ಈ ಜಿಲ್ಲೆಗಳ ರೈತರಿಗೆ 118 ಕೋಟಿ ರೂಪಾಯಿ ಬೆಳೆ ಹಾನಿ ಜಮೆ

Written by Ramlinganna

Updated on:

crop damage compensation amount ಅತೀವಷ್ಟಿಯಿಂದಾಗಿ ಬೆಳೆ ಹಾನಿಯಾದ ರೈತರಿಗೆ ಈಗ ಮೂರನೇ ಕಂತಿನ ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ ಹಾಗೂ  ಜಮೆಗೆ ಅನುಮೋದನೆ ನೀಡಲಾಗಿದೆ.

ಹೌದು, ಪ್ರಸಕ್ತ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತೀವೃಷ್ಟಿಯಿಂದ  ಹಾಳಾ ಬೆಳೆಗಳಿಗೆ ಪರಿಹಾರ ನೀಡಲು ಅನಮೋದನೆ ದೊರೆತಿದೆ. ಭೂಮಿ ತಂತ್ರಾಂಶದಲ್ಲಿ ದಾಖಲಾಗಿರುವವರ ಪೈಕಿ ಜಿಲ್ಲೆಯ 1,05,967 ರೈತರಿಗೆ 90.99 ಕೋಟಿ ರೂಪಾಯಿ ಬೆಳೆ ಪರಿಹಾರ ಬಿಡುಗಡೆಗೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಗುರವಾರ ಅನುಮೋದನೆ ನೀಡಿದ್ದಾರೆ.

ಕಳೆದ ಜುಲೈ ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ 1.70 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯನ್ನು ಜಂಟಿ ಸಮೀಕ್ಷೆ ಮೂಲಕ ಅಂದಾಜಿಸಿ ಬೆಳೆ ಪರಿಹಾರಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಕಳೆದ ಸೆಪ್ಟೆಂಬರ್ 7 ರಂದು ಮೊದಲನೆ ಕಂತಿನಲ್ಲಿ ಜಿಲ್ಲೆಯ 33487 ರೈತರಿಗೆ 30.92 ಕೋಟಿ ರೂಪಾಯಿ ಮತ್ತು ಸೆಪ್ಟೆಂಬರ್ 15 ರಂದು ಎರಡನೇ ಕಂತಿನಲ್ಲಿ 49528  ರೈತರ ಖಾತೆಗೆ 42.62  ಕೋಟಿ ರೂಪಾಯಿ ಪರಿಹಾರ ಹಣ ಬಿಡುಗಡೆ ಮಾಡಲಾಗಿತ್ತು. ಇದೀಗ ಮೂರನೇ ಕಂತಿನಲ್ಲಿ 90.99 ಕೋಟಿ ರೂಪಾಯಿ ಬಿಡುಗಡೆಗೆ ಅನುಮೋದನೆ ನೀಡಿದ್ದು, ಎರಡು ದಿನದಲ್ಲಿ ಆಧಾರ್ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು.

ಕಲಬುರಗಿ ಜಿಲ್ಲೆಯಲ್ಲಿ ಮೂರನೇ ಕಂತು ಸೇರಿ ಒಟ್ಟು ಇದುವರೆಗೆ ಒಟ್ಟಾರೆ 1,88, 982 ರೈತರಿಗೆ 164.53 ಕೋಟಿ ರೂಪಾಯಿ ಪರಿಹಾರ ನೀಡಿದಂತಾಗಿದೆ. ಇದು ರಾಜ್ಯದಲ್ಲಿಯೇ ದಾಖಲೆ ಪ್ರಮಾಣದಲ್ಲಿ ಜಿಲ್ಲೆಗೆ ಅತೀ ಹೆಚ್ಚಿನ ಪರಿಹಾರ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ . ಗುರುಕರ್ ತಿಳಿಸಿದ್ದಾರೆ.

