ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ 2022-23 ನೇ ಸಾಲಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ರೈತ ಮಹಿಳೆಯರಿಗೆ ನಾಟಿ ಕೋಳಿ ಮರಿಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ವಿತರಸಿಲಾಗುವುದು. ಕೋಳಿ ಮರಿಗಳನ್ನು ಸಾಕಿ ರೈತ ಮಹಿಳೆಯರು ತಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಲು ಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ.
ಪೌಷ್ಠಿಕತೆ ಹಾಗೂ ರುಚಿಯ ಜತೆಗೆ ರೋಗ ನಿರೋಧಕಶಕ್ತಿ ಹೊಂದಿರುವ ನಾಟಿ ಕೋಳಿಗಳನ್ನುಸಾಕಲು ಉಚಿತವಾಗಿ ವಿತರಿಸಲಾಗುವುದು. ರೈತ ಸ್ನೇಹಿಯಾಗಿರುವ ಈ ಕೋಳಿಗಳ ಸಾಕಾಣಿಯಿಂದ ಬಡವರು ಆರ್ಥಿಕವಾಗಿ ಸಬಲರಾಗಬಹುದು ಎಂಬ ಸದುದ್ದೇಶದಿಂದ ಪಶುಪಾಲನಾ ಮತ್ತು ಪಶಉವೈದ್ಯ ಸೇವಾ ಇಲಾಖೆಯ ವತಿಯಿಂದ ಉಚತವಾಗಿ ವಿತರಿಸಲಾಗುತ್ತಿದೆ.
ಹೌದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬಿಪಿಎಲ್ ಕಾರ್ಡ್ ಹೊಂದಿರುವ 106 ಗ್ರಾಮೀಣ ರೈತ ಮಹಳೆಯರಿಗೆ ಪ್ರತಿ ಫಲಾನುಭವಿಗೆ 5 ವಾರದ 20 ನಾಟಿ ಕೋಳಿ ಮರಿಯನ್ನು ಉಚಿತವಾಗಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಶೃಂಗೇರಿಯ ಪಶು ಆಸ್ಪತ್ರೆಯಲ್ಲಿ ಅರ್ಜಿಯನ್ನು ಪಡೆದು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜೂನ್ 18 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಾ. ವೆಂಕಟೇಶ ಮುಖ್ಯ ಪಶು ವೈದ್ಯಾಧಿಕಾರಿ, ಶೃಂಗೇರಿ ಮೊ. 9448628780 ಗೆ ಸಂಪರ್ಕಿಸಲು ಕೋರಲಾಗಿದೆ.
ಚಿಕ್ಕಮಗಳೂರು ತಾಲೂಕಿನ ರೈತ ಮಹಿಳೆಯರಿಂದಲೂ ಅರ್ಜಿ ಆಹ್ವಾನ
ಪಶುಪಾಲನಾ ಇಲಾಖೆಯ ವತಿಯಿಂದ ಚಿಕ್ಕಮಗಳೂರು ತಾಲೂಕಿನ ಬಿಪಿಎಲ್ ಕಾರ್ಡ್ ಹೊಂದಿರುವ 106 ಗ್ರಾಮೀಣ ರೈತ ಮಹಿಳೆಯರಿಗೆ ಪ್ರತಿ ಫಲಾನುಭವಗೆ 5 ವಾರದ 20 ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಸಹಾಯಕ ನಿರ್ದೇಶಕರ ಕಚೇರಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಚಿಕ್ಕಮಗಳೂರು ತಾಲೂಕು (ಕೆಎಸ್.ಆರ್.