ಅರ್ಹತೆ. ವಯೋಮಿತಿ ಸೇರಿದಂತೆ ಇನ್ನಿತರ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.