ಧಾರವಾಡ ಜಿಲ್ಲೆಯ ರೈತರಿಗೆ ಮೂರನೇ ಹಂತಿನ 27.27 ಕೋಟಿ ರೂಪಾಯಿ ಪರಿಹಾರ ಹಣ ಜಮೆ

ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮು 2022 ರ ಸಾಲಿನಲ್ಲಿ ಅತೀವೃಷ್ಟಿಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಹಾನಿಯಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಅದರಂತೆ ಸೆಪ್ಟೆಂಬರ್ 28 ರಂದು ಮೂರನೇ ಹಂತದಲ್ಲಿ 15,608 ರೈತ ಫಲಾನುಭವಿಗಳಿಗೆ ಒಟ್ಟು 27.27 ಕೋಟಿ ರೂಪಾಯಿ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ. ಪರಿಹಾರ ಎಂಟ್ರಿ ಕಾರ್ಯವು ಪ್ರಗತಿಯಲ್ಲಿದ್ದುಹಂತಹಂತವಾಗಿ ರೈತರಿಗೆ ದೊರಕಲಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಗುರದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

crop damage compensation amount ಬೆಳೆ ಹಾನಿ ಪರಿಹಾರ ನಿಮಗೂ ಜಮೆಯಾಗಿದೆಯೋ ಇಲ್ಲೇ ಚೆಕ್ ಮಾಡಿ

ರೈತರು ತಮ್ಮ ಖಾತೆಗೆ ಬೆಳೆ ಹಾನಿ ಪರಿಹಾರ ಹಣ ಜಮಯಾಗಿಯೋ ಇಲ್ಲವೋ ಎಂಬುದನ್ನು ಆಧಾರ್ ಕಾರ್ಡ್ ನಮೂದಿಸಿ ಚೆಕ್ ಮಾಡಬಹುದು. ಹಾದು, ರೈತರು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ಕಂದಾಯ ಇಲಾಖೆಯ ಪರಿಹಾರ ಹಣ ಸಂದಾಯ ವರದಿ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಆಧಾರ್ ಕಾರ್ಡನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ  ಕೆಳಗಡೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಕಾಲಾಮಿಟಿ ಟೈಪ್ ನಲ್ಲಿ ಫ್ಲಡ್ ಹಾಗೂ ಇಯರ್ ನಲ್ಲಿ 2022-23 ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದನಂತರ 12 ಅಂಕೆಯ ನಿಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ನಂತರ ಕ್ಯಾಪ್ಚ್ಯಾ ಕೋಡ್ ನಮೂದಿಸಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿದಾಗ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ.

ಅಲ್ಲಿ ನಿಮಗೆ ಹಣ ಸಂದಾಯವಾಗಿದೆಯೋ ಇಲ್ಲವೋ ಅಥವಾ ಹಣ ಸಂದಾಯಕ್ಕೆ ನಿಮ್ಮ ಸರ್ವೆ ನಂಬರ್, ಬೆಳೆ ಎಷ್ಟು ಎಕರೆಗೆ ಪರಿಹಾರ ನೀಡಲು ಪರಿಹಾರ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲಾಗಿದೆ ಎಂಬ ಮಾಹಿತಿಯನ್ನು ನೋಡಬಹುದು.

ಇದನ್ನೂ ಓದಿ : ಮೊಬೈಲ್ ನಂಬರ್ ಹಾಕಿ ನಿಮ್ಮ ಪಿಎಂ ಕಿಸಾನ್ ಯೋಜನೆ ಹಣ ಜಮೆ ಸ್ಟೇಟಸ್ ಚೆಕ್ ಮಾಡಿ

ಇತರ ಜಿಲ್ಲೆಯ ರೈತರು ಸಹ ತಮ್ಮ ಆಧಾರ್ ಕಾರ್ಡ್ ನಮೂದಿಸಿ ಬೆಳೆಹಾನಿ ಪರಿಹಾರ ಹಣ ಜಮೆಯ ಸ್ಟೇಟಸ್ ನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Leave a Comment