ಟಿಸಿ ಬಸ್ ಸ್ಟ್ಯಾಂಡ್ ಎದುರು) ಇಲ್ಲಿ ಪಡೆದುಕೊಂಡು ಜೂನ್ 18 ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಕುಟುಂಬದ ಪಡಿತರ ಚೀಟಿಯ ಪ್ರತಿ, ಪರಿಶಿಶ್ಟ ಜಾತಿ ಪರಿಶಿಶ್ಟ್ ಪಂಗಡದ ಅಭ್ಯರ್ಥಿಗಳಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಡಾ. ಗುರುಪ್ರಸಾದ ಸಹಾಯಕ ನಿರ್ದೇಶಕರು ಮೊ. 98455 48142 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
ಇದನ್ನೂ ಓದಿ: ಜಮೀನಿನ ತತ್ಕಾಲ್ ಪೋಡಿ, 11 ಇ ನಕ್ಷೆ ಹಾಗೂ ಭೂ ಪರಿವರ್ತನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ನಾಟಿ ಕೋಳಿಗಳಿಗೆ ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಸದ್ಯ ನಾಟಿಕೋಳಿ ಸಾಕಾಣಿಕೆಯು ಲಾಭದಾಯಕ ಉದ್ಯಮವಾಗಿದೆ. ಆಡು ಸಾಕಾಣಿಕೆಯ ನಂತರ ಹೆಚ್ಚು ಬೇಡಿಕೆ ಇರುವುದು ಕೋಳಿ ಸಾಕಾಣಿಕೆಗೆ ಎನ್ನಲಾಗುತ್ತಿದೆ. ಏಕೆಂದರೆ ಕೋಳಿಗಳು ನೀಡುವ ಮೊಟ್ಟೆಗಳಿಂದಲೂ ಆದಾಯ ಗಳಿಸಬಹುದು. ನಾಟಿ ಕೋಳಿ ಮೊಟ್ಟೆಗಳ ಬೇಡಿಕೆಯೂ ಹೆಚ್ಚಿದೆ. ಧಾಬಾಗಳಲ್ಲಿನಾಟಿ ಕೋಳಿಯ ಬೇಡಿಕೆ ಹೆಚ್ಚಿದೆ.
ನಗರ ಪ್ರದೇಶದಲ್ಲಿ ನಾಟಿ ಕೋಳಿಯ ಬೇಡಿಕೆ ಇನ್ನೂ ಹೆಚ್ಚಿದೆ. ಪ್ರತಿ ಕೆಜಿ ನಾಟಿ ಕೊಳೆಯ ಬೆಲೆ 450 ರಿಂದ 600 ರೂಪಾಯಿಯವರೆಗೆ ಇದೆ. ಆರೋಗ್ಯದ ದೃಷ್ಠಿಯಿಂದ ಈ ಕೋಳಿಗಳ ಬೇಡಿಕೆಯೂ ಹೆಚ್ಚಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ರೈತರಿಗೆ ಗಿರಿರಾಜ ಕೋಳಿ ವಿತರಣೆ
ಪಶುಪಾಲನಾ ಇಲಾಖೆಯ ವತಿಯಿಂದ ಕೆಲವು ಜಿಲ್ಲೆಗಳಲ್ಲಿ ಗಿರಿರಾಜ ಕೋಳಿ ಮರಿಗಳ ವಿತರಣೆ ಮಾಡಲಾಗುತ್ತಿದೆ. ಈಗಲೂ ಕೆಲವು ಜಿಲ್ಲೆಗಳಲ್ಲಿ ಬೇಡಿಕೆಯನುಸಾರವಾಗಿ ಗಿರಿರಾಜ ಕೋಳಿಗಳನ್ನು ವಿತರಿಸಲಾಗುತ್ತಿದೆ. ಇತ್ತೀಚೆಗೆ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ರೈತರಿಗೆ ಗಿರಿರಾಜಯ ಕೋಳಿ ಮರಿಗಳನ್ನು ವಿತರಿಸಲಾಯಿತು.
ರೈತರು ತಮ್ಮಹತ್ತಿರದ ಪಶುಪಾಲನಾ ಮತ್ತು ಪಶಉವೈದ್ಯ ಸೇವಾ ಇಲಾಖೆಯಲ್ಲಿ ಕೋಳಿ ಮರಳಿಗಳ ವಿತರಣೆ ಕುರಿತು ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು. ಸರ್ಕಾರದ ವತಿಯಿಂದ ಉಚಿತವಾಗಿ ಕೋಳಿ ಮರಿಗಳನ್ನು ನೀಡುತ್ತಿರುವುದರಿಂದ ರೈತ ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬಹುದು.
Yes
I have intrest