ಟಿಇಟಿ ಪರೀಕ್ಷೆಗೆ ಅರ್ಜಿ ಆಹ್ವಾನ: ಮಾಹಿತಿ ಇಲ್ಲಿದೆ

Written by By: janajagran

Updated on:

Application invited for TET exam ಶಿಕ್ಷಕರಾಗಲಿಚ್ಚಿಸುವ ಅಭ್ಯರ್ಥಿಗಳಿಗೆ  ಇಲ್ಲಿದೆ ಸಂತಸದ ಸುದ್ದಿ.  ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ  ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ ತಿಂಗಳು 20 ಕೊನೆಯ ದಿವಾಗಿದೆ.

Application invited for TET exam ಟಿಇಟಿ ಪರೀಕ್ಷೆಗೆ ಯಾರು ಅರ್ಜಿ ಎಲ್ಲಿ ಸಲ್ಲಿಸಬೇಕು?

ಒಂದರಿಂದ ಐದನೇ ತರಗತಿ ಶಿಕ್ಷಕರಾಗಲು ಟಿಇಟಿಗೆ ಅರ್ಜಿ ಸಲ್ಲಿಸುವವರು ಪಿಯುಸಿ ಹಾಗೂ ಡಿಇಡಿ ಉತ್ತೀರ್ಣರಾಗಿರಬೇಕು. 6 ರಿಂದ 8ನೇ ತರಗತಿಗೆ ಶಿಕ್ಷಕರಾಗಲು ಅರ್ಜಿ ಸಲ್ಲಿಸುವವರು ಪದವಿ ಮತ್ತು ಬಿಇಡಿ ಅಥವಾ ಪಾಸಾಗಿರಬೇಕು. ಕೊನೆಡಯ ವರ್ಷಗಳ ಡಿಇಡಿ,ಬಿಇಡಿ/ಬಿಎಸ್ಸಿ ಬಿಇಡಿ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷೆಯಲ್ಲಿರುವವರೂ ಸಹ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲಿಚ್ಚಿಸುವವರು http://www.schooleducation.kar.nic.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇದೇ ತಿಂಗಳು 20 ಆಗಿದ್ದು, ಆನ್ ಲೈನ್ ಮೂಲಕವೇ ನಿಗದಿಪಡಿಸಿದ ಶುಲ್ಕ ಪಾವತಿಸಬೇಕು. ಆಗಸ್ಟ್ 22 ರಂದು ಬೆಳಗ್ಗೆ 9.30 ರಿಂದ 12ರವರೆಗೆ ಮತ್ತು ಮಧ್ಯಾಹ್ನ 2 ರಿಂದ 4.30ರವರೆಗೆ ಪರೀಕ್ಷೆಗಳು ನಡೆಯಲಿವೆ. ಪತ್ರಿಕೆ 150 ಅಂಕಗಳನ್ನು ಹೊಂದಿರುತ್ತದೆ. ಪ್ರವೇಶ ಪತ್ರಗಳನ್ನು ಆಗಸ್ಟ್ 12 ರಿಂದ ಆನ್ ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.

ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರ ಜೀವಾತಾವಧಿಯವರಿಗೆ ಮಾನ್ಯತೆ ಹೊಂದಿರುತ್ತದೆ. ಒಮ್ಮೆ ಅರ್ಹತೆ ಪಡೆದವರು ಮತ್ತೆ ಮತ್ತೆ ಪರೀಕ್ಷೆ ಬರೆಯುವ ಅವಶ್ಯಕತೆಯಿಲ್ಲ. ಒಂದು ವೇಳೆ ಹೆಚ್ಚು ಅಂಕ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಮಾತ್ರ ಮತ್ತೆ ಪರೀಕ್ಷೆ ಬರೆಯಬಹುದು.

ಇದನ್ನೂಓದಿ ಹಸಿರು ಪಟ್ಟಿಯಲ್ಲಿದ್ದರೂ ಸಾಲ ಮನ್ನಾಏಕಾಗಿಲ್ಲಾ? ಇಲ್ಲಿದೆ ಮಾಹಿತಿ

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಗಳಿದ್ದರೆ 080-22483140, 080-22228805, 080-22481345 ಗೆ ಸಂಪರ್ಕಿಸಬಹುದು.

ಅಭ್ಯರ್ಥಿಯು ಇತ್ತೀಚಿನ ಭಾವಚಿತ್ರ, ಮತ್ತು ಸಹಿ ಅಪ್ಲೋಡ್ ಮಾಡಬೇಕು. ಅಂಗವಿಕಲ ಕೋಟಾದಡಿ ವಿನಾಯಿತಿ ಬಯಸಿದಲ್ಲಿ ಪಿಎಚ್ ಪ್ರಮಾಣದಪತ್ರ ಅಪ್ಲೋಡ್ ಮಾಡಬೇಕು. ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರಹೊಂದಿರಬೇಕು.

ಶುಲ್ಕ- ಸಾಮಾನ್ಯವರ್ಗ, 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ಪತ್ರಿಕೆ 1ಕ್ಕೆ 700 ರೂಪಾಯಿ ಪತ್ರಿಕೆ 1 ಹಾಗೂ ಪತ್ರಿಕೆ 2ಕ್ಕೆ ಸೇರಿ 1000 ರೂಪಾಯಿ ಪಾವತಿಸಬೇಕು. ಪಜಾ,ಪ.ವರ್ಗ, ದವರಿಗೆ ಪತ್ರಿಕೆ -1ಕ್ಕೆ 350 ರೂಪಾಯಿ ಪತ್ರಿಕೆ 1 ಮತ್ತು 2 ಸೇರಿ 500 ರೂಪಾಯಿ ಇರುತ್ತದೆ.  ಎಲ್ಲಾ ಬ್ಯಾಂಕುಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೇಡಿಟ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ, ದಾಖಲಾತಿಗಳು, ಅಂಕಗಳು, ಪರೀಕ್ಷೆ ಪಠ್ಯಕ್ರಮ ಸೇರಿದಂತೆ  ಇನ್ನಿತರ ಮಾಹಿತಿಗಾಗಿ http://www.schooleducation.kar.nic.in/cacellpdfs/KARTET2018/KARTETNOT2021_KANNADA_01072021.pdf

ಲಿಂಕ್ ಮೇಲೆ ಕ್ಲಿಕ್ ಮಾಡಬಹುದು. ಪರೀಕ್ಷೆಯ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ.  ಅರ್ಹತಾ ಪ್ರಮಾಣ ಪತ್ರವನ್ನು ಆನ್ಲೈನ್ ಮೂಲಕ ನೋಂದಣಿ ಸಂಖ್ಯೆ ಹಾಗೂ ಜನ್ಮದಿನಾಂಕ ನಮೂದಿಸಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಇತನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ

Leave a Comment