ರೈತರು ತಮ್ಮ ಸ್ವಂತ ಭೂಮಿಯಲ್ಲಿ 11ಇ, ಪೋಡಿ ಮತ್ತು ಭೂ ಪರಿವರ್ತನೆಗಾಗಿ ತಾವೇ ನಕ್ಷೆ ತಯಾರಿಸಿಕೊಳ್ಳಲು ಅವಕಾಶ ಕಲ್ಪಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಹೌದು, ಸ್ವಾವಲಂಬಿ ಹೆಸರಿನ ಈ ಆ್ಯಪ್ ಸಹಾಯದಿಂದ ರೈತರು ಆನ್ಲೈನ್ ನಲ್ಲಿಯೇ  ತಮ್ಮ ಜಮೀನಿನ ನಕ್ಷೆಗಾಗಿ ಅರ್ಜಿ ಸಲ್ಲಿಸಬಹುದು.

ರೈತರು 11ಇ ಪೋಡಿ, ಭೂ ಪರಿವರ್ತನೆ, ಹದ್ದುಬಸ್ತು ಹಾಗೂ ಇತರ ನಕ್ಷೆಗಳನ್ನು ಪಡೆಯಲು ಇನ್ನೂ ಮುಂದೆ ಸರ್ವೆ ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ನಕ್ಷೆಯನ್ನು ಅನುಮೋದಿಸಿದ ತಕ್ಷಣ ವೆಬ್ಸೈಟ್ ಲಿಂಕ್ ನಲ್ಲಿ ಅದನ್ನು ಮುದ್ರಿಸಲು ಲಭ್ಯವಿರುತ್ತದೆ. ಅದೇ ಲಿಂಕ್ ನಲ್ಲಿ ಅರ್ಜಿದಾರರು ತಮ್ಮ ಅರ್ಜಿಯ ಸ್ಟೇಟಸ್ ನೋಡಬಹುದು.

ರೈತರು ಸ್ವಾವಲಂಬಿಯ ಆ್ಯಪ್ ಬಳಸು ಆಧಾರ್ ನಂಬರ್ ಹಾಗೂ ಮೊಬೈಲ್ ನಂಬರ್ ಬಳಸಿ ದಾಖಲೆಗಳನ್ನು ಪಡೆಯಬಹುದು. ರಾಜ್ಯ ಸರ್ಕಾರವು ಅಭಿವೃದ್ಧಿಪಡಿಸಿ ಈ ಆ್ಯಪ್ ದೇಶದಲ್ಲಿಯೇ ಮೊದಲವಾಗಿದೆ.  ಕಂದಾಯ ಇಲಾಖೆಯ ಎಲ್ಲಾ ಕೆಲಸಗಳನ್ನು ಸರಳೀಕರಣಗೊಳಿಸುವುದಕ್ಕಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

11 ಇ ನಕ್ಷೆ ಹಾಗೂ ಪೋಡಿ ಮಾಡಲು ಹಿಂದೆ ಬಹಳ ಸಮಯ ತೆಗೆದುಕೊಳ್ಳಲಾಗುತ್ತಿತ್ತು. ಹಿಂದೆ ಸರ್ವೆಯರ್ ಬಂದು ಅಪ್ರೂವಲ್ ಮಾಡಲು ತುಂಬಾ ತಡವಾಗುತ್ತಿತ್ತು. ಆದರೆ ಈಗ ಅವರೇ ಭೂ ಪರಿವರ್ತನೆ ಮಾಡಿಕೊಳ್ಳಬಹುದು. ಸ್ವಾವಲಂಬಿ ಆ್ಯಪ್ ತುಂಬಾ ಸರಳ ಹಾಗೂ ಸುರಕ್ಷಿತವಾಗಿದೆ. ಇದು ನಾಗರಿಕ ಸ್ನೇಹಿ ಯೋಜನೆಯಾಗಿದೆ. ಇದರಿಂದ ಮಧ್ಯವರ್ತಿಗಳಿಗೆ ಕಡಿವಾಣ ಹಾಕಿದಂತಾಗುತ್ತದೆ.

ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ಶುಲ್ಕ ಬೇರೆ ಬೇರೆಯಾಗಿರುತ್ತದೆ. ಈ ಸ್ವಾವಲಂಬಿ ಯೋಜನೆಯಡಿ ಅರ್ಜಿದಾರರು ಸ್ವಯಂ ಘೋಶಣೆ ನಕ್ಷೆ ತಯಾರಿಸಿಕೊಳ್ಳಲು ಪ್ರತಿ ಎಕರೆಗೆ 1200 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಆನ್ಲೈನ್ ನಲ್ಲೇ ಶುಲ್ಕ ಪಾವತಿಸಬಹುದು.

ರೈತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ನಾಗರಿಕರಿಗೆ ಎಲ್ಲಾ ನಕ್ಷೆಗಳು ಸಿಗುತ್ತವೆ. ಒಂದು ವೇಳೆ 15 ದಿನಗಳಲ್ಲಿ ರೈತರು ಸಲ್ಲಿಸಿದ ಅರ್ಜಿಗೆ ಅನುಮೋದನೆ ಸಿಗಲಿಲ್ಲವೆಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ರೈತರು ಆನ್ಲೈನ್ ನಲ್ಲಿ 11ಇ, ಪೋಡಿ ಮತ್ತು ಭೂ ಪರಿವರ್ತನೆಗಾಗಿ ನಕ್ಷೆ ತಯಾರಿಸಿಕೊಳ್ಳಲು ಈ

https://bhoomojini.karnataka.gov.in/Service27/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯ ಸ್ವಾವಲಂಬಿ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ಮೊಬೈಲ್ ನಂಬರ್ ನಮೂದಿಸಿ ಕ್ಯಾಪ್ಚ್ಯಾ ಕೋಡ್ ನಮೂದಿಸಿ ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಮೊಬೈಲ್ ನಂಬರಿಗೆ ಬಂದ ಓಟಿಪಿ ನಮೂದಿಸಿ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ, ಅಲ್ಲಿ ಅರ್ಜಿ ಹೇಗೆ ಸಲ್ಲಿಸಬೇಕೆಂಬುದರ ಕುರಿತು ರೈತರಿಗೆ ಮಾಹಿತಿ ನೀಡಲು ವೀಡಿಯೋಲಿಂಕ್ ಸಹ ಇದೆ. ಸಹಾಯಕ್ಕಾಗಿ ವೀಡಿಯೋವನ್ನು ವೀಕ್ಷಿಸಿ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಹೊಸ ಅರ್ಜಿ ಮೇಲೆ ಕ್ಲಿಕ್ ಮಾಡಬೇಕು. ಆಗ ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಬೇಕು. ಅಲ್ಲಿ ಜಮೀನಿನ ವಿವರಗಳು, ಖರೀದಿದಾರರ ವಿವರಗಳು, ಸಾರಾಂಶ ಮತ್ತುಹಣ ಸಂದಾಯ ಹೀಗೆ ಮೂರು ಆಯ್ಕೆಗಳು ಇರುತ್ತವೆ. ಅರ್ಜಿದಾರರ ವಿವರಗಳು ಪ್ಲಸ್ ಮಾರ್ಕ್ ಮೇಲೆ ಕ್ಲಿಕ್ ಮಾಡಬೇಕು. ಅರ್ಜಿದಾರರ ಹೆಸರು ಪಹಣಿಯಲ್ಲಿ ಇರಬೇಕು. ಹಾಗೂ ಆ ಹೆಸರು ಆಧಾರ್ ಹೆಸರಿನ ಜೊತೆ ತಾಳೆಯಾಗಿರಬೇಕು. ಅಂದರೆ ಆಧಾರ್ ಕಾರ್ಡ್ ಹಾಗೂ ಪಹಣಿಯಲ್ಲಿ ಹೆಸರು ಒಂದೇ ರೀತಿಯಲ್ಲಿರಬೇಕು. ಆಗ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ನಾನೇ ಸ್ಕೆಚ್ ಸಿದ್ದಪಡಿಸಿ ಅಪ್ಲೋಡ್ ಮಾಡುತ್ತೇನೆ, ಭೂಮಾಪನ ಇಲಾಖೆಯಿಂದ ಸಿದದ್ಪಡಿಸಲು ನಾನು ಬಯಸುತ್ತೇನೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ರೈತರ್ ಪೋಡಿ, 11ಇ ನಕ್ಷೆಗೆ ಅರ್ಜಿ ಸಲ್ಲಿಸಲು ಬಯಸಿದ್ದರೆ ನಾನೇ ಸ್ಕೆಚ್ ಸಿದ್ದಡಿಸಿ ಅಪ್ಲೋಡ್ ಮಾಡುತ್ತೇನೆ ಆಯ್ಕೆ ಮಾಡಿಕೊಳ್ಳಬೇಕು.

ಅರ್ಜಿಯ ವಿಧದಲ್ಲಿ ತತ್ಕಾಲ್ ಪೋಡಿ, 11 ಇ ನಕ್ಷೆ ಹಾಗೂ ಭೂ ಪರಿವರ್ತನೆ ಹೀಗೆ ಮೂರು ಆಯ್ಕೆಗಳು ಇರುತ್ತವೆ. ಮೂರರಲ್ಲಿ ಯಾವುದಕ್ಕೆ ಅರ್ಜಿ ಸಲ್ಲಿಸಬಯಸುತ್ತೀರೋ ಅದರ ಮೇಲೆ ಕ್ಲಿಕ್ ಮಾಡಬೇಕು. ಹೆಸರು, ಸಂಬಂಧ, ತಂದೆ ಅಥವಾ ಗಂಡನ ಹೆಸರು, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ವಿಳಾಸ, ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆ ಮಾಡಿಕೊಂಡು ಇನ್ನಿತರ ಮಾಹಿತಿ ಭಱ್ತಿ ಮಾಡಿ ಜಮೀನಿನ ವಿವರಗಳನ್ನು ಭರ್ತಿ ಮಾಡಿ ಅಲ್ಲಿ ಕೇಳಲಾದ ಮಾಹಿತಿ ಭರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Leave a Reply

Your email address will not be published. Required fields are marked *